1947ರ ಅಕ್ಟೋಬರ್ 27ರಂದು ಪಾಕಿಸ್ತಾನ ಬೆಂಬಲಿತ ಶತ್ರುಗಳು ಕಾಶ್ಮೀರದೊಳಗೆ ನುಗ್ಗಿದಾಗ, ಭಾರತೀಯ ಸೇನೆಯು ಶ್ರೀನಗರಕ್ಕೆ ಧಾವಿಸಿ ದಿಟ್ಟ ಹೋರಾಟ ನಡೆಸಿತು. ಮಹಾರಾಜ ಹರಿಸಿಂಗ್ ಅವರ ವಿಲೀನ ಒಪ್ಪಂದದ ನಂತರ ನಡೆದ ಈ ಐತಿಹಾಸಿಕ ಕಾರ್ಯಾಚರಣೆಯು ಕಾಶ್ಮೀರವನ್ನು ರಕ್ಷಿಸಿತು. ಈ ದಿನವನ್ನು 'ಶೌರ್ಯ ದಿವಸ್' ಎಂದು ಆಚರಿಸಲಾಗುತ್ತದೆ.

27 ಅಕ್ಟೋಬರ್ 1947ರ ಮುಂಜಾನೆ ಭಾರತೀಯ ಸೇನೆಯ ಮೊದಲ ಸಿಖ್ ರೆಜಿಮೆಂಟ್ ವಿಮಾನಗಳ ಮೂಲಕ ಶ್ರೀನಗರದ ಏರ್‌ಪೋರ್ಟ್‌ಗೆ ಬಂದು ಇಳಿಯಿತು. ಇದಕ್ಕೂ ಒಂದು ದಿನ ಮುನ್ನ, ಅಂದರೆ ಅಕ್ಟೋಬರ್ 26 ರಂದು ಜಮ್ಮು-ಕಾಶ್ಮೀರದ ಮಹಾರಾಜ ಹರಿಸಿಂಗ್ ಅವರು ಅಧಿಕೃತವಾಗಿ ಭಾರತದೊಂದಿಗೆ ವಿಲೀನವಾಗುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಗಡಿ ದಾಟಿದ ಶತ್ರುಗಳು!

ಪಾಕಿಸ್ತಾನ ಬೆಂಬಲಿತ ಸಾವಿರಾರು ಕಬಾಲಿ (ಬುಡಕಟ್ಟು) ದರೋಡೆಕೋರರು ಮತ್ತು ಪಾಕ್ ಸೈನಿಕರು ಅಕ್ರಮವಾಗಿ ಕಾಶ್ಮೀರದ ಗಡಿಯನ್ನು (ಲಕ್ಷ್ಮಣ ರೇಖೆ) ದಾಟಿ ಶ್ರೀನಗರದ ಕಡೆಗೆ ನುಗ್ಗುತ್ತಿದ್ದರು. ಶತ್ರುಗಳು ಬಾರಾಮುಲ್ಲಾವನ್ನು ವಶಪಡಿಸಿಕೊಂಡು, ಲೂಟಿ ಮತ್ತು ದೌರ್ಜನ್ಯ ಎಸಗುತ್ತಾ ಶ್ರೀನಗರ ಏರ್‌ಪೋರ್ಟ್ ಕೇವಲ ಕೆಲವು ಕಿಲೋಮೀಟರ್ ದೂರದಲ್ಲಿದ್ದಾಗ ಭಾರತೀಯ ಸೇನೆ ಎಂಟ್ರಿ ಕೊಟ್ಟಿತ್ತು.

ಶೌರ್ಯದ ಹೋರಾಟ!

ಲೆಫ್ಟಿನೆಂಟ್ ಕರ್ನಲ್ ದಿವಾನ್ ರಂಜಿತ್ ರಾಯ್ ನೇತೃತ್ವದಲ್ಲಿ ಭಾರತೀಯ ಸೈನಿಕರು ಶತ್ರುಗಳ ಮುನ್ನಡೆಯನ್ನು ತಡೆದು, ಅವರನ್ನು ಹಿಮ್ಮೆಟ್ಟಿಸಲು ಪ್ರಾಣದ ಹಂಗು ತೊರೆದು ಹೋರಾಡಿದರು. ಸ್ವಾತಂತ್ರ್ಯದ ನಂತರ ಭಾರತೀಯ ವಾಯುಪಡೆ (IAF) ಮತ್ತು ನಾಗರಿಕ ವಿಮಾನಗಳ ನೆರವಿನಿಂದ ಅತ್ಯಂತ ಯಶಸ್ವಿಯಾಗಿ ನಡೆದ ದೇಶದ ಮೊದಲ ಬೃಹತ್ ಸೇನಾ ಏರ್‌ಲಿಫ್ಟ್ ಕಾರ್ಯಾಚರಣೆ ಇದಾಗಿತ್ತು.

