Asianet Suvarna News Asianet Suvarna News

ಸೋಮಾಲಿಯಾ ಕಡಲ್ಗಳ್ಳರಿಂದ 23 ಪಾಕಿಸ್ತಾನಿ ಮೀನುಗಾರರನ್ನು ರಕ್ಷಿಸಿದ ಭಾರತೀಯ ನೌಕಾಸೇನೆ!

23 Pakistani Fishermen Rescued From Somali Pirates ಭಾರತೀಯ ನೌಕಾಪಡೆಯ ಐಎನ್‌ಎಸ್‌ ಸುಮೇಧಾ ಹಾಗೂ ತ್ರಿಶೂಲ್‌ ಕ್ಷಿಪಣಿ ಯುದ್ಧನೌಕೆ ಬಳಸಿಕೊಂಡು  ಎಫ್‌ವಿ ಅಲ್-ಕಂಬಾರ್ ಅನ್ನು ಅಪಹರಿಸಿದ ಕಡಲ್ಗಳ್ಳರನ್ನು ಶರಣಾಗುವಂತೆ ಒತ್ತಾಯಿಸಿತು ಮತ್ತು 23 ಪಾಕಿಸ್ತಾನಿ ಮೀನುಗಾರರನ್ನು ರಕ್ಷಿಸಿತು.
 

Indian Navy In Arabian Sea 23 Pakistani Fishermen Rescued From Somali Pirates san
Author
First Published Mar 30, 2024, 10:57 AM IST

ನವದೆಹಲಿ (ಮಾ.30): ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ 12 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಸೊಮಾಲಿ ಕಡಲ್ಗಳ್ಳರಿಂದ ಕನಿಷ್ಠ 23 ಪಾಕಿಸ್ತಾನಿ ಮೀನುಗಾರರನ್ನು ರಕ್ಷನೆ ಮಾಡಿದೆ. 'ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸಿಜರ್‌ ಸಿಕ್ಕ ಬಳಿಕ 12 ಗಂಟೆಗಳ ಕಾಲ ನಡೆದ ಯುದ್ಧತಂತ್ರಗಳ ಕಾರ್ಯಾಚರಣೆಯಲ್ಲಿ,  ಅಪಹರಿಸಿದ ಎಫ್‌ವಿಯಲ್ಲಿದ್ದ ಕಡಲ್ಗಳ್ಳರನ್ನು ಶರಣಾಗುವಂತೆ ಒತ್ತಾಯಿಸಲಾಯಿತು. 23 ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ. ಮಾರ್ಚ್ 29 ರ ಮುಂಜಾನೆ ರಕ್ಷಣಾ ಕಾರ್ಯಾಚರಣೆಯು ನಡೆದಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್‌ ಸುಮೇಧಾ ಅಪಹರಣಕ್ಕೊಳಗಾದ ಎಫ್‌ಇ ಅಲ್-ಕಂಬಾರ್ ಹಡಗನ್ನು ತಡೆಹಿಡಿದರೆ,  ಕ್ಷಿಪಣಿ ಯುದ್ಧನೌಕೆ ಐಎನ್‌ಎಸ್‌ ತ್ರಿಶೂಲ್ ಶೀಘ್ರದಲ್ಲೇ ಕಾರ್ಯಾಚರಣೆಗೆ ಸೇರಿಕೊಂಡಿತು.

ಭಾರತೀಯ ನೌಕಾಪಡೆಯು ಯಾವುದೇ ರಕ್ತಪಾತವಿಲ್ಲದೆ, ಸೋಮಾಲಿ ಕಡಲ್ಗಳ್ಳರನ್ನು ಶರಣಾಗುವಂತೆ ಮಾಡಿದೆ. ಭಾರತೀಯ ನೌಕಾಪಡೆಯು ಕಡಲ್ಗಳ್ಳರನ್ನು ಯಾವುದೇ ರಕ್ತಪಾತವಿಲ್ಲದೆ ಶರಣಾಗುವಂತೆ ಮಾಡಿದ ಎರಡನೇ ಕಾರ್ಯಾಚರಣೆ ಇದಾಗಿದೆ. ಈ ತಿಂಗಳ ಆರಂಭದಲ್ಲಿ, ಭಾರತೀಯ ನೌಕಾಪಡೆಯು 30 ಸೋಮಾಲಿಯನ್ ಕಡಲ್ಗಳ್ಳರನ್ನು ಶರಣಾಗುವಂತೆ ಮಾಡಿತ್ತು. ಈ ಹಂತದಲ್ಲಿ ಯಾವುದೇ ಗುಂಡಿನ ಚಕಮಕಿ ಅಥವಾ ರಕ್ತಪಾತವಿಲ್ಲದೆ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.  ಐಎನ್‌ಎಸ್‌ ಕೋಲ್ಕತ್ತಾ ಎಲ್ಲಾ 35 ಕಡಲ್ಗಳ್ಳರನ್ನು ಶರಣಾಗುವಂತೆ ಮಾಡಿದೆ ಮತ್ತು ಕಡಲ್ಗಳ್ಳರು ತಮ್ಮದೇ ಹಡಗು ಎನ್ನುವಂತೆ ಬಳಸುತ್ತಿದ್ದ ವ್ಯಾಪಾರಿ ಹಡಗಿನಿಂದ 17 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು.

