ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಚೀನಿ ಸೈನಿಕರಿಗೆ ಅವಮಾನ; ತಪ್ಪು ಮುಚ್ಚಿಡಲು ಚೀನಾ ಯತ್ನ!
ಭಾರತದ ಜೊತೆ ಕಾಲು ಕೆರೆದು ಬಂದು ಭಾರತೀಯ ಸೈನಿಕರ ಮೇಲೆರಗಿದ ಚೀನಾ ಸೇನೆಗೆ ತಿರುಗೇಟು ನೀಡಿದ ಘಟನೆ ಇನ್ನೂ ಮಾಸಿಲ್ಲ. ಕಾರಣ ಈ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಅತ್ತ 35ಕ್ಕೂ ಹೆಚ್ಚು ಚೀನಾ ಸೈನಿಕರು ಹುತಾತ್ಮರಾಗಿದ್ದರು. ಆದರೆ ಚೀನಾ ತಪ್ಪನ್ನು ಮುಚ್ಚಿಡಲು ಚೀನಿ ಸೈನಿಕರಿಗೆ ಅವಮಾನ ಮಾಡಿದೆ.
ವಾಶಿಂಗ್ಟನ್(ಜು.14): ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಜೊತೆ ಸಂಘರ್ಷಕ್ಕಿಳಿದ ಚೀನಾಗೆ ತಕ್ಕ ತಿರುಗೇಟು ನೀಡಲಾಗಿದೆ. ಸುಮಾರು 35ಕ್ಕೂ ಹೆಚ್ಚು ಚೀನಾ ಸೈನಿಕರು ಹುತಾತ್ಮರಾಗಿದ್ದರು. ಆದರೆ ಚೀನಾ ಮಾತ್ರ ಈ ಮಾತನ್ನು ಅಲ್ಲಗೆಳೆದು ತಪ್ಪನ್ನು ಮುಚ್ಚಿಡುವ ಪ್ರಯತ್ನ ಮಾಡಿತ್ತು. ಇದೀಗ ಅಮೆರಿಕ ಗುಪ್ತಚರ ಇಲಾಖೆ ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದು, ಚೀನಾಗೆ ತೀವ್ರ ಮುಖಭಂಗವಾಗಿದೆ.
ಮೋದಿ ಭೇಟಿಗೆ ಬೆದರಿದ ಚೀನಾ, ಗಾಲ್ವಾನ್‌ನಿಂದ ಕಾಲ್ಕಿತ್ತ ಸೇನೆ
ಚೀನಾ ತನ್ನ ತಪ್ಪನ್ನು ಮುಚ್ಚಿಡಲು ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಚೀನಿ ಸೈನಿಕರಿಗೆ ಚೀನಾ ಸರ್ಕಾರ ಗೌರವೇ ನೀಡಿಲ್ಲ. ಗೌರವಯುತ ಅಂತ್ಯಸಂಸ್ಕಾರ ಮಾಡಿಲ್ಲ. ಕಾರಣ ಜಗತ್ತಿಗೆ ತಿಳಿಯಬಾರದು ಎಂದು ಹುತಾತ್ಮ ಸೈನಿಕರನ್ನು ಅವರ ಕುಟುಂಬಕ್ಕೆ ಸಾಗಿಸಿ ಗೌಪ್ಯವಾಗಿ ಅಂತ್ಯಸಂಸ್ಕಾರ ಮಾಡಿ ಮುಗಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ.
ಗಲ್ವಾನ್ ಕಣಿವೆಯಲ್ಲಿ ಚೀನಾ 33 ದಿನಗಳ ಕುತಂತ್ರ: ಘರ್ಷಣೆ ತೆಗೆದು ಭರದಿಂದ ನಿರ್ಮಾಣ ಕಾಮಗಾರಿ!.
ಗಲ್ವಾನ್ ಕಣಿವೆ ಸಂಘರ್ಷದಲ್ಲಿ ಭಾತದ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಷ್ಟೇ ಹುತಾತ್ಮರಾದ ಸೈನಿಕರಿಗೆ ಗೌರವಪೂರ್ಣ ಶ್ರದ್ದಾಂಜಲಿ ಅರ್ಪಿಸಿದೆ. ಆದರೆ ಚೀನಾ ತನ್ನ ಪ್ರತಿಷ್ಠೆಗೆ ಬಿದ್ದು ಸೈನಿಕರಿಗೆ ಅವಮಾನ ಮಾಡಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ.