ಪೂರ್ವ ಲಡಾಖ್‌ನಲ್ಲಿ ಹಲವು ಪ್ರದೇಶಗಳ ಹಕ್ಕಿನ ವಿಷಯದಲ್ಲಿ ಭಾರತ ಮತ್ತು ಚೀನಾ ನಡುವೆ ಹಲವು ವರ್ಷಗಳಿಂದ ವಿವಾದ ಇದೆ. ಅದರ ಬೆನ್ನಲ್ಲೇ 2020ರಲ್ಲಿ ನಡೆದ ಗಲ್ವಾನ್‌ ಬಿಕ್ಕಟ್ಟು ಈ ಸಂಘರ್ಷವನ್ನು ತೀವ್ರಗೊಳಿಸಿದೆ.

ನವದೆಹಲಿ (ಜನವರಿ 28, 2023): ಪೂರ್ವ ಲಡಾಖ್‌ನ 26 ಪಹರೆ ಕೇಂದ್ರಗಳ ಮೇಲಿನ ಹಿಡಿತವನ್ನು ಭಾರತೀಯ ಸೇನೆ ಕಳೆದುಕೊಂಡಿದೆ ಎಂಬ ಆತಂಕಕಾರಿ ವರದಿ ಬೆನ್ನಲ್ಲೇ, ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಮತ್ತಷ್ಟು ಸಂಘರ್ಷ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ವರದಿಯೊಂದು ಎಚ್ಚರಿಸಿದೆ.

Add Asianetnews Kannada as a Preferred SourcegooglePreferred

ಪೂರ್ವ ಲಡಾಖ್‌ನಲ್ಲಿ (East Ladakh) ಹಲವು ಪ್ರದೇಶಗಳ ಹಕ್ಕಿನ ವಿಷಯದಲ್ಲಿ ಭಾರತ (India) ಮತ್ತು ಚೀನಾ (China) ನಡುವೆ ಹಲವು ವರ್ಷಗಳಿಂದ ವಿವಾದ ಇದೆ. ಅದರ ಬೆನ್ನಲ್ಲೇ 2020ರಲ್ಲಿ ನಡೆದ ಗಲ್ವಾನ್‌ (Galwan) ಬಿಕ್ಕಟ್ಟು ಈ ಸಂಘರ್ಷವನ್ನು ತೀವ್ರಗೊಳಿಸಿದೆ. ಅದರ ಬಳಿಕ ಚೀನಾ ಪೂರ್ವ ಲಡಾಖ್‌ನಲ್ಲಿ ತನ್ನ ಮಿಲಿಟರಿ (Military) ಮೂಲಸೌಕರ್ಯ ಹೆಚ್ಚಿಸಿಕೊಂಡಿದೆ. ಜೊತೆಗೆ ಕಳೆದ 2 ವರ್ಷಗಳಲ್ಲಿ ಚೀನಾ ಪದೇ ಪದೇ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ. ಹೀಗಾಗಿ ಜಾಗದ ಮೇಲಿನ ಹಕ್ಕಿನ ಕುರಿತಾಗಿ ಮುಂದಿನ ದಿನಗಳಲ್ಲಿ ಉಭಯ ಸೇನೆಗಳ ನಡುವೆ ಇನ್ನಷ್ಟು ಸಂಘರ್ಷದ ಸಾಧ್ಯತೆ ದಟ್ಟವಾಗಿದೆ ಎಂದು ವರದಿ ಹೇಳಿದೆ.

ಇದನ್ನು ಓದಿ: ಗಡಿಯಲ್ಲಿ ಮತ್ತೆ ಚೀನಾ ತಗಾದೆ: ಭಾರತಕ್ಕೆ ಸೇರಿದ ಭಾಗದಲ್ಲಿ 200 ಟೆಂಟ್‌ಗಳ ನಿರ್ಮಾಣ

ಸ್ಥಳೀಯ ಪೊಲೀಸ್‌ ಗುಪ್ತಚರರು ಸಂಗ್ರಹಿಸಿರುವ ಮತ್ತು ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ಬಿಕ್ಕಟ್ಟಿನ ಸ್ವರೂಪ ಆಧರಿಸಿ ಈ ವರದಿಯನ್ನು ತಯಾರಿಸಲಾಗಿದ್ದು, ಅದನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಹಿರಿಯ ಐಪಿಎಸ್‌ ಅಧಿಕಾರಿಗಳ ಸಭೆಯಲ್ಲಿ ಮಂಡಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಮೈನಸ್‌ 40 ಡಿಗ್ರಿ ಚಳೀಲಿ 3 ಈಡಿಯಟ್ಸ್‌ ಖ್ಯಾತಿ ವಾಂಗ್ಚುಕ್‌ ಉಪ​ವಾಸ
ಲೇಹ್‌: ಲಡಾಖ್‌ ಪರಿ​ಸ​ರ​ದಲ್ಲಿ ಉಂಟಾ​ಗಿ​ರುವ ಅಸ​ಮ​ತೋ​ಲ​ನ​ಕ್ಕೆ ಕಳ​ವಳ ವ್ಯಕ್ತ​ಪ​ಡಿಸಿ ಲಡಾಖ್‌ನ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಶುಕ್ರವಾರ 2ನೇ ದಿನ ಪೂರೈಸಿದೆ. ಬಾಲಿ​ವುಡ್‌ನ ‘3 ಈಡಿ​ಯ​ಟ್ಸ್‌​’ಗೆ ಪ್ರೇರಣೆಯಾಗಿದ್ದ ವಾಂಗ್ಚುಕ್‌ ಇದೀಗ ಖಾರ್ದೋಂಗ್ಲಾ ಪಾಸ್‌ ಬಳಿ ಮೈಸನ್‌ 40 ಡಿಗ್ರಿ ಚಳಿ​ಯಲ್ಲಿ ಉಪ​ವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಲಡಾ​ಖ್‌​ನಲ್ಲಿ ಹೆಚ್ಚಾ​ಗಿ​ರುವ ಔದ್ಯ​ಮೀ​ಕ​ರ​ಣ​ದಿಂದಾಗಿ ಇಲ್ಲಿ​ರುವ ನೀರ್ಗ​ಲ್ಲು​ಗಳು ಅಳಿ​ವಿ​ನಂಚಿಗೆ ತಲು​ಪಿವೆ. ಒಂದು ವೇಳೆ ಇವು ನಾಶ​ವಾ​ದರೆ ಈ ಭಾಗಕ್ಕೆ ಭಾರಿ ಪ್ರಮಾ​ಣ​ದಲ್ಲಿ ಕುಡಿ​ಯುವ ನೀರಿನ ಬರ ಎದು​ರಾ​ಗ​ಲಿದೆ ಎಂದು ಅವರು ಹೇಳಿ​ದ್ದಾರೆ. 

ಇದನ್ನೂ ಓದಿ: ಚೀನಾ ಗಡಿಗಳನ್ನು ಬಲಪಡಿಸಲು 2000 Drone ಖರೀದಿಸಲಿದೆ ಮೋದಿ ಸರ್ಕಾರ