ನವದೆಹಲಿ (ಮಾ.1): ಕಳೆದ ವರ್ಷದಿಂದ ಇಡೀ ವಿಶ್ವವನ್ನೇ ಕಂಗೆಡಿಸಿದ ಕೊರೋನಾ ವೈರಸ್ ಎಂಬ ರೋಗಾಣು ವಿರುದ್ಧ ಭಾರತದ ಹೋರಾಟ ಭರದಿಂದ ಸಾಗಿದ್ದು, ಇಂದಿನಿಂದ ಮೂರನೇ ಹಂತದ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೊದಲ ಹಂತದ ಲಸಿಕೆ ಪಡೆದರು. ಕೇರಳ ಮೂಲದ ಸಿಸ್ಟರ್ ರೋಸಮ್ಮ ಅನಿಲ್ ಭಾರತ್ ಬಯೋಟೆಕ್ ತಯಾರಿಸಿದ ಕೋವ್ಯಾಕ್ಸಿನ್ ಅನ್ನು ಮೋದಿಗೆ ನೀಡಿದರು. ಪುದುಚೆರಿ ಮೂಲದ ನರ್ಸ್ ಪಿ. ನಿವೇದಾ ರೋಸಮ್ಮ ಅವರಿಗೆ ಸಾತ್ ನೀಡಿದರು.

"

ಲಸಿಕೆ ಪಡೆದ ಫೋಟೋ ಟ್ವೀಟ್ ಮಾಡಿರುವ ಮೋದಿ, ಭಾರತೀಯ ವಿಜ್ಞಾನಿಗಳು ಹಾಗೂ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಮೂರನೇ ಹಂತದ ಅಭಿಯಾನದಲ್ಲಿ ಸಲಿಕೆ ಪಡೆಯಲು ಯಾರು ಅರ್ಹರೋ ಅವರು ಮೊದಲು ಲಸಿಕೆ ಪಡೆಯುವಂತೆ ಪ್ರಧಾನಿ ಜನರನ್ನು ಆಗ್ರಹಿಸಿದ್ದಾರೆ. ಭಾರತವನ್ನು ಕೋವಿಡ್-19ರಿಂದ ಮುಕ್ತಗೊಳಿಸುವಂತೆ ಕರೆ ನೀಡಿದ್ದಾರೆ. ಆ ಮೂಲಕ ದೇಶಾದ್ಯಂತ 3ನೇ ಹಂತದ ಲಸಿಕಾ ಅಭಿಯಾನ ನಡೆಯಲಿದ್ದು, ಮೋದಿ ಮೂಲಕ ಚಾಲನೆ ಸಿಕ್ಕಂತಾಗಿದೆ. 

"

 

 

‘ಕೋ-ವಿನ್‌ 2.0’ ಆ್ಯಪ್‌/ವೆಬ್‌ ಪೋರ್ಟಲ್‌ ಅಥವಾ ಆರೋಗ್ಯ ಸೇತು ಆ್ಯಪ್‌ನಲ್ಲಿ ಲಸಿಕೆ ಪಡೆಯುವವರು ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದರ ಮೂಲಕ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದವರು ಲಸಿಕಾ ಕೇಂದ್ರಕ್ಕೇ ಹೋಗಿ (ವಾಕ್‌ ಇನ್‌) ಹೆಸರು ನೋಂದಾಯಿಸಿಕೊಳ್ಳಬೇಕು. 

ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ಮಾರ್ಗದರ್ಶಿ

60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಪೂರ್ವ ರೋಗ ಪೀಡಿತರು ಲಸಿಕೆಗೆ ಅರ್ಹರಾಗಿದ್ದು, ಅವರು ಲಸಿಕೆ ಪಡೆಯಲು ತಮಗೆ ಇಷ್ಟವಾದ ಸ್ಥಳ ಹಾಗೂ ಸಮಯವನ್ನು ‘ಕೋ-ವಿನ್‌ 2.0’ ಆ್ಯಪ್‌ ಅಥವಾ www.cowin.gov.in ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆರೋಗ್ಯ ಸೇತು ಆ್ಯಪ್‌ನಲ್ಲೂ ಲಸಿಕೆ ನೋಂದಣಿ ಮಾಡಿಕೊಳ್ಳುವ ಹೊಸ ಅವಕಾಶ ಸೃಷ್ಟಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

ಯಾವ ಪೂರ್ವರೋಗಗಳನ್ನು ಹೊಂದಿದವರು ಲಸಿಕೆ ಪಡೆಯಬಹುದು ಎಂಬ ವಿವರವನ್ನು ಶನಿವಾರವೇ ಸರ್ಕಾರ ಪ್ರಕಟಿಸಿತ್ತು. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳೆರೆಡರಲ್ಲೂ ಲಸಿಕೆ ಲಭಿಸಲಿದೆ.

