ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನವು ಭಾರತದ ವಿಮಾನಗಳಿಗೆ ವಾಯುಸೀಮೆ ನಿರ್ಬಂಧಿಸಿದ್ದು, ಇದರಿಂದಾಗಿ ಭಾರತೀಯ ವಿಮಾನಯಾನ ಕಂಪನಿಗಳಿಗೆ ವಾರ್ಷಿಕ 3700 ಕೋಟಿ ರು. ಹೆಚ್ಚುವರಿ ಹೊರೆ ಉಂಟಾಗಲಿದೆ.

ಮುಂಬೈ/ನವದೆಹಲಿ: ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನವು ಭಾರತದ ವಿಮಾನಗಳಿಗೆ ವಾಯುಸೀಮೆ ನಿರ್ಬಂಧಿಸಿದ್ದು, ಇದರಿಂದಾಗಿ ಭಾರತೀಯ ವಿಮಾನಯಾನ ಕಂಪನಿಗಳಿಗೆ ವಾರ್ಷಿಕ 3700 ಕೋಟಿ ರು. ಹೆಚ್ಚುವರಿ ಹೊರೆ ಉಂಟಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉದಾಹರಣೆಗೆ ಉತ್ತರ ಭಾರತದಿಂದ ಮಧ್ಯಪ್ರಾಚ್ಯಕ್ಕೆ ಹೋಗುವ ವಿಮಾನ 45 ನಿಮಿಷಗಳ ಕಾಲ ಹೆಚ್ಚುವರಿ ಹಾರಾಟ ನಡೆಸಬೇಕಾಗುತ್ತದೆ. ಇದರಿಂದಾಗಿ ಪ್ರತಿ ಗಂಟೆಗೆ 5 ಲಕ್ಷ ರು. ಖರ್ಚಾಗಲಿದೆ. ಮತ್ತೊಂದೆಡೆ ಅಮೆರಿಕ, ಯೂರೋಪ್‌ಗಳಿಗೆ ತೆರಳು ವಿಮಾನಗಳು 1.5 ತಾಸು ಹೆಚ್ಚು ಹಾರಾಟ ನಡೆಸಬೇಕಾಗುತ್ತದೆ. ಇದರಿಂದ ಯೂರೋಪ್‌ ವಿಮಾನಗಳಿಗೆ 22 ಲಕ್ಷ ರು. ಮತ್ತು ಅಮೆರಿಕ ವಿಮಾನಗಳಿಗೆ 29 ಲಕ್ಷ ರು. ಅಧಿಕ ವೆಚ್ಚ ತಗುಲಲಿದೆ.

ಇದೆಲ್ಲಾ ಕೂಡಿಸಿದರೆ ಮಾಸಿಕ 300 ಕೋಟಿ ರು.ಗೂ ಅಧಿಕ ವೆಚ್ಚ ಭಾರತೀಯ ಕಂಪನಿಗಳ ಮೇಲೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ಇಂಡಿಗೋ ಕಂಪನಿಯು ಪಾಕ್‌ ನಿರ್ಧಾರದಿಂದ ತನ್ನ ಕಜಾಕಿಸ್ತಾನ ಮತ್ತು ಉಜ್ಬೇಕಿಸ್ತಾನಕ್ಕೆ ಹೋಗುವ ವಿಮಾನಗಳನ್ನು ರದ್ದುಗೊಳಿಸಿದೆ.

ಇದನ್ನೂ ಓದಿ: ಇನ್ನು 36 ಗಂಟೆಯಲ್ಲಿ ಭಾರತದಿಂದ ದಾಳಿ : ಪಾಕ್‌ ಸಚಿವ ಆತಂಕ

ಭಾರತ- ಪಾಕ್‌ ಉದ್ವಿಗ್ನ : ಪಾಕ್‌ ಷೇರುಪೇಟೆ 3225 ಅಂಕ ಕುಸಿತ

ಕರಾಚಿ: ಪಹಲ್ಗಾಂ ನರಮೇಧದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಭಾರತದ ದಾಳಿ ಬಹುತೇಕ ಖಚಿತ ಎಂಬ ಭೀತಿ ಬುಧವಾರ ಪಾಕಿಸ್ತಾನ ಷೇರುಪೇಟೆ ಭಾರೀ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿದೆ ಪಾಕಿಸ್ತಾನದ ಷೇರುಪೇಟೆಯ ಪಿಎಸ್‌ಎಕ್ಸ್‌ ಸೂಚ್ಯಂಕ 3000 ಅಂಕಗಳಷ್ಟು ಕುಸಿತ ಕಂಡಿದೆ. 

ಇದನ್ನೂ ಓದಿ: ಭಾರತದ ದಾಳಿ ಭೀತಿಗೆ ಪಾಕಿಸ್ತಾನದ ಮುಂಚೂಣಿ ನೆಲೆಗಳು ಖಾಲಿ!

ಇನ್ನೊಂದೆಡೆ ಕೆಎಸ್‌ಇ ಸೂಚ್ಯಂಕವು 1717 ಅಂಕಗಳಷ್ಟು ಕುಸಿತ ಕಂಡು ದಿನದ ಅಂತ್ಯಕ್ಕೆ 1,13,154ರಲ್ಲಿ ಮುಕ್ತಾಯಗೊಂಡಿತು. ಇನ್ನು ಪಿಎಸ್‌ಎಕ್ಸ್‌ 3255 ಅಂಕ ಇಳಿಕೆಯಾಯಿತು. ಪಾಕ್‌ ಸಚಿವ ಅತಾವುಲ್ಲಾ ಮುಂದಿನ 24-36 ಗಂಟೆಗಳಲ್ಲಿ ಭಾರತ ದಾಳಿ ಮಾಡಲಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ಅನಿಶ್ಚಿತತೆ ಉಂಟಾಗಿದೆ.