Asianet Suvarna News Asianet Suvarna News

ಕಾಶ್ಮೀರ ಶಾಲಾ ಸಿಬ್ಬಂದಿ ಮೇಲೆ ಉಗ್ರರ ದಾಳಿ, ಮತ್ತೆ ವಲಸೆ ಕಾರ್ಮಿಕರ ಟಾರ್ಗೆಟ್!

ಕಾಶ್ಮೀರಿಯೇತರ ಕಾರ್ಮಿಕರ ಮೇಲೆ ಉಗ್ರರ ದಾಳಿ ಮತ್ತೆ ಆರಂಭಗೊಂಡಿದೆ. ಇದೀಗ ಕಾಶ್ಮೀರದ ಖಾಸಗಿ ಶಾಲೆಯಲ್ಲಿ ಪಿಯೋನ್ ಒಗಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. 

Terrorist Attack two migrant labourers in Jammu and Kashmir Anantnag high alert in valley ckm
Author
First Published Nov 3, 2022, 9:34 PM IST

ಅನಂತನಾಗ್(ನ.03):  ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಹೆಚ್ಚಾಗಿದೆ. ಇತ್ತೀಚೆಗೆ ಕಾಶ್ಮೀರಿ ಪಂಡಿತರನ್ನು ಟಾರ್ಗೆಟ್ ಮಾಡಿ ಸತತ ದಾಳಿ ನಡೆದಿದೆ. ಇದರ ಪರಿಣಾಮ ಕಾಶ್ಮೀರಿ ಪಂಡಿತರು ತಮ್ಮ ತಮ್ಮ ನಿವಾಸಗಳಿಗೆ ಬೀಗ ಹಾಕಿ ಶ್ರೀನಗರ ಸೇರಿ ಇತರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಇದೀಗ ಉಗ್ರರು ಕಾಶ್ಮೀರಿಯೇತರ ಕಾರ್ಮಿಕರನ್ನು ಟಾರ್ಗೆಟ್ ಮಾಡಿದ್ದಾರೆ. ಈ ಬಾರಿ ಅನಂತನಾಗ್ ಜಿಲ್ಲೆಯಲ್ಲಿ ಖಾಸಗಿ ಶಾಲೆಯಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಘಟನೆ ನಡೆದ ದಿಯಾಲ್ಗಾಮ್ ವಲಯವನ್ನು ಭದ್ರತಾ ಪಡೆ ಸುತ್ತುವರಿದು ಕೂಬಿಂಗ್ ಕಾರ್ಯಾಚರಣೆ ಆರಂಭಿಸಿದೆ.

ಉಗ್ರರ ದಾಳಿಯಲ್ಲಿ ಗಾಯಗೊಂಡ ಓರ್ವ ಬಿಹಾರ ಮೂಲದವನಾಗಿದ್ದರೆ, ಮತ್ತೊರ್ವ ನೇಪಾಳ ಮೂಲದವನು. ದಾಳಿ ಬಳಿಕ ಟೆರರಿಸ್ಟ್ ಗ್ರೂಪ್ ರೆಸಿಸ್ಟೆನ್ಸ್ ಫ್ರಂಟ್(TRF) ಇದು ಎಚ್ಚರಿಕೆ ದಾಳಿ ಎಂದು ಪ್ರಕಟಣೆ ಹೊರಡಿಸಿದೆ. ಇಬ್ಬರು ಸ್ಥಳೀಯ ಮಾಹಿತಿಗಳನ್ನು ಭದ್ರತಾ ಪಡೆಗಳಿಗ ನೀಡುತ್ತಿದ್ದರು. ಇದು ಎಚ್ಚರಿಕೆ ದಾಳಿ ಎಂದಿದೆ. 

ಉಗ್ರರ ಟಾರ್ಗೆಟ್ ಯಶಸ್ಸು, ಚೌಧರಿಗುಂದ ಗ್ರಾಮದ ಕೊನೆಯ ಕಾಶ್ಮೀರಿ ಪಂಡಿತ್ ಮಹಿಳೆ ವಲಸೆ!

6 ತಿಂಗಳ ಹಿಂದೆ ಕಾಶ್ಮೀರದಲ್ಲಿ ಕಾಶ್ಮೀರಿಯೇತರ ಕಾರ್ಮಿಕರ ಟಾರ್ಗೆಟ್ ಮಾಡಿ ಹಲವು ದಾಳಿಗಳು ನಡೆದಿದೆ. ಇದರಲ್ಲಿ ಬಿಹಾರ ಮೂಲದ ಹಲವು ಕಾರ್ಮಿಕರು ನಿಧನರಾಗಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿ ಇತರ ರಾಜ್ಯದವರಿಗೆ ಇರಲು ಅವಕಾಶ ಮಾಡಿಕೊಟ್ಟಿದ್ದೇ ಕಾರಣ ಎಂದು ಉಗ್ರರು ಹೇಳಿಕೊಂಡಿದ್ದರು. ಪ್ರತಿ ಭಾರಿ ದಾಳಿ ಬಳಿಕ ಉಗ್ರರು ಒಂದೊಂದು ಕಾರಣ ನೀಡುತ್ತಿದ್ದಾರೆ. ಆದರೆ ಅಮಾಯಕ ಜೀವಗಳು ಬಲಿಯಾಗುತ್ತಲೇ ಇದೆ.

