ಸೇಂಗೆಯಿಂದ ಮಿಸ್ಸಾಮರಿಗೆ ಹೋಗುತ್ತಿದ್ದ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಗುರುವಾರ ಬೆಳಗ್ಗೆ ಸುಮಾರು 9: 15 ರ ವೇಳೆಗೆ ಎಟಿಸಿ ಜತೆಗೆ ಸಂಪರ್ಕ ಕಡಿತಗೊಂಡಿತ್ತು ಎಂದು ತಿಳಿದುಬಂದಿದೆ.

ಹೊಸದೆಹಲಿ (ಮಾರ್ಚ್‌ 16, 2023): ಚೀನಾ ಗಡಿಯ ಭಾರತದ ಅವಿಭಾಗ್ಯ ಅಂಗವಾದ ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್‌ ಪತನಕ್ಕೀಡಾಗಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ. ಅರುಣಾಚಲ ಪ್ರದೇಶದ ಮಂಡಾಲಾ ಬಳಿ ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್‌ ಮಾರ್ಚ್‌ 16, ಗುರುವಾರ ಬೆಳಗ್ಗೆ ಪತನಗೊಂಡಿದೆ. ಬೋಮ್ಡಿಲಾ ಪಶ್ಚಿಮ ಭಾಗದ ಬಳಿ ಹೆಲಿಕಾಪ್ಟರ್‌ ಪತನಗೊಂಡಿದೆ ಎಂದು ಹೇಳಲಾಗಿದ್ದು, ಈ ಪ್ರದೇಶದಲ್ಲಿ ಹುಡುಕಾಟ ನಡೆಯುತ್ತಿದೆ. ಹೆಲಿಕಾಪ್ಟರ್‌ನಲ್ಲಿದ್ದವರು ಇಬ್ಬರೂ ಲೆಫ್ಟಿನೆಂಟ್‌ ಕರ್ನಲ್‌ ಹಾಗೂ ಮೇಜರ್‌ ಎಂದು ತಿಳಿದುಬಂದಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.

ಸೇಂಗೆಯಿಂದ ಮಿಸ್ಸಾಮರಿಗೆ ಹೋಗುತ್ತಿದ್ದ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಗುರುವಾರ ಬೆಳಗ್ಗೆ ಸುಮಾರು 9: 15 ರ ವೇಳೆಗೆ ಎಟಿಸಿ ಜತೆಗೆ ಸಂಪರ್ಕ ಕಡಿತಗೊಂಡಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಹೆಲಿಕಾಪ್ಟರ್‌ನಲ್ಲಿದ್ದ ಲೆಫ್ಟಿನೆಂಟ್‌ ಕರ್ನಲ್‌ ಹಾಗೂ ಮೇಜರ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಭಾರತೀಯ ಸೇನೆ ಘಟನೆ ಬಗ್ಗೆ ಮಾಹಿತಿ ನೀಡಿದೆ. ಆಪರೇಷನಲ್‌ ಸಾರ್ಟಿ ವಿಧಾನದ ಹೆಲಿಕಾಪ್ಟರ್‌ ಇದಾಗಿತ್ತು ಎಂದು ಲೆಫ್ಟಿನೆಂಟ್‌ ಕರ್ನಲ್‌ ಮಹೇಂದ್ರ ರಾವತ್‌ ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: ವಾಯುಪಡೆ ಯುದ್ಧ ಘಟಕಕ್ಕೆ ಮೊದಲ ಬಾರಿ ಮಹಿಳಾ ಅಧಿಕಾರಿ ನೇತೃತ್ವ; ಪಶ್ಚಿಮ ವಿಭಾಗ ಕ್ಯಾಪ್ಟನ್‌ ಹುದ್ದೆಗೆ ಶಾಲಿಜಾ ಧಾಮಿ ನೇಮಕ

Scroll to load tweet…

ಈ ಹಿಂದೆ 2019 ರಲ್ಲಿ ಅರುಣಾಚಲ ಪ್ರದೇಶದಲ್ಲಿ ಭಾರತೀಯ ವಾಯುಸೇನೆಯ ಎಎನ್‌ - 32 ಎರ್‌ಕ್ರಾಫ್ಟ್‌ ಪತನಗೊಂಡು ವಾಯುಸೇನೆಯ 13 ಸಿಬ್ಬಂದಿ ತಮ್ಮ ಜೀವ ಕಳೆದುಕೊಂಡಿದ್ದರು. ಅಸ್ಸಾಂನ ಜೋರ್ಹಾತ್‌ನಿಂದ ಅರುಣಾಚಲ ಪ್ರದೇಶದ ಮೆಚುಕಾ ಅಡ್ವಾನ್ಸ್ಡ್‌ ಲ್ಯಾಂಡಿಂಗ್‌ ಗ್ರೌಂಡ್‌ಗೆ ಹೊರಟಿದ್ದ ಏರ್‌ಕ್ರಾಫ್ಟ್‌ ಪತನವಾಗಿತ್ತು. ಆ ವೇಳೆ 8 ದಿನಗಳ ಕಾಲ ಏರ್‌ಕ್ರಾಫ್ಟ್‌ಗಾಗಿ ಹುಡುಕಾಟ ನಡೆದಿತ್ತು.