Asianet Suvarna News Asianet Suvarna News

Kupwara Terror operation ಶವ ತೆಗೆದುಕೊಂಡು ಹೋಗಿ, ಉಗ್ರನ ಹತ್ಯೆಗೈದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಭಾರತೀಯ ಸೇನೆ!

  • ಭಾರತದ ಒಳ ನುಸುಳಲು ಯತ್ನಿಸಿದ ಪಾಕಿಸ್ತಾನ ಉಗ್ರ
  • ಉಗ್ರನಿಗೆ ತಕ್ಕ ಶಾಸ್ತಿ ಮಾಡಿದ ಭಾರತೀಯ ಸೇನ
  • ಪಾಕಿಸ್ತಾನ ಉಗ್ರ ಶವ ತೆಗೆದುಕೊಂಡು ಹೋಗಿ ಎಂದು ಪಾಕ್‌ಗೆ ಎಚ್ಚರಿಕೆ
Indian Army asked Pakistan to take back the body of the killed Terrorist in kupwara Operation ckm
Author
Bengaluru, First Published Jan 2, 2022, 9:14 PM IST

ಶ್ರೀನಗರ(ಜ.02):  ಹೊಸ ವರ್ಷ(New Year 2022) ಭಾರತೀಯ ಸೇನೆ(Indian Army)  ಪಾಕಿಸ್ತಾನ ಹಾಗೂ ಚೀನಾ ಸೇನೆಗೆ ಗಡಿಯಲ್ಲಿ ಸಿಹಿ ಹಂಚಿ ಶುಭಾಶಯ ಕೋರಿತ್ತು. ಆದರೆ ಅದೇ ದಿನ  ಭಾರತ ನುಸುಳಲು ಯತ್ನಿಸಿದ ಪಾಕಿಸ್ತಾನ ಸೇನೆ ಪ್ರಾಯೋಜಕತ್ವದ ಉಗ್ರನನ್ನು(Pak Terror) ಭಾರತೀಯ ಸೇನೆ ಹತ್ಯೆಗೈದಿದೆ. ಬಳಿಕ ಪಾಕಿಸ್ತಾನ ಸೇನೆಗೆ ಕರೆ ಮಾಹಿತಿ ನಿಮ್ಮ ಪ್ರಜೆ, ಉಗ್ರನ ಹತ್ಯೆ ಮಾಡಿದ್ದೇವೆ, ಶವ ತೆಗೆದುಕೊಂಡು ಹೋಗಿ ಖಡಕ್ ವಾರ್ನಿಂಗ್ ನೀಡಿದೆ. ಈ ಮೂಲಕ ಹೊಸ ವರ್ಷದಲ್ಲಿ ನಮ್ಮ ತಂಟೆಗೆ ಬಂದರೆ ಪ್ರತ್ಯುತ್ತರ ನೀಡುವ ಶೈಲಿಯೇ ಬೇರೆ ಎಂದು ಭಾರತೀಯ ಸೇನೆ ಉತ್ತರ ನೀಡಿದೆ.

ಹೊಸ ವರ್ಷದಲ್ಲಿ ಪಾಕಿಸ್ತಾನ ಸೇನೆ ಗಡಿ ನಿಯಮ(India Pakistan Border) ಉಲ್ಲಂಘಿಸಿದೆ. ಪಾಕಿಸ್ತಾನ ಸೇನೆ ಪ್ರಾಯೋಜಕತ್ವದ ಪಾಕ್ ಉಗ್ರ ಕುಪ್ವಾರದ ಕೆರಾನ್ ಸೆಕ್ಟರ್‌ ಬಳಿ(Kupwara Operation) ಭಾರತದೊಳಗೆ ನುಸುಳಲು ಯತ್ನಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತಗೊಂಡ ಬಾರ್ಡರ್ ಆ್ಯಕ್ಷನ್ ಟೀಮ್(BAT) ಉಗ್ರನ ಹತ್ಯೆಗೈದಿದೆ. ಹತ್ಯೆಯಾದ ಪಾಕ್ ಉಗ್ರ ಮೊಹಮ್ಮದ್ ಶಬ್ಬೀರ್ ಮಲಿಕ್ ಎಂದು ಗುರುತಿಸಲಾಗಿದ್ದು, ಈತನ ಪಾಕಿಸ್ತಾನಿ ಪ್ರಜೆ. 

Border Friendship ಹೊಸ ವರ್ಷಕ್ಕೆ ಪಾಕಿಸ್ತಾನ, ಚೀನಾ ಸೇನೆಗೆ ಸಿಹಿ ಹಂಚಿ ಮಹತ್ವದ ಸಂದೇಶ ಸಾರಿದ ಭಾರತೀಯ ಸೇನೆ!

ವಿಚಾರಣೆಯಿಂದ ಹತನಾದ ಉಗ್ರ ಪಾಕಿಸ್ತಾನಿ ಪ್ರಜೆ ಎಂದು ಸಾಬೀತಾಗಿದೆ. ಮರುಕ್ಷಣದಲ್ಲೇ ಪಾಕಿಸ್ತಾನ ಸೇನೆಗೆ ಹಾಟ್‌ಲೈನ್ ಕಮ್ಯೂನಿಕೇಶನ್ ಮೂಲಕ ಭಾರತೀಯ ಸೇನೆಗೆ ಮಾಹಿತಿ ನೀಡಿದೆ. ನಿಮ್ಮ ಉಗ್ರನನ್ನು ಹತ್ಯೆ ಮಾಡಲಾಗಿದೆ. ಬಂದು ಶವ ತೆಗೆದುಕೊಂಡು ಹೋಗಿ ಎಂದು ಖಡಕ್ ವಾರ್ನಿಂಗ್ ನೀಡಿದೆ. ಇಷ್ಟೇ ಅಲ್ಲ ಗಡಿಯಲ್ಲಿ ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಭಾರತ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಭಾರತೀಯ ಸೇನೆಯ ಮೇಜರ್ ಜನರಲ್ ಅಭಿಜಿತ್ ಎಸ್ ಪೆಂದಾಕರ್ ಕುಪ್ವಾರ ಆಪರೇಶನ್ ಮಾಹಿತಿ ನೀಡಿದ್ದಾರೆ. ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಈ ಮೂಲಕ ಗಡಿ ನಿಯಮ ಉಲ್ಲಂಘಿಸಿದೆ. ಇದರ ಜೊತೆಗೆ ಉಗ್ರರಿಗೆ ನೆರವು ನೀಡುತ್ತಿದೆ. ಪಾಕ್ ಸೇನೆಯ ನೆರವಿನಿಂದ ಉಗ್ರರು ಭಾರತದ ಗಡಿಯೊಳಕ್ಕೆ ನುಸುಳುವ ಯತ್ನ ಮಾಡುತ್ತಿದೆ. ಆದರೆ ಪಾಕಿಸ್ತಾನ ಪ್ರತಿ ಭಾರಿ ನಿರಾಕರಿಸುತ್ತಲೇ ಬಂದಿದೆ. ಇದೀಗ ಪಾಕಿಸ್ತಾನ ಉಗ್ರನ ಕುರಿತು ಸಾಕ್ಷ್ಯ ಸಮೇತ ಮಾಹಿತಿ ಇದೆ. ಆದರೆ ಪಾಕಿಸ್ತಾನದ ಈ ರೀತಿ ಕುತಂತ್ರ ನಡೆಯುವುದಿಲ್ಲ. ಭಾರತೀಯ ಸೇನೆ ಪ್ರತ್ಯುತ್ತರಕ್ಕೆ ದುಬಾರಿ ಬೆಲೆ ತೆರಬೇಕಾದಿತು ಎಂದು ಮೇಜರ್ ಜನರಲ್ ಅಭಿಜಿತ್ ಎಚ್ಚರಿಸಿದ್ದಾರೆ.

Indo China border tensions ಹಿಂದೂ ಮಹಾಸಾಗರದಲ್ಲಿ ಚೀನಾ ಬಂದರು ನಿರ್ಮಾಣ, ಹೆಚ್ಚಿತು ಭಾರತದ ಆತಂಕ!

ಕೆರಾನ್ ಸೆಕ್ಟರ್ ಬಳಿ ಈ ಬಾರಿ ನಡೆದ ಘಟನೆ 2020ರ ಎಪ್ರಿಲ್ ತಿಂಗಳಲ್ಲೂ ನಡೆದಿತ್ತು. ಅಂದು ಕೂಡ ಒರ್ವ ಪಾಕಿಸ್ತಾನ ಉಗ್ರನ ಹತ್ಯೆ ಮಾಡಲಾಗಿದೆ. ಫೆಬ್ರವರಿ 2021ರಲ್ಲಿ ಭಾರತ ಹಾಗೂ ಪಾಕಿಸ್ತಾನ ಗಡಿ ನಡುವೆ ಗಡಿ ಒಪ್ಪಂದ ಮಾಡಿಕೊಂಡಿದೆ. ಅಪ್ರಚೋದಿತ ಗುಂಡಿನ ದಾಳಿ, ಉಗ್ರರ ಹತ್ತಿಕ್ಕಲು ಹಾಗೂ ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಂದ ಮಾಡಿಕೊಂಡಿದೆ. ಆದರೆ  ಈ ಒಪ್ಪಂದವನ್ನು ಪಾಕಿಸ್ತಾನ ಹಲವು ಭಾರಿ ಉಲ್ಲಂಘಿಸಿದೆ.

ಭಾರತ ತನ್ನ ಗಡಿಯುದ್ದಕ್ಕೂ ಹದ್ದಿನ ಕಣ್ಣಿಟ್ಟಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸನ್ನದ್ಧವಾಗಿದೆ. ಅದರಲ್ಲೀ 2022ರ ಮೊದಲ ದಿನವೇ ಭಾರತೀಯ ಸೇನೆಯ ಹೊಸ ಶೈಲಿ ಕಾರ್ಯನಿರ್ವಹಣೆ ನೋಡಬಹುದಾಗಿದೆ. ಭಾರತೀಯ ಸೇನೆ ಖಡಕ್ ತಿರುಗೇಟಿಗೆ ಇದೀಗ ಪಾಕಿಸ್ತಾನ ಮಾತ್ರವಲ್ಲ ಅತ್ತ ಚೀನಾ ಕೂಡ ಬೆಚ್ಚಿದೆ.

Follow Us:
Download App:
  • android
  • ios