Asianet Suvarna News Asianet Suvarna News

ಪಾಕ್ ಆಕ್ರಮಿತ ಕಾಶ್ಮೀರ ವಶಪಡಿಸಲು ಸಿದ್ಧ, ಸರ್ಕಾರ ಆದೇಶಕ್ಕೆ ಕಾಯುತ್ತಿದ್ದೇವೆ, ಭಾರತೀಯ ಸೇನಾ ಹೇಳಿಕೆ!

ಕಾಶ್ಮೀರದಲ್ಲಿನ ಹಿಂದೂಗಳು, ವಲಸೆ ಕಾರ್ಮಿಕರು ಸೇರಿದಂತೆ ಹಲವರ ಮೇಲಿನ ದಾಳಿಗಳು ಹೆಚ್ಚಾಗುತ್ತಿದ್ದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಭಾರತೀಯ ಸೇನೆ ಪ್ಲಾನ್ ರೆಡಿ ಮಾಡಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಸ್ಫೋಟಕ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ.
 

Indian Army redy to carry any Government order Lieutenant General hints to reconquer pak occupied Kashmir ckm
Author
First Published Nov 22, 2022, 9:14 PM IST

ನವದೆಹಲಿ(ನ.22):ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪದನಾ ಚಟುವಟಿಕೆ ಹಾಗೂ ಅದನ್ನು ಹತ್ತಿಕ್ಕಲು ಭಾರತೀಯ ಕಾರ್ಯಾಚರಣೆ ಕುರಿತು  ಭಾರತೀಯ ಸೇನಾ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ ಈ ಸುದ್ದಿಗೋಷ್ಠಿ ಕೇವಲ ಭಯೋತ್ಪಾದಕರನ್ನು ಹತ್ತಿಕ್ಕುವ ಹಾಗೂ ಕಾಶ್ಮೀರದಲ್ಲಿ ಶಾಂತಿ ಕಾಪಾಡುವ ಕೆಲಸದ ಮಾತಿಗೆ ಸೀಮಿತವಾಗಿರಲಿಲ್ಲ. ಈ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ದ್ವಿವೇದಿ ಆಡಿದ ಒಂದೊಂದು ಮಾತುಗಳು ಇದೀಗ ಪಾಕಿಸ್ತಾನದಲ್ಲಿ ಆತಂಕ ಸೃಷ್ಟಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಸಂಪೂರ್ಣವಾಗಿ ಹತ್ತಿಕ್ಕಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತ ಮರಳಿ ಪಡೆಯಬೇಕು. ಭಾರತೀಯ ಸೇನೆ ಯಾವುದೇ ರೀತಿಯ ಆಪರೇಶನ್‌ಗೆ ಸಿದ್ಧವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ ಮರಳಿ ಪಡೆಯ ಆಪರೇಶನ್‌ಗೆ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ ಎಂದಿದ್ದಾರೆ.

ಅಕ್ಟೋಬರ್ 27 ರಂದು ಶ್ರೀನಗರದ ಇನ್‌ಫ್ಯಾಂಟ್ರಿ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಲವು ಭೂಭಾಗಗಳನ್ನು ಅಕ್ರಮಾಗಿ ಕಾಶ್ಮೀರ ಕೈವಶ ಮಾಡಿದೆ. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಇದಕ್ಕೆ ಪಾಕಿಸ್ತಾನ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದಿದ್ದರು. ಇಷ್ಟೇ ಅಲ್ಲ ಪಾಕ್ ಆಕ್ರಮಿತ ಕಾಶ್ಮೀರ ಮರಳಿ ಪಡೆಯುತ್ತೇವೆ ಎಂದು ಸಂಸತ್ತಿನಲ್ಲೂ ಹೇಳಿದ್ದರು. ಇದರ ಬೆನ್ನಲ್ಲೇ  ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಹೇಳಿಕೆ ಇದೀಗ ಪಾಕಿಸ್ತಾನಕ್ಕೆ ತೀವ್ರ ಆತಂಕ ತಂದಿದೆ.

ಕಾಶ್ಮೀರ ಶಾಲಾ ಸಿಬ್ಬಂದಿ ಮೇಲೆ ಉಗ್ರರ ದಾಳಿ, ಮತ್ತೆ ವಲಸೆ ಕಾರ್ಮಿಕರ ಟಾರ್ಗೆಟ್!

