ಗಡಿ ಮೂಲಸೌಕರ್ಯದಲ್ಲಿ ಭಾರತ 2-3 ವರ್ಷದಲ್ಲಿ ಚೀನಾ ಸೋಲಿಸುತ್ತದೆ: ಬಿಆರ್‌ಓ ಮುಖ್ಯಸ್ಥ
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಅವರು ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಹಾಗೂ ಇನ್ನು 2 - 3 ವರ್ಷಗಳಲ್ಲಿ ಭಾರತ ಗಡಿ ಮೂಲಸೌಕರ್ಯ ವಿಚಾರವಾಗಿ ಚೀನಾವನ್ನು ಹಿಂದಿಕ್ಕಲಿದೆ ಎಂದು ತಿಳಿದುಬಂದಿದೆ.

ನವದೆಹಲಿ (ಸೆಪ್ಟೆಂಬರ್ 8, 2023): ಗಡಿ ವಿಚಾರವಾಗಿ ಭಾರತ - ಚೀನಾ ನಡುವೆ ಸಾಕಷ್ಟು ವಿವಾದಗಳಿವೆ. ಮಹತ್ವದ ಜಿ - 20 ಶೃಂಗಸಭೆಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾಗವಹಿಸ್ತಿಲ್ಲ. ಹಾಗೂ, ಕೆಲ ವಿಚಾರದಲ್ಲಿ ಖ್ಯಾತೆಯನ್ನೂ ತೆರೆದಿದ್ದಾರೆ. ಈ ನಡುವೆ, ಭಾರತದ ಗಡಿ ಪ್ರದೇಶಗಳಲ್ಲಿ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಮುಖ್ಯಸ್ಥರು, ಗಡಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದೆ ಎಂದು ಹೇಳಿದ್ದಾರೆ.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಅವರು ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 10 ಗಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ₹ 2,941 ಕೋಟಿ ವೆಚ್ಚದಲ್ಲಿ BRO ನಿರ್ಮಿಸಿದ 90 ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸುವ ಸುಮಾರು ಒಂದು ವಾರದ ಮೊದಲು ಅವರು ಭಾರತ - ಚೀನಾ ಗಡಿ ಮೂಲಸೌಕರ್ಯದ ಬಗ್ಗೆ ಮಾತನಾಡಿದ್ದಾರೆ.
ಇದನ್ನು ಓದಿ: ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವೆ ಮತ್ತಷ್ಟು ಸಂಘರ್ಷ..?
"ತೊಂಬತ್ತು ಯೋಜನೆಗಳನ್ನು ಸೆಪ್ಟೆಂಬರ್ 12 ರಂದು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿದೆ. ಅದರಲ್ಲಿ 26 ಲಡಾಖ್‌ನಲ್ಲಿ ಮತ್ತು 36 ಅರುಣಾಚಲದಲ್ಲಿದೆ. ಆದ್ದರಿಂದ ನಮ್ಮ ಗಮನವು ಸಂಪೂರ್ಣವಾಗಿ ಈ ಎರಡು ರಾಜ್ಯಗಳ ಮೇಲೆ ಕೇಂದ್ರೀಕೃತವಾಗಿದೆ ಮತ್ತು ನಾವು ಈ ಎರಡಡು ರಾಜ್ಯಗಳಲ್ಲಿ ಗಡಿ ಮೂಲಸೌಕರ್ಯ ವಿಚಾರದಲ್ಲಿ ಹೆಚ್ಚು ವೇಗವಾಗಿ ಹೋಗುತ್ತಿದ್ದೇವೆ. ನಾನು ಹೇಳುವುದಾದರೆ, ಇನ್ನೆರಡು ಮೂರು ವರ್ಷಗಳಲ್ಲಿ ಭಾರತ ಈ ವಿಚಾರದಲ್ಲಿ ಚೀನಾವನ್ನು ಸೋಲಿಸುತ್ತದೆ ಎಂದು ಬಿಆರ್‌ಓ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಚೌಧರಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ರಾಜನಾಥ್ ಸಿಂಗ್ ಅವರು ಉದ್ಘಾಟಿಸಲಿರುವ ಯೋಜನೆಗಳಲ್ಲಿ 22 ರಸ್ತೆಗಳು, 63 ಸೇತುವೆಗಳು, ಅರುಣಾಚಲ ಪ್ರದೇಶದಲ್ಲಿ ಒಂದು ಸುರಂಗ ಮತ್ತು ಎರಡು ಆಯಕಟ್ಟಿನ ವಾಯುನೆಲೆಗಳು ಸೇರಿವೆ. "ಗಡಿ ಪ್ರದೇಶಗಳಲ್ಲಿ ಹಲವಾರು ಯೋಜನೆಗಳನ್ನು ಮಾಡಲಾಗುತ್ತಿದೆ ಮತ್ತು ಇದು ನಮ್ಮ ಸೇನೆಯ ಭದ್ರತಾ ಮೆಟ್ರಿಕ್‌ಗಳನ್ನು ಬಲಪಡಿಸುತ್ತಿದೆ. ಆದ್ದರಿಂದ ಸೇನೆ ಗಡಿಯಲ್ಲಿ ಸಾಧ್ಯವಾದಷ್ಟು ಮುಂದಕ್ಕೆ ನಿಯೋಜಿಸಬಹುದು ಮತ್ತು ಯಾವುದೇ ನಿರ್ಣಾಯಕ ಸಂದರ್ಭಗಳು ಉದ್ಭವಿಸಿದರೆ ಅವುಗಳನ್ನು ನೋಡಿಕೊಳ್ಳಬಹುದು, ಇದು ರಾಷ್ಟ್ರಕ್ಕೆ ಉತ್ತಮ ಕ್ಷಣವಾಗಿದೆ’’ ಎಂದು ಸೇನಾ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಚೀನಾದ ತವಾಂಗ್ ತಂಟೆಗೆ ಬ್ರೇಕ್; ತಿರುಗೇಟಿನ ಬಳಿಕ ಕೆಂಪು ಸೈನಿಕರು ವಾಪಸ್: ಸಂಸತ್ತಿಗೆ ಕೇಂದ್ರ ಮಾಹಿತಿ
ರಕ್ಷಣಾ ಸಚಿವರು ಪೂರ್ವ ಲಡಾಖ್‌ನ ನ್ಯೋಮಾದಲ್ಲಿ ವಾಯುನೆಲೆಯ ಶಿಲಾನ್ಯಾಸವನ್ನು ಆನ್‌ಲೈನ್ ಮೂಲಕ ನೆರವೇರಿಸಲಿದ್ದಾರೆ. ಹಾಗೂ, ಇದನ್ನು 218 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.ಇದು 13,400 ಅಡಿ ಎತ್ತರದಲ್ಲಿದ್ದು,, ನ್ಯೋಮಾ ಚೀನಾದೊಂದಿಗೆ ನೈಜ ನಿಯಂತ್ರಣ ರೇಖೆಯಿಂದ (LAC) ಸುಮಾರು 46 ಕಿಲೋಮೀಟರ್ ದೂರದಲ್ಲಿದೆ.
ಇದನ್ನೂ ಓದಿ: ರಾಜೀವ್ ಗಾಂಧಿ ಟ್ರಸ್ಟ್‌ಗೆ ಚೀನಾ ಹಣ; ಒಂದಿಂಚೂ ಜಾಗ ಬಿಟ್ಟುಕೊಡಲ್ಲ ಎಂದ ಅಮಿತ್ ಶಾ