ಲಡಾಖ್(ಜು.18): ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಖ್‌ ಗಡಿ ಪ್ರದೇಶಕ್ಕೆ ಬೇಟಿ ನೀಡಿ ಭಾರತೀಯ ಸೇನೆಯ ಸಮರಾಭ್ಯಸ ವೀಕ್ಷಿಸಿದ್ದಾರೆ. ಪ್ಯಾಂಗಾಂಗ್ ಲೇಕ್‌ನಲ್ಲಿರುವ ಗಡಿ ನಿಯಂತ್ರಣ ರೇಖೆಯಿಂದ 43 ಕಿಲೋಮೀಟರ್ ದೂರದಲ್ಲಿ ಭಾರತೀಯ ಸೇನೆ ಶಕ್ತಿ ಪ್ರದರ್ಶನ ನಡೆಸಿದೆ. ವಿಶೇಷ ಅಂದರೆ ಪ್ಯಾರಾಟ್ರೂಪ್ ಹರ್ಕಲಸ್ ಸೂಪರ್ ಯುದ್ಧವಿಮಾನಿಂದ ಜಿಗಿದು ಸಾಹಸ ಪ್ರದರ್ಶಿಸಿದ್ದಾರೆ.

ಗಡೀಲಿ ಶಾಂತಿ ಸ್ಥಾಪನೆ: ಚೀನಾಕ್ಕೆ ಭಾರತದ 15 ಗಂಟೆಗಳ ನೀತಿಪಾಠ!.

ಅಮೆರಿಕ ನಿರ್ಮಿತ C-130J ಸೂಪರ್ ಹರ್ಕಲಸ್ ಯುದ್ಧ ವಿಮಾನದಿಂದ ಸೇನೆಯ ಪ್ಯಾರಾಟ್ರೂಫ್ ಯೋಧರು ಜಿಗಿದು ಸಾಹಸ ಪ್ರದರ್ಶಿಸಿದ್ದಾರೆ. ರಾಜನಾಥ್ ಸಿಂಗ್ ಸೇನೆಯ ಸಮರಭ್ಯಾಸವನ್ನು ವೀಕ್ಷಿಸಿದ್ದಾರೆ.   ರಾಜನಾಥ್ ಸಿಂಗ್ ಲಡಾಖ್‌ಗೆ 2 ದಿನದ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಭಾರತೀಯ ಸೇನೆ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥ ಎಂ.ಎಂ ನರವಾನೆ ಸಾಥ್ ನೀಡಿದ್ದಾರೆ.

 

ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಚೀನಿ ಸೈನಿಕರಿಗೆ ಅವಮಾನ; ತಪ್ಪು ಮುಚ್ಚಿಡಲು ಚೀನಾ ಯತ್ನ!.

ವಿಶ್ವಕ್ಕೆ ಶಾಂತಿ ಮಂತ್ರ ಪಠಿಸಿದ ದೇಶ ನಮ್ಮದು. ಎಲ್ಲರಲ್ಲೂ ಶಾಂತಿ , ಸೌಹಾರ್ಧತೆಯನ್ನೇ ಬಯಸಿದೆ. ಭಾರತ ಇದುವರೆಗೂ  ಇತರ ದೇಶದ ಯಾವುದೇ ಭೂಭಾಗ ಆಗ್ರಮಿಸಿಕೊಂಡಿಲ್ಲ. ಅಥವಾ ಹಕ್ಕು ಸಾಧಿಸುವ ಪ್ರಯತ್ನಕ್ಕೂ ಮುಂದಾಗಿಲ್ಲ. ಶಾಂತಿ ಕಾಪಾಡುವಲ್ಲಿ ಭಾರತದ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ರಾಜನಾಥ್ ಸಿಂಗ್ ಲಡಾಖ್‌ನಲ್ಲಿ ಹೇಳಿದ್ದಾರೆ.