ಸಿಯಾಚಿನ್‌ಗೆ ಮೊದಲ ಬಾರಿ ಮಹಿಳಾ ಅಧಿಕಾರಿ ನೇಮಕ: ಕುಮಾರ್‌ ಪೋಸ್ಟ್‌ಗೆ ಶಿವ ನಿಯೋಜನೆ

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಗುರುತಿಸಲ್ಪಡುವ ಸಿಯಾಚಿನ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಸೇನೆಯ ಫೈರ್‌ ಆ್ಯಂಡ್‌ ಪ್ಯೂರಿ ಕಾರ್ಫ್ಸ್‌ಗೆ ಸೇರಿದ ಶಿವ ಚೌಹಾಣ್‌ ಅವರನ್ನು ಸಿಯಾಚಿನ್‌ಗೆ ನಿಯೋಜಿಸಲಾಗಿದೆ. ಇಲ್ಲಿಗೆ ಮಹಿಳಾ ಯೋಧರೊಬ್ಬರ ನಿಯೋಜನೆ ಇದೆ ಮೊದಲು

First time woman officer appointed to Siachen Shiva chouhan appointed to Kumar post akb


ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಗುರುತಿಸಲ್ಪಡುವ ಸಿಯಾಚಿನ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಸೇನೆಯ ಫೈರ್‌ ಆ್ಯಂಡ್‌ ಪ್ಯೂರಿ ಕಾರ್ಫ್ಸ್‌ಗೆ ಸೇರಿದ ಶಿವ ಚೌಹಾಣ್‌ ಅವರನ್ನು ಸಿಯಾಚಿನ್‌ಗೆ ನಿಯೋಜಿಸಲಾಗಿದೆ. ಇಲ್ಲಿಗೆ ಮಹಿಳಾ ಯೋಧರೊಬ್ಬರ ನಿಯೋಜನೆ ಇದೆ ಮೊದಲು

ಸೇನೆ ನೀಡಿದ ಕಠಿಣ ತರಬೇತಿಯನ್ನು ಮುಕ್ತಾಯಗೊಳಿಸಿದ ಬಳಿಕ ಶಿವ (Shiva) ಅವರನ್ನು ಸಮುದ್ರ ಮಟ್ಟದಿಂದ 15632 ಅಡಿ ಎತ್ತರದಲ್ಲಿರುವ ಸಿಯಾಚಿನ್‌ನ ಕುಮಾರ್‌ ಪೋಸ್ಟ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಫೈರ್‌ ಅಂಡ್‌ ಫ್ಯೂರಿ, ಉಧಂಪುರದಲ್ಲಿ (Udhampur) ತನ್ನ ಕೇಂದ್ರ ನೆಲೆ ಹೊಂದಿದ್ದು, ಇದು ಅತ್ಯಂತ ಶೀತವಲಯದಲ್ಲಿ ಕಾರ್ಗಿಲ್‌ನ (Kargil) ಲೇಹ್‌ ಗಡಿಯಲ್ಲಿ (Leh border) ಕರ್ತವ್ಯ ನಿರ್ವಹಿಸುತ್ತದೆ. ಪ್ರಸ್ತುತ ಸಿಯಾಚಿನ್‌ನ ಉಷ್ಣಾಂಶ -31 ಡಿಗ್ರಿ ಸೆ.ನಷ್ಟಿದೆ. ಈ ಮೊದಲು ಸಮುದ್ರಮಟ್ಟದಿಂದ 9000 ಅಡಿ ಎತ್ತರದಲ್ಲಿರುವ ಸಿಯಾಚಿನ್‌ ಬೇಸ್‌ ಕ್ಯಾಂಪ್‌ನಲ್ಲಿ ಮಹಿಳಾ ಯೋಧರ (women soldiers) ನಿಯೋಜನೆ ಮಾಡಲಾಗಿತ್ತು.

ಲ್ಯಾನ್ಸ್ ನಾಯಕ್ ಹನುಮಂತಪ್ಪ; ಮತ್ತೆ ಮತ್ತೆ ನೆನಪಾಗುವ ಕರ್ನಾಟಕದ ವೀರ ಯೋಧನಿಗೆ ಸಲ್ಯೂಟ್!

ಬಾಲ್ಯದಿಂದಲೂ ಸೇನೆ ಸೇರಬೇಕೆಂಬ ಆಸೆ ಹೊಂದಿದ್ದ ಶಿವ ಚೌಹಾಣ್ (Shiv Chauhan), 11 ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲಿ ಬೆಳೆದರು. ರಾಜಸ್ಥಾನ (Rajasthan) ಮೂಲದ ಇವರು ಉದಯ್‌ಪುರದ ಎನ್‌ಜೆಆರ್ ತಾಂತ್ರಿಕ ಸಂಸ್ಥೆಯಲ್ಲಿ ಸಿವಿಲ್ ಎಂಜಿನಿಯರಿಂಗ್ (Civil Engineering) ಪದವಿ ಪಡೆದಿದ್ದಾರೆ. ಚೆನ್ನೈನಲ್ಲಿ ತರಬೇತಿ ಪಡೆದ ಬಳಿಕ 2012ರ ಮೇನಲ್ಲಿ ಎಂಜಿನಿಯರಿಂಗ್ ರೆಜಿಮೆಂಟ್‌ಗೆ (Engineering Regiment) ನಿಯೋಜನೆಗೊಂಡಿದ್ದರು. 

ಭಾರತಕ್ಕೆ ಸಿಯಾಚಿನ್‌ ದೊರಕಿಸಿದ್ದ ಕರ್ನಲ್‌ ಬುಲ್‌ ಕುಮಾರ್‌ ಇನ್ನಿಲ್ಲ!


 

Latest Videos
Follow Us:
Download App:
  • android
  • ios