ದಿವಾಳಿತನದ ಅಂಚಿನಲ್ಲಿರುವ ಶ್ರೀಲಂಕಾ, ತನ್ನ ಈವರೆಗಿನ ಅತೀಕೆಟ್ಟ ಆರ್ಥಿಕ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ, ಇದು 1948 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರದ ಅತ್ಯಂತ ಕೆಟ್ಟ ಪರಿಸ್ಥಿತಿ ಎಂದು ಹೇಳಲಾಗಿದೆ.
ವಾಷಿಂಗ್ಟನ್ (ಏ.19): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman ) ವಾಷಿಂಗ್ಟನ್‌ನಲ್ಲಿ ಶ್ರೀಲಂಕಾದ ಹಣಕಾಸು ಸಚಿವ ಅಲಿ ಸಬ್ರಿ (Sri Lankan counterpart Ali Sabry i) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಾರತವು ಆಪ್ತ ಸ್ನೇಹಿತ ಮತ್ತು ಉತ್ತಮ ನೆರೆಹೊರೆಯವರಾಗಿ, ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿರುವ (economic crisis) ದ್ವೀಪ ರಾಷ್ಟ್ರಕ್ಕೆ ಸಾಧ್ಯವಿರುವ ಎಲ್ಲ ಸಹಕಾರ ಮತ್ತು ಸಹಾಯವನ್ನು ನೀಡಲು ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದರು.
ದಿವಾಳಿತನದ ಅಂಚಿನಲ್ಲಿರುವ ಶ್ರೀಲಂಕಾ, ತನ್ನ ಈವರೆಗಿನ ಅತೀಕೆಟ್ಟ ಆರ್ಥಿಕ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ, ಇದು 1948 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರದ ಅತ್ಯಂತ ಕೆಟ್ಟ ಪರಿಸ್ಥಿತಿ ಎಂದು ಹೇಳಲಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) (International Monetary Fund) ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಿಗಾಗಿ ವಾಷಿಂಗ್ಟನ್‌ನಲ್ಲಿರುವ ಸೀತಾರಾಮನ್ ಅವರು ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಶ್ರೀಲಂಕಾದಲ್ಲಿ ಚಾಲ್ತಿಯಲ್ಲಿರುವ ಸವಾಲುಗಳನ್ನು ಎದುರಿಸಲು ಭಾರತದ ಯಾವ ಕ್ರಮ ಕೈಗೊಳ್ಳಬಹುದು ಎನ್ನುವ ನಿಟ್ಟಿನಲ್ಲಿ ಸೋಮವಾರ ಚರ್ಚಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
"ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ವಾಷಿಂಗ್ಟನ್ ಡಿಸಿಯಲ್ಲಿ IMF-WB ಸ್ಪ್ರಿಂಗ್ ಸಭೆಗಳ ನಡುವೆ ಶ್ರೀಲಂಕಾದ ಹಣಕಾಸು ಸಚಿವ ಅಲಿ ಸಬ್ರಿ ಅವರನ್ನು ಭೇಟಿ ಮಾಡಿದರು ಮತ್ತು ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಶ್ರೀಲಂಕಾದಲ್ಲಿ ಚಾಲ್ತಿಯಲ್ಲಿರುವ ಸವಾಲುಗಳನ್ನು ಎದುರಿಸಲು ಭಾರತದ ಕ್ರಮಗಳ ಬಗ್ಗೆ ಚರ್ಚಿಸಿದರು." ಹಣಕಾಸು ಸಚಿವಾಲಯ ಟ್ವಿಟರ್ ಮೂಲಕ ತಿಳಿಸಿದೆ.
"ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಶ್ರೀಲಂಕಾಕ್ಕೆ ಆಪ್ತ ಸ್ನೇಹಿತ ಮತ್ತು ಉತ್ತಮ ನೆರೆಹೊರೆಯವರಾಗಿ, ಭಾರತವು ಸಾಧ್ಯವಿರುವ ಎಲ್ಲ ಸಹಕಾರ ಮತ್ತು ಸಹಾಯವನ್ನು ನೀಡಲು ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದ್ದಾರೆ" ಎಂದು ಅದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ. ದ್ವೀಪ ರಾಷ್ಟ್ರವು ಇತಿಹಾಸದಲ್ಲಿಯೇ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿರುವಾಗ, ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ದೇಶದಾದ್ಯಂತ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ.
