Asianet Suvarna News Asianet Suvarna News

ಸಂಬಳ ಸಿಕ್ಕಾಪಟ್ಟೆ ಹೆಚ್ಚು ಎಂದಿದ್ದ ಟಿಮ್‌ ಕುಕ್‌ಗೆ ಶೇ.50ರಷ್ಟು ವೇತನ ಕಡಿತ ಮಾಡಿದ ಆಪಲ್‌!

ಎಸ್‌ಇಸಿಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ, ಟಿಮ್ ಕುಕ್‌ನ ಪರಿಷ್ಕೃತ ವೇತನವು ಒಟ್ಟು 49 ಮಿಲಿಯನ್ ಡಾಲರ್‌ ಆಗಿರುತ್ತದೆ ಎಂದು ಆಪಲ್ ಹೇಳಿದೆ. ಇದು  3 ಮಿಲಿಯನ್ ಡಾಲರ್‌ ಮೂಲ ವೇತನವನ್ನು ಒಳಗೊಂಡಿರುತ್ತದೆ, ಜೊತೆಗೆ 6 ಮಿಲಿಯನ್ ಬೋನಸ್ ಮತ್ತು 40 ಮಿಲಿಯನ್ ಡಾಲರ್‌ ಈಕ್ವಿಟಿ ಮೌಲ್ಯವನ್ನು ಒಳಗೊಂಡಿದೆ.

Apple CEO Tim Cook has requested a pay cut company cuts it by almost 50 per cent san
Author
First Published Jan 13, 2023, 11:42 AM IST

ನವದೆಹಲಿ (ಜ.13): ಸಾಮಾನ್ಯವಾಗಿ ಯಶಸ್ಸಿನ ಉತ್ತುಂಗದಲ್ಲಿರುವ ಕಂಪನಿಯೊಂದರ ಸಿಇಒ, ತನಗೆ ಕಂಪನಿ ನೀಡುತ್ತಿರುವ ವೇತನ ಬಹಳ ಹೆಚ್ಚು ಎಂದು ಭಾವಿಸುವುದು ಬಹಳ ಕಡಿಮೆ. ಆದರೆ, ಆಪಲ್‌ ಕಂಪನಿಯ ಸಿಇಒ ಟಿಮ್‌ ಕುಕ್‌ ಇದಕ್ಕೆ ಅಪವಾದ ಎನ್ನುವಂತಿದ್ದಾರೆ. ಬಂದಿರುವ ಮಾಧ್ಯಮ ವರದಿಗಳ ಪ್ರಕಾರ ಟಿಮ್‌ ಕುಕ್‌ ತನಗೆ ಕಂಪನಿ ನೀಡುತ್ತಿರುವ ವೇತನ ಬಹಳ ಹೆಚ್ಚು ಎಂದು ಹೇಳಿದ್ದು ವೇತನ ಕಡಿಮ ಮಾಡುವಂತೆ ಕಂಪನಿಗೆ ಮನವಿ ಮಾಡಿದ್ದಾರೆ. ಇದರಂತೆ ಅವರ ವೇತನ ಪ್ಯಾಕೇಜ್‌ನಲ್ಲಿ ಸರಿಸುಮಾರಿ ಶೇ.50ರಷ್ಟು ವೇತನ ಕಡಿತಗೊಂಡಿದೆ. ಇದನ್ನು ಎಸ್‌ಇಸಿ ಫಿಲ್ಲಿಂಗ್‌ನಲ್ಲಿ ಸ್ವತಃ ಕಂಪನಿಯೇ ಹೇಳಿಕೊಂಡಿದೆ. ಎಸ್‌ಇಸಿಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ, ಟಿಮ್ ಕುಕ್‌ನ ಪರಿಷ್ಕೃತ ವೇತನವು ಒಟ್ಟಾರೆಯಾಗಿ 49 ಮಿಲಿಯನ್ ಅಮೆರಿಕನ್‌ ಡಾಲರ್‌ (399 ಕೋಟಿ ರೂಪಾಯಿ) ಆಗಿರುತ್ತದೆ ಎಂದು ಆಪಲ್ ಹೇಳಿದೆ. ಇದು 3 ಮಿಲಿಯನ್ ಅಮೆರಿಕನ್‌ ಡಾಲರ್‌ (25 ಕೋಟಿ) ಮೂಲ ವೇತನವನ್ನು ಒಳಗೊಂಡಿರುತ್ತದೆ, ಜೊತೆಗೆ 6 ಮಿಲಿಯನ್ ಬೋನಸ್ (49 ಕೋಟಿ  ರೂಪಾಯಿ) ಮತ್ತು 40 ಮಿಲಿಯನ್ ಅಮೆರಿಕನ್‌ ಡಾಲರ್‌ (325 ಕೋಟಿ ರೂಪಾಯಿ) ಈಕ್ವಿಟಿ ಮೌಲ್ಯವನ್ನು ಒಳಗೊಂಡಿದೆ. ಇದರ ಜೊತೆಗೆ, ಆಪಲ್‌ನ ಕಾರ್ಯಕ್ಷಮತೆಯೊಂದಿಗೆ ಕುಕ್‌ನ ಶೇಕಡಾವಾರು ಸ್ಟಾಕ್ ಘಟಕಗಳು ಸಹ ಹಿಂದಿನ 50 ಪ್ರತಿಶತದಿಂದ 75 ಪ್ರತಿಶತಕ್ಕೆ ಏರುತ್ತದೆ.

