ಕಾರ್ನ್ ಫೆರ್ರಿಯ ಸಮೀಕ್ಷೆಯ ವರದಿ ಪ್ರಕಾರ ದಕ್ಷಿಣ ಏಷ್ಯಾ ರಾಷ್ಟ್ರದಲ್ಲಿ ಸರಾಸರಿ ವೇತನ ಪ್ಯಾಕೇಜ್ ಕಳೆದ ವರ್ಷ 9.4% ಹೆಚ್ಚಳದ ನಂತರ 2023 ರಲ್ಲಿ 9.8% ರಷ್ಟು ಹೆಚ್ಚಾಗುತ್ತದೆ ಎಂದು ಹೇಳಿದೆ.

ನವದೆಹಲಿ (ಜ.17): ವಿಶ್ವದ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ನಡುವೆಯೇ ಭಾರತೀಯ ಉದ್ಯೋಗಿಗಳಿಗೆ ಖುಷಿ ಕೊಡುವಂಥ ವರದಿಯೊಂದು ಬಂದಿದೆ. ಈ ವರದಿಯ ಪ್ರಕಾರ, ಈ ವರ್ಷ ಭಾರತದ ಉದ್ಯೋಗಿಗಳು ಏಷ್ಯಾದ ರಾಷ್ಟ್ರಗಳಲ್ಲಿಯೇ ಅತಿದೊಡ್ಡ ವೇತನ ಹೆಚ್ಚಳಕ್ಕೆ ಸಿದ್ಧರಾಗಿದ್ದಾರೆ ಎಂದು ಹೇಳಿದೆ. ಉನ್ನತ ಪ್ರತಿಭೆಗಳು ಮುಂದಿನ ವರ್ಷಕ್ಕೆ ವೇತನದಲ್ಲಿ ಶೇ. 15 ರಿಂದ 30ರಷ್ಟು ಏರಿಕೆ ಕಾಣಲಿದ್ದಾರೆ ಎಂದು ಕಾರ್ನ್‌ ಫೆರ್ರಿ ತನ್ನ ವರದಿಯಲ್ಲಿ ತಿಳಿಸಿದೆ. ಕಳೆದ ವರ್ಷ 9.4% ಹೆಚ್ಚಳದ ನಂತರ 2023 ರಲ್ಲಿ ದಕ್ಷಿಣ ಏಷ್ಯಾದ ರಾಷ್ಟ್ರದಲ್ಲಿ ಸರಾಸರಿ ವೇತನವು 9.8% ರಷ್ಟು ಹೆಚ್ಚಾಗುತ್ತದೆ ಎಂದು ಸಮೀಕ್ಷೆಯ ವರದಿ ಹೇಳಿದೆ. ಹೈಟೆಕ್ ಕೈಗಾರಿಕೆಗಳು, ಜೀವ ವಿಜ್ಞಾನಗಳು ಮತ್ತು ಆರೋಗ್ಯ ರಕ್ಷಣೆಯು 10% ಕ್ಕಿಂತ ಹೆಚ್ಚಿನ ಹೈಕ್‌ಗಳೊಂದಿಗೆ ವೇತನ ಹೆಚ್ಚಳದ ಪ್ಯಾಕ್ ಅನ್ನು ಮುನ್ನಡೆಸುತ್ತದೆ ಎಂದು ವರದಿ ಹೇಳಿದೆ.

