ಭಾರತ ಹಾಗೂ ಚೀನಾ ಗಡಿಯಲ್ಲಿನ ಉದ್ವಿಘ್ನ ಪರಿಸ್ಥಿತಿ ತಿಳಿಗೊಂಡಿದ್ದು, ಇದೀಗ ಶಾಂತವಾಗಿದೆ. ಸತತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಶಾಂತವಾಗಿರುವ ಗಡಿಯಲ್ಲಿ ಇದೀಗ ಭಾರತೀಯ ಯೋಧರು ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ನವದೆಹಲಿ(ಮಾ.27):  ಲಡಾಖ್, ಪ್ಯಾಂಗಾಂಗ್ ಸರೋವರ ಸೇರಿದಂತೆ ಭಾರತ-ಚೀನಾ ಗಡಿ ಸಂಘರ್ಷ ಸದ್ಯ ಶಾಂತವಾಗಿದೆ. ಉದ್ವಿಘ್ನಿ ವಾತಾವರಣಕ್ಕೆ ಬ್ರೇಕ್ ಬಿದ್ದಿದ್ದು, ಉಭಯ ದೇಶಗಳು ಸೇನಯನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ. ಗಡಿಯಲ್ಲಿನ ಪರಿಸ್ಥಿತಿ ತಿಳಿಗೊಂಡಿರುವ ಕಾರಣ ಭಾರತ ಚೀನಾ ಗಡಿಯಲ್ಲಿ ಭಾರತೀಯ ಯೋಧರು ಸಖತ್ ಡ್ಯಾನ್ಸ್ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

ಬೆದರಿದ ಚೀನಾದಿಂದ ಕುತಂತ್ರ; ಗಲ್ವಾನ್ ಘರ್ಷಣೆ ವಿಡಿಯೋ ಬಿಡುಗಡೆ ಮಾಡಿ ಪೇಚಿಗೆ ಸಿಲುಕಿದ PLA!

ಕೇಂದ್ರ ಸಚಿವ ಕಿರಣ್ ರಿಜಿಜು ಟ್ವಿಟರ್ ಮೂಲಕ ವಿಡಿಯೋ ಶೇರ್ ಮಾಡಿದ್ದಾರೆ. ಯೋಧರು ಸಂಭ್ರಮಿಸುತ್ತಿರುವುದನ್ನು ನೋಡುವುದು ಸಂತಸವಾಗಿದೆ. ಲಡಾಖ್‌ನ ಪ್ಯಾಂಗಾಂಗ್ ಸರೋವರದ ಬಳಿ ಭಾರತೀಯ ಸೇನೆಯ ಗೂರ್ಖಾ ಜವಾನರ ಡ್ಯಾನ್ಸ್ ಎಂದು ರಿಜಿಜು ಹೇಳಿದ್ದಾರೆ.

Scroll to load tweet…

9 ತಿಂಗಳ ಬಳಿಕ ಗಲ್ವಾನ್ ಘರ್ಷಣೆ ಸಾವು-ನೋವು ಒಪ್ಪಿಕೊಂಡ ಚೀನಾ!

ಪೆಪ್ಪಿ ಸಾಂಗ್‌ಗೆ ಹೆಜ್ಜೆ ಹಾಕಿರುವ ಯೋಧರು, ತಮ್ಮ ಡ್ಯಾನ್ಸ್ ಪ್ರತಿಭೆ ಪ್ರದರ್ಶಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ಮೆಚ್ಚುಗೆ ಪಡೆದಿದೆ. ನಿಜವಾದ ಹೀರೋಗಳ ಡ್ಯಾನ್ಸ್ ನೋಡಲು ಮತ್ತಷ್ಟು ಸಂತೋಷವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.