ಅರಬ್ಬಿ ಸಮುದ್ರದಲ್ಲಿ ಇರಾನ್ ಮೀನುಗಾರಿಕಾ ಹಡಗಿನ ಮೇಲೆ ನಡೆದ ಕಡಲ್ಗಳ್ಳರ ದಾಳಿಗೆ ಭಾರತೀಯ ನೌಕಾಪಡೆ ಶುಕ್ರವಾರ ಪ್ರತ್ಯುತ್ತರ ನೀಡಿದೆ. ಇರಾನಿನ ಮೀನುಗಾರಿಕಾ ಹಡಗಿನಲ್ಲಿ ಕಡಲ್ಗಳ್ಳತನ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಅಪಹರಣಕ್ಕೊಳಗಾದ ಹಡಗನ್ನು ಪ್ರತಿಬಂಧಿಸಲು ಎರಡು ನೌಕಾ ಹಡಗುಗಳನ್ನು ಆ ಕಡೆಗೆ ತಿರುಗಿಸಲಾಗಿತ್ತು. ಘಟನೆಯ ಸಮಯದಲ್ಲಿ, ಇರಾನಿನ ಮೀನುಗಾರಿಕಾ ಹಡಗು ಸೊಕೊಟ್ರಾದಿಂದ ಸುಮಾರು 90 ನಾಟಿಕಲ್ ಮೈಲುಗಳಷ್ಟು ನೈಋತ್ಯದಲ್ಲಿತ್ತು ಮತ್ತು ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರು ಮೀನುಗಾರಿಕಾ ಹಡಗನ್ನು ಹತ್ತಿದ್ದರು.

ಭಾರತಕ್ಕೆ ರಾಜತಾಂತ್ರಿಕ ಗೆಲುವು, ನೌಕಾಸೇನೆ ಮಾಜಿ ಅಧಿಕಾರಿಗಳ ಗಲ್ಲುಶಿಕ್ಷೆ ರದ್ದುಗೊಳಿಸಿದ ಕತಾರ್!

"ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ಕಡಲ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನೌಕಾಯಾತ್ರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ" ಎಂದು ಭಾರತೀಯ ನೌಕಾಪಡೆಯು ತಿಳಿಸಿದೆ. ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಒಆರ್) ಕಡಲ್ಗಳ್ಳತನವನ್ನು ತಡೆಯಲು ಭಾರತೀಯ ನೌಕಾಪಡೆ ಹಲವಾರು ಕಾರ್ಯಾಚರಣೆಗಳನ್ನು ನಡೆಸಿದೆ.

ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ನೌಕಾಸೇನೆಯ ಮಾಜಿ ಅಧಿಕಾರಿಗಳ ರಕ್ಷಿಸಲು ಭಾರತದ ಮಹತ್ವದ ಕ್ರಮ!

ಈ ವರ್ಷದ ಆರಂಭದಲ್ಲಿ ಭಾರತೀಯ ನೌಕಾಪಡೆಯು ಗಲ್ಫ್ ಆಫ್ ಅಡೆನ್‌ನಿಂದ ಬಂದ ಇದೇ ರೀತಿಯ ಕರೆಗೆ ಸ್ಪಂದಿಸಿತ್ತು. ಅಲ್ಲಿ ಕ್ಷಿಪಣಿಯಿಂದ ಹೊಡೆದ ನಂತರ ವ್ಯಾಪಾರಿ ಹಡಗನ್ನು ಸುಟ್ಟುಹಾಕಲಾಯಿತು. ನೌಕಾಪಡೆಯು 21 ಸಿಬ್ಬಂದಿಯನ್ನು ರಕ್ಷಿಸಿತು, ಅದರಲ್ಲಿ ಒಬ್ಬ ಭಾರತೀಯ ಪ್ರಜೆಯೂ ಇದ್ದರು.

Follow Us:
Download App:
  • android
  • ios