ಕಾಶ್ಮೀರದಲ್ಲಿ 300 ಉಗ್ರರು ಸಕ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ವಂಸಕ ಕೃತ್ಯ, ಸೇನೆ ಮೇಲೆ ದಾಳಿ ಸೇರಿದಂತೆ ಹಲವು ದಾಳಿಗಳನ್ನು ಸಂಘಟಿಸುತ್ತಿದ್ದಾರೆ. 160ಕ್ಕೂ ಹೆಚ್ಚು ಉಗ್ರರು ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಉಗ್ರರ ಹತ್ತಿಕ್ಕಿ ಕಾಶ್ಮೀರದಲ್ಲಿ ಸಂಪೂರ್ಣ ಶಾಂತಿ ನೆಲೆಸುವಂತೆ ಮಾಡುವ ದಿನ ದೂರವಿಲ್ಲ ಎಂದು ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

ಗಿಲ್ಗಿಟ್‌-ಬಾಲ್ಟಿಸ್ತಾನ್‌ ಮರಳಿ ಪಡೆದಾಗ ನಮ್ಮ ಸಂಕಲ್ಪ ಪೂರ್ಣ
ಜಮ್ಮು ಕಾಶ್ಮೀರದ ಭಾಗವಾದ ಗಿಲ್ಗಿಟ್‌ ಬಾಲ್ಟಿಸ್ತಾನ್‌ ಪ್ರದೇಶಗಳನ್ನು ಮರಳಿ ಪಡೆದ ಬಳಿಕ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಜನರ ವಿರುದ್ಧ ನಡೆಸುತ್ತಿರುವ ದೌರ್ಜನ್ಯಗಳ ಪರಿಣಾಮವನ್ನು ಪಾಕಿಸ್ತಾನ ಅನುಭವಿಸಬೇಕಾಗುತ್ತದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಎಚ್ಚರಿಕೆ ನೀಡಿದ್ದರು. ಭಾರತೀಯ ಸೇನೆ 76ನೇ ಪದಾತಿದಳ ದಿನದ ಅಂಗವಾಗಿ ಆಯೋಜಿಸಿದ್ದ ‘ಶೌರ್ಯ ದಿವಸ್‌’ ಕಾರ‍್ಯಕ್ರಮದಲ್ಲಿ ಮಾತನಾಡಿದ್ದ ಸಿಂಗ್, ಜಮ್ಮು ಕಾಶ್ಮೀರ ಮತ್ತು ಲಡಾಖ್‌ ಪ್ರದೇಶಗಳನ್ನು ಅಭಿವೃದ್ಧಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಅಭಿವೃದ್ಧಿ ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶ, ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನ್‌ ಪ್ರದೇಶಗಳನ್ನು ತಲುಪಿದಾಗ ನಮ್ಮ ಸಂಕಲ್ಪ ಈಡೇರುತ್ತದೆ ಎಂದು ಹೇಳಿದ್ದರು.

2000 Red Fort Attack Case: ಲಷ್ಕರ್‌ ಭಯೋತ್ಪಾದಕನಿಗೆ ಗಲ್ಲು ಶಿಕ್ಷೆ ಖಚಿತಪಡಿಸಿದ ಸುಪ್ರೀಂ ಕೋರ್ಟ್‌!

ಇದೇ ವೇಳೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅವರು, ‘ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಜನರ ವಿರುದ್ಧ ನಡೆಸುತ್ತಿರುವ ದೌರ್ಜನ್ಯಗಳ ಪರಿಣಾಮವನ್ನು ಪಾಕಿಸ್ತಾನ ಎದುರಿಸಬೇಕಾಗುತ್ತದೆ. ಈ ಜನರ ನೋವು ಅವರಿಗಷ್ಟೇ ಅಲ್ಲ, ನಮಗೂ ನೋವುಂಟು ಮಾಡುತ್ತಿದೆ. ಕಾಶ್ಮೀರಿಯತ್‌ ಹೆಸರಿನಲ್ಲಿ ಜಮ್ಮು ಕಾಶ್ಮೀರ ಕಂಡಿರುವ ಭಯೋತ್ಪಾದನೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
 

Follow Us:
Download App:
  • android
  • ios