Asianet Suvarna News Asianet Suvarna News

Rafale For Navy: ಅಣ್ವಸ್ತ್ರ ಸಾಮರ್ಥ್ಯದ ರಫೇಲ್-ಎಂ ಯಶಸ್ವಿ ಪರೀಕ್ಷೆ!

ರಫೇಲ್ ಯುದ್ಧವಿಮಾನದ ನೌಕಾಸೇನೆಯ ಆವೃತ್ತಿ ರಫೇಲ್-ಎಂ
ವಾಯುಪಡೆಯ ರಫೇಲ್ ವಿಮಾನಕ್ಕಿಂತ ಸಣ್ಣ ವ್ಯತ್ಯಾಸಗಳನ್ನು ಹೊಂದಿದೆ
ಗೋವಾದಲ್ಲಿ ಐಎನ್ಎಸ್ ಹಂನ್ಸಾ ನೌಕೆಯ ಮೂಲಕ ಪರೀಕ್ಷೆ
 

Indian Navy Conducts Flight Test Nuclear capable  Rafale Marine Fighter Aircraft in Goa san
Author
Bengaluru, First Published Jan 7, 2022, 12:37 PM IST

ಪಣಜಿ (ಜ.7): ಯುದ್ಧವಿಮಾನಗಳನ್ನು ಹೊತ್ತೊಯ್ಯಬಲ್ಲ ನೌಕಾಸೇನೆಯ ಯುದ್ಧಹಡಗು (aircraft carrier) ಐಎನ್ಎಸ್ ವಿಕ್ರಮಾದಿತ್ಯ (INS Vikramaditya) ಬಲವರ್ಧನೆಗಾಗಿ ಭಾರತವು, ನೌಕಾಸೇನೆಗೆ ಸೇರ್ಪಡೆಯಾಗಲಿರುವ ರಫೇಲ್-ಎಂ (ರಫೇಲ್-ಮರೀನ್) (Rafale-Marine)ಯುದ್ಧವಿಮಾನವನ್ನು ಗೋವಾದಲ್ಲಿ (Goa) ಪರೀಕ್ಷೆ ನಡೆಸಿತು. ವಾಯುಪಡೆಗೆ (Air Force) ಸೇರ್ಪಡೆಯಾಗಿರುವ ರಫೇಲ್ (Rafale) ಯುದ್ಧವಿಮಾನಕ್ಕಿಂತ ಸ್ವಲ್ಪ ಭಿನ್ನವಾಗಿರುವ ಡಸಾಲ್ಟ್ ನಿರ್ಮಿತ ರಫೇಲ್-ಎಂ (Rafale-M) ಜೆಟ್ ಅನ್ನು ಭಾರತ ಐಎನ್ಎಸ್ ವಿಕ್ರಮಾದಿತ್ಯದ ಜೊತೆಗೆ ಐಎನ್ಎಸ್ ವಿಕ್ರಾಂತ್ (INS Vikrant)ಹೆಸರಲ್ಲಿ ಸೇರ್ಪಡೆಯಾಗಲಿರುವ ಸ್ವದೇಶಿ ಯುದ್ಧವಿಮಾನ ವಾಹಕ ನೌಕೆ-1 (ಐಎಸಿ-1) ಅಲ್ಲಿ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪರೀಕ್ಷೆ ಮಾಡಲಾಗಿದೆ. ಗೋವಾದಲ್ಲಿ ಐಎನ್ಎಸ್ ಹನ್ಸಾ (INS Hansa ) ಮೂಲಕ ಈ ಯುದ್ಧವಿಮಾನದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪರೀಕ್ಷೆಗಾಗಿ ಗುರುವಾರ ಗೋವಾಕ್ಕೆ ಆಗಮಿಸಿದ್ದ ಯುದ್ಧವಿಮಾನವು ಕಡಲತೀರ ಆಧಾರಿತ ಪರೀಕ್ಷೆಯಲ್ಲಿ ಪಾಲ್ಗೊಂಡಿದೆ. ರಫೇಲ್ ಎಂ ಅಲ್ಲದೆ, ಅಮೆರಿಕದ ಎಫ್ 18 ಹಾರ್ನೆಟ್, ರಷ್ಯಾದ ಮಿಗ್-29ಕೆ (MIG-29K) ಹಾಗೂ ಸ್ವೀಡನ್ ನ ಗ್ರಿಪಿನ್ (Gripen) ಭಾರತೀಯ ನೌಕಾಪಡೆಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದೆ.

