ಎವರ್‌ಗ್ರೀನ್ ಕಂಪನಿ ಉದ್ಯೋಗಿಗಳಿಗೆ ವಾರ್ಷಿಕ ಬೋನಸ್ ಘೋಷಿಸುತ್ತಿದ್ದಂತೆ, ಇದೀಗ ಎಲ್ಲರೂ ಇದೇ ಕಂಪನಿಯಲ್ಲಿ ಕೆಲಸ ಬಯಸುತ್ತಿದ್ದಾರೆ. ಕಾರಣ  ವಾರ್ಷಿಕ ಬೋನಸ್ ಆಗಿ 52 ತಿಂಗಳ ವೇತನ ನೀಡಿದೆ. 

ತೈಪಿ(ಜ.09): ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಹಲವು ಕಂಪನಿಗಳು ಕಳೆದ ವರ್ಷದ ಬೋನಸ್ ಕೂಡ ನೀಡಿ ಉದ್ಯೋಗಿಗಳನ್ನು ಖುಷಿಪಡಿಸಿದೆ. ಇದೀಗ ಇಲ್ಲೊಂದು ಕಂಪನಿ ಉದ್ಯೋಗಿಗಳಿಗೆ ವಾರ್ಷಿಕ ಬೋನಸ್ ಘೋಷಿಸಿದೆ. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಇದೀಗ ಎಲ್ಲರೂ ಈ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕಾರಣ ಉದ್ಯೋಗಿಗಳಿಗೆ ವಾರ್ಷಿಕ ಬೋನಸ್ ಎಂದು ಬರೋಬ್ಬರಿ 52 ತಿಂಗಳ ವೇತನ ನೀಡಿದೆ. ಅಂದರೆ 4 ವರ್ಷದ ಸಂಬಳನ್ನು ಬೋನಸ್ ಆಗಿ ಪಡೆದುಕೊಂಡಿದ್ದಾರೆ. ಹೀಗೆ 50 ತಿಂಗಳ ಬೋನಸ್ ನೀಡಿದ ಕಂಪನಿ ಬೇರೆ ಯಾವುದು ಅಲ್ಲ, ಜನಪ್ರಿಯ ಶಿಪ್ಪಿಂಗ್ ಕಂಪನಿ ಎವರ್‌ಗ್ರೀನ್ ಮರೀನ್.

ಎವರ್‌ಗ್ರೀನ್ ಮರೀನ್ ಕಂಪನಿ 2021ರಲ್ಲಿ ಭಾರಿ ಸದ್ದು ಮಾಡಿತ್ತು. ಸೂಯೆಜ್ ಕಾಲುವೆಯಲ್ಲಿ ಇದೇ ಎವರ್‌ಗ್ರೀನ್ ಮರೀನ್ ಕಂಪನಿಯ ಹಡಗು ಸಿಲುಕಿಕೊಂಡು ಭಾರಿ ರದ್ದಾಂತಕ್ಕೆ ಕಾರಣವಾಗಿತ್ತು. ಎವರ್‌ಗ್ರೀನ್ ಮರೀನ್ ಹಡುಗು ಸಿಲುಕಿಕೊಂಡ ಕಾರಣ ಪೂರೈಕೆ ಸರಪಳಿಯಲ್ಲಿ ಭಾರಿ ವ್ಯತ್ಯಯವಾಗಿತ್ತು. ಇತ್ತ ಆರ್ಥಿಕ ಸಂಕಷ್ಟವೂ ಸೃಷ್ಟಿಯಾಗಿತ್ತು. ಇದೇ ಎವರ್‌ಗ್ರೀನ್ ಮರೀನ್ ಕಂಪನಿ ಇದೀಗ ಅತ್ಯುತ್ತಮ ಕೆಲಸ ಮಾಡಿದ ಆಯ್ದ ಉದ್ಯೋಗಿಗಳಿಗೆ 52 ತಿಂಗಳ ವೇತನವನ್ನು ಬೋನಸ್ ಆಗಿ ನೀಡಿದೆ.