ಈ ನಿರ್ಧಾರಕ್ಕೆ ಕಾರಣವೇನು?:  ಸಮತೋಲಿತ ಷೇರುದಾರರ ಪ್ರತಿಕ್ರಿಯೆ, ಆಪಲ್‌ನ ಅಸಾಧಾರಣ ಕಾರ್ಯಕ್ಷಮತೆ ಮತ್ತು ಕುಕ್‌ ಅವರ ಶಿಫಾರಸಿನ ನಂತರ ಟಿಮ್‌ ಕುಕ್‌ ಅವರ ಸಂಬಳವನ್ನು ಪರಿಷ್ಕರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಆಪಲ್ ಫೈಲಿಂಗ್ ಸಮಯದಲ್ಲಿ ಹೇಳಿದೆ. ಮುಂದಿನ ವರ್ಷಗಳಲ್ಲಿ ನಮ್ಮ ಪ್ರಾಥಮಿಕ ಪೀರ್ ಗ್ರೂಪ್‌ಗೆ ಸಂಬಂಧಿಸಿದಂತೆ ಕುಕ್‌ ಅವರ ವಾರ್ಷಿಕ ಗುರಿ ಪರಿಹಾರವನ್ನು 80 ನೇ ಮತ್ತು 90 ನೇ ಶೇಕಡಾವಾರು ನಡುವೆ ಇರಿಸಲು ಕಂಪನಿಯು ಯೋಜನೆಯನ್ನು ಹೊಂದಿದೆ ಎಂದು ಆಪಲ್ ಹೇಳಿದೆ. 2011ರಲ್ಲಿ ಟಿಮ್‌ ಕುಕ್‌ ಆಪಲ್‌ನ ಸಿಇಒ ಆಗಿ ನೇಮಕವಾಗಿದ್ದರು. ಅಂದಿನಿಂದ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆಪಲ್‌ ಮಂಡಳಿಯು ಎಸ್‌ಇಸಿ ಫೈಲಿಂಗ್‌ ಸಮಯದಲ್ಲಿ ಟಿಮ್‌ ಕುಕ್‌ ಅವರ ಕಾರ್ಯಕ್ಷಮತೆಯನ್ನು ಮನಸಾರೆ ಶ್ಲಾಘನೆ ಮಾಡಿತ್ತು.

