Asianet Suvarna News Asianet Suvarna News

ಸಿಯಾಚಿನ್‌ ನೀರ್ಗಲ್ಲಿನಲ್ಲಿ ಸೇನೆ ನಿಯೋಜನೆಗೆ 40 ವರ್ಷ

ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ ನಿರ್ಗಲ್ಲಿನಲ್ಲಿ ನಮ್ಮ ದೇಶದ ಸೇನೆ ನಿಯೋಜನೆ ಮಾಡಿ ನಾಲ್ಕು ದಶಕ ಸಂದಿವೆ. ಕಾರಾಕೋರಂ ಪರ್ವತ ಶ್ರೇಣಿಯಲ್ಲಿರುವ ಈ ಪ್ರದೇಶ ಜಗತ್ತಿನ ಅತಿ ಎತ್ತರದ ಮಿಲಿಟರಿ ವಲಯ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ.

Indian Army celebrates 40 yrs of Operation Meghdoot on Siachen Glacier rav
Author
First Published Apr 14, 2024, 7:08 AM IST

ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ ನಿರ್ಗಲ್ಲಿನಲ್ಲಿ ನಮ್ಮ ದೇಶದ ಸೇನೆ ನಿಯೋಜನೆ ಮಾಡಿ ನಾಲ್ಕು ದಶಕ ಸಂದಿವೆ.

ಕಾರಾಕೋರಂ ಪರ್ವತ ಶ್ರೇಣಿಯಲ್ಲಿರುವ ಈ ಪ್ರದೇಶ ಜಗತ್ತಿನ ಅತಿ ಎತ್ತರದ ಮಿಲಿಟರಿ ವಲಯ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಸಮುದ್ರ ಮಟ್ಟದಿಂದ 20 ಸಾವಿರ ಅಡಿ ಎತ್ತರವನ್ನು ಹೊಂದಿರುವ ಸಿಯಾಚಿನ್ ನಿರ್ಗಲ್ಲಿನಲ್ಲಿ ಏಪ್ರಿಲ್ 13, 1984 ರಂದು ಆಪರೇಷನ್ ಮೇಘದೂತ್ ಅಡಿಯಲ್ಲಿ ಆ ಪ್ರದೇಶವನ್ನು ತಮ್ಮ ಸುಪರ್ದಿಗೆ ತೆಗದುಕೊಳ್ಳುವುದಕ್ಕೆ ಭಾರತ ಅಲ್ಲಿ ಸೇನೆಯನ್ನು ನಿಯೋಜನೆ ಮಾಡಿತ್ತು. ಆ ಕಾರ್ಯಾಚರಣೆ ನಡೆದು 40 ವರ್ಷ ತುಂಬಿದೆ.

ಅತಿ ಕಠಿಣ ಎಂದು ಕರೆಯಲ್ಪಡುವ ಈ ಯುದ್ಧಭೂಮಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ವೈದ್ಯಕೀಯ , ತಂತ್ರಜ್ಞಾನ ಸೇರಿದಂತೆ ಹಲವು ವಲಯಗಳಲ್ಲಿ ಸೈನಿಕರಿಗೆ ಪೂರಕ ವಾತವಾರಣ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಯಾಚಿನ್‌ಗೆ ಮೊದಲ ಬಾರಿ ಮಹಿಳಾ ಅಧಿಕಾರಿ ನೇಮಕ: ಕುಮಾರ್‌ ಪೋಸ್ಟ್‌ಗೆ ಶಿವ ನಿಯೋಜನೆ

Follow Us:
Download App:
  • android
  • ios