ಕಾಶ್ಮೀರದಲ್ಲಿ ಉಗ್ರ ದಾಳಿಗೆ ಯುರೋಪ್‌ನಲ್ಲಿ ಸಂಚು:
ಕಾಶ್ಮೀರದಲ್ಲಿ ಉಗ್ರ ದಾಳಿ ನಡೆಸಲು ಯುರೋಪ್‌ನಲ್ಲಿರುವ ಕೆಲ ವ್ಯಕ್ತಿಗಳು ಕುಮ್ಮಕ್ಕು ನೀಡಿದ್ದರು ಎಂದು ಭಾನುವಾರ ಬಂಧಿತರಾದ ಇಬ್ಬರು ಉಗ್ರರು ಬಾಯಿಬಿಟ್ಟಿದ್ದಾರೆ. ಪಾಕಿಸ್ತಾನದಿಂದ ಡ್ರೋನ್‌ ಮೂಲಕ ಕಳುಹಿಸಿದ್ದ ಸ್ಫೋಟಕ ಪದಾರ್ಥಗಳನ್ನು ಸ್ವೀಕರಿಸಿ ಕೊಂಡೊಯ್ಯುವ ವೇಳೆ ಚಂದರ್‌ಬೋಸ್‌ ಮತ್ತು ಶಂಶೇರ್‌ ಸಿಂಗ್‌ ಎಂಬಿಬ್ಬರು ಭಾನುವಾರ ಬಂಧಿಸಲಾಗಿತ್ತು. ವಿಚಾರಣೆ ವೇಳೆ, ಹಾಲಿ ಯುರೋಪ್‌ನಲ್ಲಿ ನೆಲೆಸಿರುವ ಬಲ್ವಿಂದರ್‌ ಎಂಬಾತನ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸುತ್ತಿದ್ದುದಾಗಿ ಮಾಹಿತಿ ನೀಡಿದ್ದಾರೆ. ಬಲ್ವಿಂದರ್‌ ಸೂಚನೆ ಮೇರೆಗೆ ತಮಗೆ ಪಾಕಿಸ್ತಾನದಿಂದ ಡ್ರೋನ್‌ ಮೂಲಕ ಸ್ಫೋಟಕ ಪದಾರ್ಥ, ಪಿಸ್ತೂಲ್‌ ಮೊದಲಾದವುಗಳನ್ನು ರವಾನಿಸಲಾಗಿತ್ತು ಎಂದು ಬಂಧಿತರು ಮಾಹಿತಿ ನೀಡಿದ್ದಾರೆ.

 

ಜಮ್ಮು ರೈಲು ನಿಲ್ದಾಣದಲ್ಲಿ 18 ಡಿಟೋನೇಟರ್, ಸ್ಫೋಟಕಗಳಿದ್ದ ಬ್ಯಾಗ್ ಪತ್ತೆ!

ಕಾಶ್ಮೀರದಲ್ಲಿ ನಿಲ್ಲದ ಪಂಡಿತರ ನರಮೇಧ
ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನು ಉಗ್ರರು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿದ ಭೀಕರ ಘಟನೆ ಶೋಪಿಯಾನ್‌ನಲ್ಲಿ ವರದಿಯಾಗಿದೆ. ಈ ಮೂಲಕ ಮತ್ತೆ ಕಾಶ್ಮೀರಿ ಪಂಡಿತರ ‘ಉದ್ದೇಶಪೂರ್ವಕ ಹತ್ಯೆ’ ಸರಣಿ ಮುಂದುವರೆದಿದೆ. ಪೂರಣ್‌ ಕೃಷನ್‌ ಭಟ್‌ ಎಂಬುವವರೇ ಉಗ್ರರ ಗುಂಡಿಗೆ ಬಲಿಯಾದ ದುರ್ದೈವಿ. ಇವರನ್ನು ಅವರ ನಿವಾಸದ ಬಳಿಯಿರುವ ಹಣ್ಣಿನ ತೋಟಕ್ಕೆ ಹೋಗುತ್ತಿರುವಾಗ ಚೌಧರಿಗುಂಡ್‌ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ. ಕಾಶ್ಮೀರ ಫ್ರೀಡಂ ಫೈಟರ್‌ (ಕೆಎಫ್‌ಎಫ್‌) ಎಂಬ ಹೊಸ ಉಗ್ರ ಸಂಘಟನೆ ಈ ಘಟನೆಯ ಹೊಣೆ ಹೊತ್ತಿದೆ. ಒಬ್ಬನೇ ಉಗ್ರ ದಾಳಿ ಮಾಡಿದ್ದು ತನಿಖೆಯ ವೇಳೆ ಗೊತ್ತಾಗಿದೆ.

Follow Us:
Download App:
  • android
  • ios