ಲಂಕಾದಲ್ಲಿ 17 ಸಚಿವರ ಹೊಸ ಸಂಪುಟ ರಚನೆ: ರಾಜಪಕ್ಸೆ ಕುಟುಂಬಕ್ಕೆ ಕೊಕ್!
ಇಂಧನ, ಅಡುಗೆ ಅನಿಲ, ಅಗತ್ಯ ವಸ್ತುಗಳ ಕೊರತೆ ಹಾಗೂ ಹಲವು ಗಂಟೆಗಳ ಕಾಲ ವಿದ್ಯುತ್ ಕಡಿತದಿಂದ ಸಾರ್ವಜನಿಕರು ತಿಂಗಳುಗಟ್ಟಲೆ ಪರದಾಡುತ್ತಿದ್ದಾರೆ. ಆರ್ಥಿಕ ಬಿಕ್ಕಟ್ಟು ಮತ್ತು ವಿದೇಶೀ ವಿನಿಮಯದ ಕೊರತೆಯೊಂದಿಗೆ, ಇಂಧನ ಆಮದುಗಳಿಗಾಗಿ 500 ಮಿಲಿಯನ್ ಅಮೆರಿಕನ್ ಡಾಲರ್ ಭಾರತೀಯ ಕ್ರೆಡಿಟ್ ಲೈನ್ ದ್ವೀಪ ರಾಷ್ಟ್ರಕ್ಕೆ ಸದ್ಯದ ಮಟ್ಟಿಗೆ ಜೀವಸೆಲೆಯನ್ನು ಒದಗಿಸಿದೆ.
ನೇಪಾಳದಲ್ಲಿ ಆರ್ಥಿಕ ಬಿಕ್ಕಟ್ಟು: ಚಿನ್ನ, ಕಾರು ಆಮದಿಗೆ ಬ್ರೇಕ್, ವಾರಕ್ಕೆ 2 ದಿನ ರಜೆಗೆ ಚಿಂತನೆ!
ಪೆಟ್ರೋಲಿಯಂ ಉತ್ಪನ್ನಗಳನ್ನು (petroleum products) ಖರೀದಿಸಲು ಫೆಬ್ರವರಿಯಲ್ಲಿ 500 ಮಿಲಿಯನ್ ಯುಎಸ್ ಡಾಲರ್ ( USD ) ಸಾಲದ ನಂತರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ದೇಶಕ್ಕೆ ಆರ್ಥಿಕ ಸಹಾಯದ ಭಾಗವಾಗಿ ಶ್ರೀಲಂಕಾಕ್ಕೆ 1 ಶತಕೋಟಿ ಅಮೆರಿಕನ್ ಡಾಲರ್ ಸಾಲವನ್ನು ನೀಡಲು ಭಾರತ ಇತ್ತೀಚೆಗೆ ಕ್ರಮ ಕೈಗೊಂಡಿದೆ. ಶ್ರೀಲಂಕಾದ ಅಧ್ಯಕ್ಷ ಗೊಟಾಬಯ ರಾಜಪಕ್ಸೆ (Sri Lankan President Gotabaya Rajapaksa ) ಅವರು ತಮ್ಮ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ, ವಿದೇಶಿ ವಿನಿಮಯ ಬಿಕ್ಕಟ್ಟು ( foreign exchange crisis ) ತಮ್ಮ ಸೃಷ್ಟಿಯ್ಲ ಮತ್ತು ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಆದಾಯ ಮತ್ತು ಆಂತರಿಕ ಹಣ ರವಾನೆ ಕ್ಷೀಣಿಸುವುದರೊಂದಿಗೆ ಆರ್ಥಿಕ ಕುಸಿತವು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