ಹುಬ್ಬಳ್ಳಿ: ರೈಲ್ವೆ ನೌಕರರಿಗೆ ಬಂಪರ್‌ ಕೊಡುಗೆ..!

ಉದ್ಯೋಗಿಗಳ ಗ್ರೇಡ್ ಪ್ರಕಾರ ಬೋನಸ್ ನೀಡಿದ್ದಾರೆ. ಈ ಬೋನಸ್ ಥಾಯ್ಲೆಂಡ್‌ ಮುಖ್ಯಕಚೇರಿಯಲ್ಲಿರುವ ಉದ್ಯೋಗಿಗಳು, ಒಪ್ಪಂದ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಕಂಪನಿ ಹೇಳಿದೆ. ಇದು ಚೀನಾ ಶಾಖೆ ಸೇರಿದಂತೆ ಇತರ ಶಾಖೆಗಳಲ್ಲಿರುವ ಉದ್ಯೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಾವೂ ಕೂಡ ಎವರ್‌ಗ್ರೀನ್ ಕಂಪನಿಗಾಗಿ ದುಡಿದಿದ್ದೇವೆ. 2021ರಲ್ಲಿ ಕಂಪನಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಬದಲ್ಲೂ ಕಂಪನಿಯ ಜೊತೆಗಿದ್ದೆವು. ಇದೀಗ ಥಾಯ್ಲೆಂಡ್ ಶಾಖಾ ಉದ್ಯೋಗಳಿಗೆ ಮಾತ್ರ 4 ವರ್ಷ ಬೋನಸ್ ನೀಡಿರುವುದು ತಪ್ಪು ಎಂದು ಆಕ್ರೋಶ ಹೊರಹಾಕಿದ್ದಾರೆ.

ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪರ್ಫಾಮರ್‌ಗೆ ಗರಿಷ್ಠ ಬೋನಸ್ ನೀಡಲಾಗಿದೆ. 2022ರಲ್ಲಿ ಎವರ್‌ಗ್ರೀನ್ ಮರೀನ್ ಕಂಪನಿಯ ಆದಾಯ ದುಪ್ಪಟ್ಟಾಗಿದೆ. ಇತರ ಪ್ರತಿಸ್ಪರ್ಧಿಗಳಿಗಿಂತ ಆದಾಯದಲ್ಲಿ ಗಣನೀಯ ಏರಿಕೆ ಕಂಡಿದೆ. 2022ರ ಆರ್ಥಿಕ ವರ್ಷದ ಆದಾಯ 20.7 ಬಿಲಿಯನ್ ಅಮೆರಿಕನ್ ಡಾಲರ್ ತಲುಪು ನಿರೀಕ್ಷೆ ಇದೆ. ಇದು 2020ರ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. 

ಉದ್ಯೋಗಿಗಳಿಗೆ 1.1 ಲಕ್ಷ ಕೊರೋನಾ ಬೋನಸ್ ಕೊಟ್ಟ ಮೈಕ್ರೋಸಾಫ್ಟ್

ಹಲವು ಉದ್ಯೋಗಳಿಗೆ 4 ವರ್ಷದ ಸ್ಯಾಲರಿ ಬೋನಸ್ ಹಣ ಈಗಾಗಲೇ ಖಾತೆಗೆ ಜಮಾವಣೆಗೊಂಡಿದೆ. ಮತ್ತೆ ಕೆಲವ ಉದ್ಯೋಗಳಿಗೆ ಶೀಘ್ರದಲ್ಲೇ ಹಣ ಸಂದಾಯವಾಗಲಿದೆ. ಆದರೆ ಬೋನಸ್ ರೂಪದಲ್ಲಿ 52 ತಿಂಗಳ ವೇತನ ನೀಡಿರುವುದು ಇದೇ ಮೊದಲು.