Asianet Suvarna News Asianet Suvarna News

ಕುತಂತ್ರಿ ಚೀನಾಕ್ಕೆ ಪಾಠ ಕಲಿಸಲು ಸೇನೆಗೆ ಅಧಿಕಾರ

ಚೀನಾ ಹಿಮ್ಮೆಟ್ಟಿಸಲು ಸೇನೆಗೆ ಸಂಪೂರ್ಣ ಅಧಿಕಾರ/ ಕೇಂದ್ರ ಸರ್ಕಾರದ ದಿಟ್ಟ ಕ್ರಮ/ ಗ್ಯಾಲ್ವಾನ್ ಪ್ರದೇಶದಲ್ಲಿ ಸೇನೆಯೇ ಸಾರ್ವಭೌಮ/  ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಕ್ರಮ

Indian Army given emergency powers to combat Chinese aggression at LAC
Author
Bengaluru, First Published Jun 17, 2020, 5:17 PM IST

ನವದೆಹಲಿ ( ಜೂ. 17) ಗ್ಯಾಲ್ವಾನ್ ಪ್ರದೇಶದಲ್ಲಿ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿರುವ ಚೀನಾಕ್ಕೆ ತಕ್ಕ ಬುದ್ಧಿ ಕಲಿಸಲು ಭಾರತ ಸೇನೆಗೆ ಹೆಚ್ಚಿನ ಅಧಿಕಾರ ನೀಡಿದೆ.

ಲೈನ್ ಆಫ್ ಕಂಟ್ರೋಲ್ ನಲ್ಲಿ ಸುರಕ್ಷತೆ ದೃಷ್ಟಿಯಿಂದ ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲು ಸೇನೆಗೆ ಅಧಿಕಾರ  ನೀಡಲಾಗಿದೆ.  ಹೋರಾಡುತ್ತ 20 ಯೋಧರು ಹುತಾತ್ಮರಾದ ನಂತರ ಕೇಂದ್ರ ಸರ್ಕಾರ ಈ ದಿಟ್ಟ ಕ್ರಮ ತೆಗೆದುಕೊಂಡಿದೆ.

ಒಂದು ತಿಂಗಳಿನಿಂದ ನಡೆಯುತ್ತಿದ್ದ ತಿಕ್ಕಾಟ ಇದೀಗ ವಿಕೋಪಕ್ಕೆ ತಿರುಗಿದ್ದು ಕಾರಣವಿಲ್ಲದೇ ದಾಳಿ ಮಾಡುತ್ತಿರುವ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. 

ಬಲಿದಾನ ಮಾಡಿದ ಇಪ್ಪತ್ತು ಯೋಧರ ಹೆಸರು, ನಿಮಗೊಂದು ಸೆಲ್ಯೂಟ್

ಭಾರತೀಯ ಯೋಧರೆ ಮೊದಲು ತಗಾದೆ ತೆಗೆದರು ಎಂದು ಸುಳ್ಳು ಆರೋಪ ಮಾಡುತ್ತಿರುವ ಚೀನಾ ತಾನು ಎಷ್ಟು ಸೈನಿಕರನ್ನು ಕಳೆದುಕೊಂಡಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ.  ತೆಲಂಗಾಣದ ಸಂತೋಷ್ ಬಾಬು, ತಮಿಳುನಾಡಿನ ಆದಿತ್ಯ ಸೇರಿ ಯೋಧರು ಬಲಿದಾನ ಮಾಡಿದ್ದಾರೆ.

 

Follow Us:
Download App:
  • android
  • ios