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಸಮಯದಲ್ಲಿ ಈ ಬೆಳವಣಿಗೆಯು ದಾಖಲಾಗಿದೆ. ಇದು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ - ಪ್ರತಿ ವರ್ಷ ಲಕ್ಷಾಂತರ ಉದ್ಯೋಗಿಗಳನ್ನು ವಿಶ್ವಕ್ಕೆ ನೀಡುವ ರಾಷ್ಟ್ರಗಳಲ್ಲಿ ಒಂದಾಗಿರುವ ನಡುವೆಯೂ ಈ ವಿಚಾರ ದಾಖಲಾಗಿದೆ. ಕಾರ್ನ್ ಫೆರ್ರಿ, ಭಾರತದಲ್ಲಿನ 818 ಕಂಪನಿಗಳು ಸಂಯೋಜಿತವಾಗಿ ನೇಮಿಸಿಕೊಂಡಿರುವ 800,000 ಸಿಬ್ಬಂದಿಯಿಂದ ಈ ಸಮೀಕ್ಷೆಯನ್ನು ಮಾಡಿದೆ. 61% ಸಂಸ್ಥೆಗಳು ಪ್ರಮುಖ ವ್ಯಕ್ತಿಗಳಿಗೆ ರಿಟೆನ್ಷನ್‌ ಪೇಮೆಂಟ್‌ಗಳನ್ನು ಒದಗಿಸುತ್ತಿವೆ ಎಂದೂ ಹೇಳಿದೆ.

ಸಂಬಳ ಸಿಕ್ಕಾಪಟ್ಟೆ ಹೆಚ್ಚು ಎಂದಿದ್ದ ಟಿಮ್‌ ಕುಕ್‌ಗೆ ಶೇ.50ರಷ್ಟು ವೇತನ ಕಡಿತ ಮಾಡಿದ ಆಪಲ್‌!

ಆಸ್ಟ್ರೇಲಿಯಾದಲ್ಲಿ 3.5%, ಚೀನಾ 5.5%, ಹಾಂಗ್ ಕಾಂಗ್, 7% ಇಂಡೋನೇಷ್ಯಾ, 4.5% ಕೊರಿಯಾ, 5% ಮಲೇಷ್ಯಾ, 3.8% ನ್ಯೂಜಿಲೆಂಡ್, 5.5%, 5% ಥೈಲ್ಯಾಂಡ್, 8% ವಿಯೆಟ್ನಾಂ.ಫಿಲಿಪೈನ್ಸ್, 4% ಸಿಂಗಾಪುರದಲ್ಲಿ 3.5% ಗೆ ಹೋಲಿಸಿದರೆ ಭಾರತಕ್ಕೆ 9.8% ಏರಿಕೆಯಾಗಿದೆ ಎಂದು ವರದಿಯು ಕಂಡುಹಿಡಿದಿದೆ. ಸುಮಾರು 60% ಕಂಪನಿಗಳು ಹೈಬ್ರಿಡ್ ಮಾದರಿಯ ಕೆಲಸವನ್ನು ಅನುಸರಿಸಲು ಉದ್ಯೋಗಿಗಳನ್ನು ಕೇಳಿಕೊಂಡಿವೆ.

ಉದ್ಯೋಗಿಗಳಿಗೆ ಬಂಪರ್, ವಾರ್ಷಿಕ ಬೋನಸ್‌ಗೆ ಬರೋಬ್ಬರಿ 4 ವರ್ಷದ ಸ್ಯಾಲರಿ ನೀಡಿದ ಕಂಪನಿ!

ಟೈರ್ 1 ನಗರಗಳೆಂದು ಕರೆಯಲ್ಪಡುವ ಪ್ರಮುಖ ಮೆಟ್ರೋಪಾಲಿಟನ್ ಕೇಂದ್ರಗಳಲ್ಲಿನ ಉದ್ಯೋಗಿಗಳು ಇನ್ನೂ ಹೆಚ್ಚಿನ ಪರಿಹಾರವನ್ನು ಪಡೆಯುತ್ತಾರೆ ಎಂದು ಸಮೀಕ್ಷೆಯ ವರದಿಯು ಕಂಡುಹಿಡಿದಿದೆ, ಹೈಬ್ರಿಡ್ ಮತ್ತು ರಿಮೋಟ್ ಕೆಲಸವು ರೂಢಿಯಾಗಿರುವುದರಿಂದ ಸಂಸ್ಥೆಗಳು ಇದೇ ಮಾದರಿಯಲ್ಲಿ ಮುಂದುವರಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯು ತಿಳಿಸಿದೆ.