ಹಿರಿಯ ನಾಗರೀಕರಿಗೆ ಕೋವಿಡ್ ಚುಚ್ಚುಮದ್ದು ಮಾರ್ಗದರ್ಶಿ!

ಆ ದಿನ ಬಂದೇ ಬಿಟ್ಟಿತು. ಅರುವತ್ತು ಮೀರಿದವರಿಗೆ, 45 ದಾಟಿದವರಿಗೆ ಕೋವಿಡ್ ಚುಚ್ಚುಮದ್ದು ಒದಗಿಸುವ ಕೈಂಕರ್ಯಕ್ಕೆ ಕೇಂದ್ರ ಸರಕಾರ ಸಜ್ಜಾಗಿದೆ. ವ್ಯಾಕ್ಸಿನ್ ಎಲ್ಲಿ ಹಾಕಿಸಿಕೊಳ್ಳಬೇಕು? ಯಾರು ಕೊಡುತ್ತಾರೆ, ಹೇಗೆ? ಎಂತು? ಇದು ಸುವರ್ಣ ಸುದ್ದಿ ಕೈಪಿಡಿ

Seniors 45 with co morbidities now can pick Covid vaccination site Govt ckm

ಬೆಂಗಳೂರು(ಫೆ.28): ಕೊರೋನಾ ವೈರಸ್ ವಿರುದ್ಧ ಶಕ್ತವಾಗಿ ಹೋರಾಡುತ್ತಿರುವ ಭಾರತ, ಜನವರಿ 16 ರಿಂದ ಲಸಿಕೆ ಅಭಿಯಾನ ಆರಂಭಿಸಿದೆ. ಇದೀಗ ಮಾರ್ಚ್ 1 ರಿಂದ 2ನೇ ಹಂತದ ಲಸಿಕೆ ವಿತರಣೆ ಆರಂಭಗೊಳ್ಳುತ್ತಿದೆ. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. 

 ಮಾ.1 ರಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಲಭ್ಯ; ಬೆಲೆ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

ಮಾರ್ಚ್ 1 ರಿಂದ 2ನೇ ಹಂತದ ಕೊರೋನಾ ಲಸಿತೆ ವಿತರಣೆ ನೋಂದಣಿ ಕಾರ್ಯಗಳು ಆರಂಭಗೊಳ್ಳಲಿದೆ. ಬೆಳಗ್ಗೆ 9 ಗಂಟೆಗೆ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸರ್ಕಾರ ನೀಡುತ್ತಿರುವ ಕೊರೋನಾ ಲಸಿಕೆ ಪಡೆಯುವುದು ಹೇಗೆ? ರಿಜಿಸ್ಟ್ರೇಶನ್ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ.

1) 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಲಾಗುತ್ತದೆ

2) ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ರಿಂದ 59 ವರ್ಷದವರಿಗೂ ಲಸಿಕೆ ಸಿಗಲಿದೆ

ಹಿರಿಯ ನಾಗರೀಕರು ಕೊರೋನಾ ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಪ್ರಕ್ರಿಯೆ ಹೇಗೆ?

  • ಕೋ ವಿನ್ ಆ್ಯಪ್, ಆರೋಗ್ಯ ಸೇತು ಆ್ಯಪ್ ಮೂಲಕ ಅಥವಾ cowin.gov.in ಸರ್ಕಾರದ ಅಧೀಕೃತ ಸೈಟ್ ಮೂಲಕ ಲಾಗಿನ್ ಆಗಬೇಕು
  • ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ
  • ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ(OTP)ನಮೂದಿಸಿ ಖಾತೆ ತೆರೆಯಿರಿ
  • ನಿಮ್ಮ ಹೆಸರು, ವಯಸ್ಸು, ಲಿಂಗವನ್ನು ಭರ್ತಿ ಮಾಡಿ ಹಾಗೂ ಗುರುತಿನ ಚೀಟಿ ದಾಖಲೆ ಪತ್ರವನ್ನು ಅಪ್‌ಲೋಡ್ ಮಾಡಬೇಕು
  • 45 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನಿಮ್ಮ ಆರೋಗ್ಯ ಸಮಸ್ಯೆ ಕುರಿತು ವೈದ್ಯರು ನೀಡಿದ ಸರ್ಟಿಫಿಕೇಟ್ ಅಪ್‌ಲೋಡ್ ಮಾಡಬೇಕು
  • ಲಸಿಕಾ ಕೇಂದ್ರ ಹಾಗೂ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬೇಕು
  • ಒಂದು ಮೊಬೈಲ್ ನಂಬರ್‌ನಿಂದ ಲಸಿಕೆ ಪಡೆಯಲು ನಾಲ್ಕು  ಅಪಾಯಿಂಟ್‌ಮೆಂಟ್ ಮಾಡಿಕೊಳ್ಳಬಹುದು

ಆನ್‌ಲೈನ್ ಮೂಲಕ ನೋಂದಣಿ ಕಷ್ಟ ಆಗುವ ಹಿರಿಯ ನಾಗರೀಕರಿಗೆ ಇನ್ನೆರಡು ವಿಧಾನದಲ್ಲಿ ಲಸಿಕೆ ರಿಜಿಸ್ಟ್ರೇಶನ್ ಪಡೆಯಲು ಅವಕಾಶವಿದೆ

  • ಹಿರಿಯ ನಾಗರೀಕರು ನೇರವಾಗಿ ಸರ್ಕಾರಿ ಆರೋಗ್ಯ ಕೇಂದ್ರ, ಲಸಿಕಾ ಕೇಂದ್ರಕ್ಕೆ ತೆರಳಿ ತಮ್ಮ ದಾಖಲೆ ಪತ್ರಗಳನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಬುಹುದು.
  • 1507 ನಂಬರ್‌ಗೆ ಕರೆ ಮಾಡಿ ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದು.
Latest Videos
Follow Us:
Download App:
  • android
  • ios