ರಫೇಲ್-ಎಂ ಜೆಟ್ (Rafale-M) ರಫೇಲ್‌ನ ಎಫ್4 (F4)  ಸಮಾನ ಗುಣಮಟ್ಟದ ನೌಕಾ ಆವೃತ್ತಿಯಾಗಿದೆ. ರಫೇಲ್ ಜೆಟ್‌ನ ಸಾಗರ ಆವೃತ್ತಿಯು ಬಲವರ್ಧಿತ ಅಂಡರ್‌ಕ್ಯಾರೇಜ್ ಮತ್ತು ನೋಸ್ ವೀಲ್, ದೊಡ್ಡ ಅರೆಸ್ಟರ್ ಹುಕ್, ಇಂಟಿಗ್ರೇಟೆಡ್ ಲ್ಯಾಡರ್ ಮತ್ತು ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ ಬಳಕೆಯಲ್ಲಿರುವ ರಫೇಲ್‌ನಿಂದ ಇತರ ಸಣ್ಣ ವ್ಯತ್ಯಾಸಗಳನ್ನು ಹೊಂದಿದೆ. ಸಾಕಷ್ಟು ಯುದ್ಧಪರಿಣಿತರ ಅಭಿಪ್ರಾಯದ ಪ್ರಕಾರ, ಅಮೆರಿಕದ ಎಫ್18 ಹಾರ್ನೆಟ್ ಫೈಟರ್ ಜೆಟ್ ಗಿಂತ (F18 Hornet fighter from the US ) ರಫೇಲ್-ಎಂ ಭಾರತೀಯ ಯುದ್ಧಹಡಗುಗಳಲ್ಲಿ ಬಳಕೆ ಮಾಡಲು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಕ್ರಮಾದಿತ್ಯ ಯುದ್ಧಹಡಗಿನ ಅಂಚಿನಲ್ಲಿ ಇದು ಲಿಫ್ಟ್ ಆಗಬಲ್ಲುದು, ಆದರೆ, ಎಫ್18 ಹಾರ್ನೆಟ್ ಯುದ್ಧವಿಮಾನವು ತನ್ನ ರೆಕ್ಕೆಗಳನ್ನು ಮಡಚಿ ಹಾರಾಟ ಲಿಫ್ಟ್ ಆಗಿ ಪ್ರಯತ್ನಿಸಿದರೂ ವಿಕ್ರಮಾದಿತ್ಯದಲ್ಲಿ ಲಿಫ್ಟ್ ಆಗಲು ಕಷ್ಟಸಾಧ್ಯ ಎನ್ನುವ ಅಂಶದೆಡೆ ಗಮನ ನೀಡಿದ್ದಾರೆ. ಇನ್ನು ವಿಕ್ರಮಾದಿತ್ಯ ನೌಕೆಯಲ್ಲಿ 14 ರಫೇಲ್-ಎಂ ಫೈಟರ್ ಜೆಟ್ ನಲ್ಲಿ ಏಕಕಾಲದಲ್ಲಿ ನಿಲ್ಲಿಸಿಕೊಳ್ಳಬಲ್ಲುದು ಆದರೆ, ಎಫ್18 ಹಾರ್ನೆಟ್ ನ 10 ಅಥವಾ 11 ಫೈಟರ್ ಜೆಟ್ ಅನ್ನು ಮಾತ್ರವೇ ವಿಕ್ರಮಾದಿತ್ಯದಲ್ಲಿ ನಿಲ್ಲಿಸಲು ಸಾಧ್ಯವಾಗುತ್ತದೆ.

ಇನ್ನು ರಫೇಲ್-ಎಂ ಯುದ್ಧವಿಮಾನವು ಸಾಗರದಲ್ಲಿ ದಾಳಿಗೆ ತೊಡಗಿದರೆ, ಪೂರ್ಣ ಆಂತರಿಕ ಇಂಧನದೊಂದಿಗೆ ನಾಲ್ಕರಿಂದ ಐದು ಟನ್ ಗಳಷ್ಟು ಬಾಹ್ಯ ಶಸ್ತ್ರಾಸ್ತ್ರ ಹೊರೆಯನ್ನೂ ಇದು ಹೊತ್ತುಕೊಳ್ಳಬಲ್ಲದು. ಇನ್ನು ಕಡಿಮೆ ಇಂಧನದೊಂದಿಗೆ ಇನ್ನಷ್ಟು ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ತನ್ನ ಕಾರ್ಯಾಚರಣೆ ಅನುಗುಣವಾಗಿ ಹೊತ್ತೊಯ್ಯಬಲ್ಲುದು. ಕೇವಲ ಯುದ್ಧ ಕಾರ್ಯಾಚರಣೆ ಮಾತ್ರವಲ್ಲದೆ, ವಾಯು ಗಸ್ತು, ಇಂಟ್ರಾಸೆಪ್ಟ್, ಎಡಿ ಎಸ್ಕಾರ್ಟ್, ಪೂರ್ಣ ಆಂತರಿಕ ಇಂಧನದೊಂದಿಗೆ ಸಮುದ್ರ ಹಾಗೂ ಭೂಪ್ರದೇಶದಲ್ಲಿ ದಾಳಿ ಸೇರಿದಂತೆ ಹಲವು ಕಾರ್ಯಗಳನ್ನು ಇದು ಮಾಡಲಿದೆ.