ಕಾಶ್ಮೀರದ ರಕ್ಷಣೆ!

ಭಾರತೀಯ ಸೇನೆಯ ಸಕಾಲಿಕ ಪ್ರವೇಶದಿಂದಾಗಿ ಶ್ರೀನಗರ ಮತ್ತು ಇಡೀ ಕಾಶ್ಮೀರ ಕಣಿವೆ ಪಾಕಿಸ್ತಾನದ ಪಾಲಾಗುವುದು ತಪ್ಪಿತು. ಶೌರ್ಯ ದಿವಸ್ ಆಚರಣೆ: ಈ ಐತಿಹಾಸಿಕ ದಿನದ ನೆನಪಿಗಾಗಿ ಪ್ರತಿ ವರ್ಷ ಅಕ್ಟೋಬರ್ 27 ರಂದು ಭಾರತೀಯ ಸೇನೆಯು 'ಶೌರ್ಯ ದಿವಸ್' ಎಂದು ನಾಮಕಾರಣ ಮಾಡಲಾಗಿದೆ.

ಲಾರ್ಡ್ ಮೌಂಟ್‌ಬ್ಯಾಟನ್ ಒಪ್ಪಿಗೆ!

ಮಹಾರಾಜ ಹರಿಸಿಂಗ್ ಅವರು ಸಹಿ ಮಾಡಿದ ವಿಲೀನ ಪತ್ರಕ್ಕೆ ಅಕ್ಟೋಬರ್ 27ರಂದೇ ಭಾರತದ ಅಂದಿನ ಗವರ್ನರ್ ಜನರಲ್ ಲಾರ್ಡ್ ಮೌಂಟ್‌ಬ್ಯಾಟನ್ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದರು. ಇದು ಕಾನೂನಾತ್ಮಕವಾಗಿ ಕಾಶ್ಮೀರ ಭಾರತದ ಭಾಗವಾಗಲು ಕಾರಣವಾಯಿತು. ಮಹಾರಾಜರ ನಿರ್ಧಾರಕ್ಕೆ ಕಾಶ್ಮೀರದ ಜನಪ್ರಿಯ ನಾಯಕ ಶೇಖ್ ಅಬ್ದುಲ್ಲಾ ಮತ್ತು ಅವರ 'ನ್ಯಾಷನಲ್ ಕಾನ್ಫರೆನ್ಸ್' ಪಕ್ಷದ ಪೂರ್ಣ ಬೆಂಬಲವಿತ್ತು. ಸ್ಥಳೀಯ ಕಾಶ್ಮೀರಿಗಳು ಸಹ ಭಾರತೀಯ ಸೇನೆಗೆ ಶತ್ರುಗಳ ವಿರುದ್ಧ ಹೋರಾಡಲು ನೆರವು ನೀಡಿದರು.

ನೆಹರೂ ಮತ್ತು ಪಟೇಲರ ರಾಜತಾಂತ್ರಿಕ ನಡೆ!

ಪಾಕಿಸ್ತಾನದ ತಂತ್ರವನ್ನು ಅರಿತ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ತಡಮಾಡದೆ, ತಕ್ಷಣವೇ ಸೇನೆಯನ್ನು ಕಳುಹಿಸುವ ಐತಿಹಾಸಿಕ ಮತ್ತು ದಿಟ್ಟ ರಾಜತಾಂತ್ರಿಕ ತೀರ್ಮಾನ ಕೈಗೊಂಡರು. ಬಾರಾಮುಲ್ಲಾದ ಮರು ವಶ: ಶ್ರೀನಗರವನ್ನು ಸುರಕ್ಷಿತಗೊಳಿಸಿದ ನಂತರ, ಭಾರತೀಯ ಸೇನೆಯು ಶತ್ರುಗಳು ರಕ್ತಪಾತ ಮಾಡಿದ್ದ ಬಾರಾಮುಲ್ಲಾ ನಗರದ ಕಡೆಗೆ ನುಗ್ಗಿ, ಕೆಲವೇ ದಿನಗಳಲ್ಲಿ ಪಾಕ್ ಪಡೆಗಳನ್ನು ಅಲ್ಲಿಂದ ಸಂಪೂರ್ಣವಾಗಿ ಓಡಿಸಿ ವಿಜಯ ಪತಾಕೆ ಹಾರಿಸಿತು.ದ ಆಚರಿಸುತ್ತದೆ.