ರೈತ ರತ್ನ ಮಂಜುನಾಥ ರಂಗಪ್ಪ ಗುರಡ್ಡಿ
ವಿಭಾಗ: ಹೈನುಗಾರಿಕೆ
ಊರು, ಜಿಲ್ಲೆ: ರಬಕವಿ ಗ್ರಾಮ, ಬೀಳಗಿ ತಾಲೂಕು, ಬಾಗಲಕೋಟೆ ಜಿಲ್ಲೆ

ಸ್ವಲ್ಪವೂ ಜಮೀನು ಇಲ್ಲ, ಆದರೆ, ಹೈನುಗಾರಿಕೆ ಮಾಡಬೇಕು, ಅದರಲ್ಲಿ ಯಶಸ್ಸು ಸಾಧಿಸಬೇಕು ಎನ್ನುವುದು ಮಂಜುನಾಥ ರಂಗಪ್ಪ ಗುರಡ್ಡಿ ಅವರ ಗುರಿಯಾಗಿತ್ತು. ಹೀಗಾಗಿ 2004ರಂದು ಒಂದೇ ಒಂದು ಹಸುವನ್ನು ಕಟ್ಟಿಕೊಂಡು ಹೈನುಗಾರಿಕೆ ಆರಂಭಿಸಿದರು. ಇದೀಗ 12 ಹಸುಗಳನ್ನು ಕಟ್ಟಿಕೊಂಡು ಲಾಭದಾಯಕ ಹೈನುಗಾರಿಕೆ ಮಾಡುತ್ತಿದ್ದಾರೆ. ಇದರಲ್ಲಿ ಬೇರೆ ಬೇರೆ ತಳಿಯ ಆಕಳುಗಳು ಇವೆ.

ಪ್ರತಿ ದಿನ 60 ರಿಂದ 65 ಲೀ. ಹಾಲು ಉತ್ಪಾದಿಸುತ್ತಿದ್ದು, ದಿನಕ್ಕೆ ₹1500 ರಿಂದ ₹1600 ಆದಾಯ ಗಳಿಸುತ್ತಿದ್ದಾರೆ. ಅಂದರೆ, ತಿಂಗಳಿಗೆ ಹಾಲಿನಿಂದ ₹45000 ಆದಾಯ ಬರುತ್ತಿದೆ. ಗೊಬ್ಬರ ಮಾರಾಟದಿಂದ ವರ್ಷಕ್ಕೆ 1 ಲಕ್ಷ ಆದಾಯ ಬರುತ್ತಿದೆ.

ಪಿಯುಸಿ ಫೇಲ್ ಆದ ಹುಡುಗ : ಕೃಷಿಯಲ್ಲಿ ಪ್ರಯೋಗಗಳ ಮೂಲಕಲೇ ಯಶಸ್ಸು ಕಂಡ

ಒಟ್ಟಾರೆ ವರ್ಷಕ್ಕೆ ₹5 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಹೈನುಗಾರಿಕೆಯಿಂದ ಗಳಿಸುತ್ತಿದ್ದಾರೆ. ಹಸುಗಳಿಗೆ ಕಬ್ಬಿನ ಸೋಗೆಯಿಂದ ರಸಮೇವು ತಯಾರಿಸಿ ಆಹಾರವಾಗಿ ನೀಡುತ್ತಿದ್ದಾರೆ. ಕುಟುಂಬದ ಸದಸ್ಯರೆಲ್ಲ ಹಸುಗಳ ನಿರ್ವಹಣೆ ಮಾಡುವುದರಿಂದ ಕೂಲಿ ಆಳುಗಳ ಅವಲಂಬನೆ ಇಲ್ಲ.

ಸಾಧನೆಯ ವಿವರ:

ಒಂದೇ ಒಂದು ಹಸುವನ್ನು ಕಟ್ಟಿಕೊಂಡು ಹೈನುಗಾರಿಕೆ ಆರಂಭ, ಇದೀಗ ಬೇರೆ ಬೇರೆ ತಳಿಯ 12 ಹಸುಗಳನ್ನು ಸಾಕುತ್ತಿದ್ದು, ₹5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಸ್ವಲ್ಪವೂ ಜಮೀನು ಇಲ್ಲದೇ ಯಶಸ್ವಿಯಾಗಿ ಹೈನುಗಾರಿಕೆ ಮಾಡಿರುವುದು ಸಾಧನೆಯೇ ಆಗಿದೆ.

ಗಮನಾರ್ಹ ಅಂಶ:

  • ಸ್ವಲ್ಪವೂ ಭೂಮಿ ಇಲ್ಲ, ಆದರೂ ಛಲ ಬಿಡದೇ ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.
  • ಬೇರೆಯವರ ಜಮೀನಿನಲ್ಲಿ ಸಿಕ್ಕ ಕಬ್ಬಿನ ಸೋಗೆಯಿಂದ ರಸಮೇವು ತಯಾರಿಸುತ್ತಿರುವುದು