Chinese J 10C Jets: ರಫೇಲ್‌ಗೆ ಸಡ್ಡು, ಚೀನಾ ನಿರ್ಮಿತ ಜೆ-10ಸಿ ವಿಮಾನ ಖರೀದಿಸಿದ ಪಾಕ್‌
ಇನ್ನು ಎಫ್ 18 ಯುದ್ಧವಿಮಾನಕ್ಕಾಗಿ ಹೊಸದಾಗಿ ಆಪ್ಟಿಕಲ್ ಲ್ಯಾಂಡಿಗ್ ವ್ಯವಸ್ಥೆಯನ್ನು ಮಾಡುವ ಅಗತ್ಯವಿದೆ. ಆದರೆ, ರಫೇಲ್ ಎಂ ಯುದ್ಧವಿಮಾನವು ಈಗಾಗಲೇ ವಿಕ್ರಮಾದಿತ್ಯದಲ್ಲಿರುವ ಒಂದು ಲ್ಯಾಂಡಿಂಗ್ ವ್ಯವಸ್ಥೆಗೆ ಹೊಂದಿಕೊಳ್ಳುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾಯುಪಡೆ ಹಾಗೂ ನೌಕಾಪಡೆ ಎರಡರಲ್ಲೂ ರಫೇಲ್ ಬಳಕೆ ಆಗುವ ಕಾರಣ ಇದರಿಂದ ದೊಡ್ಡ ಮಟ್ಟದ ಲಾಭವೂ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಾಜಿಸ್ಟಿಕ್ ಹಾಗೂ ನಿರ್ವಹಣೆಯಲ್ಲಿನ ಹೊಂದಾಣಿಕೆಯ ಹೊರತಾಗಿ, ವಾಯುಪಡೆಯ ಪೈಲಟ್ ಗಳೊಂದಿಗೆ ನೌಕಾಪಡೆಯ ಪೈಲಟ್ ಗಳೂ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಇದು ವೇಗವಾಗಿ ಯುದ್ಧವಿಮಾನವು ವಾಯುಪಡೆಗೆ ಸೇರಲು ಸಹಾಯ ಮಾಡುತ್ತದೆ ಎಂದಿದ್ದಾರೆ.

Rafales In India: 'ನೋ ಪ್ರಾಬ್ಲಮ್ ಭಾರತಕ್ಕೆ ಬೇಕಾದಷ್ಟು ರಫೇಲ್ ಕೊಡ್ತೆವೆ'
ನೌಕಾಪಡೆಯು ಮುಂದಿನ ಮಾರ್ಚ್ ನಲ್ಲಿ ಇದೇ ವ್ಯವಸ್ಥೆಯಲ್ಲಿ ಎಫ್ 18 ಹಾರ್ನೆಟ್ ಯುದ್ಧವಿಮಾನದ ಪರೀಕ್ಷೆ ನಡೆಸಲಿದೆ. ಇನ್ನು ಐಎನ್ಎಸ್ ವಿಕ್ರಾಂತ್ ಆಗಸ್ಟ್ 15ಕ್ಕೆ ವಾಯುಪಡೆಗೆ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ತಕ್ಷಣದ ನಿಯೋಜನೆಗಾಗಿ ಭಾರತವು ನಾಲ್ಕು ಅಥವಾ ಐದು ಯುದ್ಧ ವಿಮಾನವನ್ನು ಗುತ್ತಿಗೆ ಪಡೆಯಬಹುದು. ಪ್ರಸ್ತುತ ವಿಕ್ರಮಾದಿತ್ಯ ಯುದ್ಧವಿಮಾನವು ದೀರ್ಘಕಾಲದಿಂದ ಬಳಕೆಯಲ್ಲಿರುವ ಮಿಗ್-29ನ ಎರಡು ಸ್ಕ್ವಾಡ್ರನ್ ಗಳನ್ನು ಹೊಂದಿದೆ.

Follow Us:
Download App:
  • android
  • ios