ಯುವ ಉದ್ಯಮಿಗಳಿಗೆ ಟಿಮ್‌ ಕುಕ್‌ ನೀಡೋ ಟಿಪ್ಸ್

ಟಿಮ್‌ ಕುಕ್‌ ಹಿಂದಿನ ವೇತನ:  
ಇದಕ್ಕೂ ಮೊದಲು, 2022 ರಲ್ಲಿ, ಕುಕ್ 99.4 ಮಿಲಿಯನ್ ಅಮೆರಿಕನ್‌ ಡಾಲರ್‌ ವೇತನ ಪ್ಯಾಕೇಜ್ ಪಡೆಯುತ್ತಿದ್ದರು. ಇದು  3 ಮಿಲಿಯನ್ ಮತ್ತು ಬೋನಸ್ ಮತ್ತು ಸ್ಟಾಕ್‌ಗಳ ರೂಪದಲ್ಲಿ 83 ಮಿಲಿಯನ್‌ನ ಅದೇ ಮೂಲ ವೇತನವನ್ನು ಒಳಗೊಂಡಿತ್ತು. 2021 ರಲ್ಲಿ, ಟಿಮ್ ಕುಕ್ ಅವರ ಒಟ್ಟು ವೇತನ ಪ್ಯಾಕೇಜ್ ಸುಮಾರು USD 98.7 ಮಿಲಿಯನ್ ಆಗಿತ್ತು.

RBI ರೂಲ್ಸ್ ಎಫೆಕ್ಟ್: ಡೆಬಿಟ್, ಕ್ರೆಡಿಟ್ ಪಾವತಿ ಸ್ವೀಕಾರ ನಿಲ್ಲಿಸಿದ ಆ್ಯಪಲ್

2022 ರಲ್ಲಿ, ಟಿಮ್ ಕುಕ್ ಅವರ ಬೃಹತ್‌ ವೇತನ ಪ್ಯಾಕೇಜ್‌ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು. 2021 ಹಾಗೂ 2022ರ ಈಕ್ವಿಟಿ ಆಧಾರದ ಮೇಲೆ ಕುಕ್‌ ಅವರ ವೇತನ ಪ್ಯಾಕೇಜ್‌ಗೆ ಷೇರುದಾರರು ಅಚ್ಚರಿ ವ್ಯಕ್ತಪಡಿಸಿದ್ದರು. ಸ್ವತಃ ಕುಕ್‌ ಕೂಡ ತಮಗೆ ನೀಡುತ್ತಿರುವ ಸಂಬಳ ಬಹಳ ಹೆಚ್ಚು ಎಂದು ಹೇಳಿದ್ದರು. ಸಾಂಸ್ಥಿಕ ಷೇರುದಾರರ ಸೇವೆ (ಐಎಸ್ಎಸ್) ವಾರ್ಷಿಕ ಸಭೆಯ ವೇಳೆ ಕುಕ್ ಅವರ ಪರಿಹಾರ ಪ್ಯಾಕೇಜ್ ವಿರುದ್ಧ ಮತ ಚಲಾಯಿಸುವಂತೆ ಷೇರುದಾರರಿಗೆ ಸಲಹೆ ನೀಡಿತ್ತು. ಕುಕ್ ಅವರ ಸಂಬಳದಲ್ಲಿ ಅರ್ಧದಷ್ಟು ಪ್ರತಿಫಲಗಳು ಆಪಲ್ ಸಿಇಒ ಅವರ ಕಾರ್ಯಕ್ಷಮತೆಯ ಮಾನದಂಡವನ್ನು ಅವಲಂಬಿಸಿಲ್ಲ ಎಂದು ಐಎಸ್‌ಎಸ್‌ ಹೇಳಿತ್ತು. ಈ ಕಳವಳಗಳ ಹೊರತಾಗಿಯೂ, ಬಹುಪಾಲು ಷೇರುದಾರರು ಕುಕ್ ಅವರ ವೇತನ ಪ್ಯಾಕೇಜ್ ಪರವಾಗಿ ಮತ ಚಲಾಯಿಸಿದ್ದಾರೆ ಮತ್ತು ಆದ್ದರಿಂದ, ಕಳೆದ ವರ್ಷ ಅವರ ಸಂಬಳ ಪ್ಯಾಕೇಜ್‌ನಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.

Follow Us:
Download App:
  • android
  • ios