ನೋಂದಣಿ ಹೇಗೆ?:

"
ಕೋ ವಿನ್‌ 2.0 ಆ್ಯಪ್‌/ವೆಬ್‌ ಪೋರ್ಟಲ್‌ ಹಾಗೂ ಆರೋಗ್ಯ ಸೇತು ಆ್ಯಪ್‌ ಮೂಲಕ ಬೆಳಗ್ಗೆ 9 ಗಂಟೆಗೆ ನೋಂದಣಿ ಆರಂಭವಾಗಿ ಮಧ್ಯಾಹ್ನ 3 ಗಂಟೆಗೆ ಮುಗಿಯಲಿದೆ. ಮಾ.1ರಂದೇ ಮೊದಲ ಡೋಸ್‌ ಲಸಿಕೆ ಬೇಕು ಎಂದರೆ ನೋಂದಣಿ ಮಾಡಿಕೊಳ್ಳಬಹುದು. ಆದರೆ ಅದು ಲಸಿಕೆಯ ಲಭ್ಯತೆ ಮೇಲೆ ಅವಲಂಬಿತವಾಗಿರುತ್ತದೆ. ಮಾ.1ರಂದು ಬುಕ್‌ ಮಾಡುವವರು ತಮಗೆ ಬೇಕಾದ ದಿನಾಂಕ ಹಾಗೂ ಸ್ಥಳ ಆಯ್ಕೆ ಮಾಡಿಕೊಳ್ಳಬಹುದು.

ಕೋವಿಡ್ ಲಸಿಕೆಗೆ ಸಂಬಂಧಿಸಿದ  ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನು 2ನೇ ಡೋಸ್‌ ಅನ್ನು ಮೊದಲ ಡೋಸ್‌ ನೀಡಿದ 29ನೇ ದಿನದಂದು ನೀಡಲಾಗುತ್ತದೆ. ಮೊದಲ ಡೋಸ್‌ ನೀಡಲಾದ ಸ್ಥಳದಲ್ಲೇ 2ನೇ ಡೋಸ್‌ ನೀಡಲಾಗುತ್ತದೆ. ಮೊದಲ ಡೋಸ್‌ ಬುಕ್ಕಿಂಗ್‌ ವೇಳೆ 2ನೇ ಡೋಸ್‌ ಬುಕ್ಕಿಂಗ್‌ ಕೂಡ ಆಗುತ್ತದೆ.

ನೋಂದಣಿ ವೇಳೆ ಮೊಬೈಲ್‌ ನಂಬರ್‌ ನೀಡಬೇಕು. ಒಂದು ಮೊಬೈಲ್‌ ನಂಬರ್‌ನಿಂದ 4 ಫಲಾನುಭವಿಗಳ ಹೆಸರು ನೋಂದಾಯಿಸಬಹುದು. ಆಧಾರ್‌/ವೋಟರ್‌ ಐಡಿ/ಪಾಸ್‌ಪೋರ್ಟ್‌/ ಡ್ರೈವಿಂಗ್‌ ಲೈಸೆನ್ಸ್‌, ಪಾನ್‌ ಕಾರ್ಡ್‌, ಎನ್‌ಪಿಆರ್‌ ಸ್ಮಾರ್ಟ್‌ ಕಾರ್ಡ್‌ ಅಥವಾ ಫೋಟೋ ಸಮೇತ ಪಂಚಣಿ ದಾಖಲೆ- ಇವುಗಳನ್ನು ಕೊಡಬೇಕು.

ಕರ್ನಾಟಕದಲ್ಲಿ ನೋಂದಣಿ ಮಾಡಿಕೊಳ್ಳುವ ಆಸ್ಪತ್ರೆಗಳು: