ಪಹಲ್ಗಾಂ ನರಮೇಧ ಪ್ರತೀಕಾರವಾಗಿ ಭಾರತದ ತಿರುಗೇಟಿಗೆ ಬೆದರಿರುವ ಪಾಕಿಸ್ತಾನ, ಇದೀಗ ಭಾರತದೊಂದಿಗಿನ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿನ ತನ್ನ ಸೇನೆಯ ಮುಂಚೂಣಿ ಪಡೆಗಳನ್ನು ತೆರವುಗೊಳಿಸಿದೆ. ಜೊತೆಗೆ ಗಡಿ ಪೋಸ್ಟ್‌ಗಳ ಬಳಿ ಹಾಕಿದ್ದ ತನ್ನ ದೇಶದ ಧ್ಜಜಗಳನ್ನು ತೆರವುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ನವದೆಹಲಿ (ಮೇ.1): ಪಹಲ್ಗಾಂ ನರಮೇಧ ಪ್ರತೀಕಾರವಾಗಿ ಭಾರತದ ತಿರುಗೇಟಿಗೆ ಬೆದರಿರುವ ಪಾಕಿಸ್ತಾನ, ಇದೀಗ ಭಾರತದೊಂದಿಗಿನ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿನ ತನ್ನ ಸೇನೆಯ ಮುಂಚೂಣಿ ಪಡೆಗಳನ್ನು ತೆರವುಗೊಳಿಸಿದೆ. ಜೊತೆಗೆ ಗಡಿ ಪೋಸ್ಟ್‌ಗಳ ಬಳಿ ಹಾಕಿದ್ದ ತನ್ನ ದೇಶದ ಧ್ಜಜಗಳನ್ನು ತೆರವುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 6 ದಿನಗಳಿಂದ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದ ಕಡೆ ಸತತವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಅದಕ್ಕೆ ಪ್ರತಿಯಾಗಿ ಭಾರತ ಕೂಡಾ ಸೂಕ್ತ ತಿರುಗೇಟು ನೀಡಿದೆ. ಅದರ ಬೆನ್ನಲ್ಲೇ ಪಾಕ್‌ ಸರ್ಕಾರದ ಹಲವು ಸಚಿವರೇ ಭಾರತದ ದಾಳಿ ಖಚಿತ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:50 ಡಿಗ್ರಿಗೆ ತಲುಪಲಿದೆ ಪಾಕ್‌ನ ತಾಪಮಾನ, ಇದು ಜಗತ್ತಿನಲ್ಲೇ ಹೆಚ್ಚು!

ಈ ಹಿನ್ನೆಲೆಯಲ್ಲಿ ದಾಳಿಯ ಭೀತಿಗೆ ಒಳಗಾಗಿರುವ ಪಾಕ್‌ ಸೇನೆ ಮುಂಜಾಗ್ರತಾ ಕ್ರಮವಾಗಿ ತನ್ನ ಮುಂಚೂಣಿ ಪಡೆಗಳನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ. ಇದು ಸಂಭವನೀಯ ಯುದ್ಧಕ್ಕಿಂತ ಮೊದಲೇ ಪಾಕಿಸ್ತಾನ ಸೇನೆಯ ನೈತಿಕ ಸ್ಥೈರ್ಯ ಕುಸಿದಿರುವ ಸಂಕೇತ ಎಂದು ವಿಶ್ಲೇಷಿಸಲಾಗಿದೆ.

ಮತ್ತೊಂದೆಡೆ ರಾಜಧಾನಿ ಇಸ್ಲಾಮಾಬಾದ್‌, ವಾಣಿಜ್ಯ ರಾಜಧಾನಿ ಕರಾಚಿ ಸೇರಿದಂತೆ ಪ್ರಮುಖ ನಗರಗಳನ್ನು ಮೇ 2ರವರೆಗೂ ಸಂಚಾರ ನಿಷೇಧಿತ ವಲಯ ಎಂದು ಘೋಷಿಸಿದೆ.