ಭಾರತದ ಮೊದಲ ಹೈಸ್ಪೀಡ್ ರೈಲು ಕಾರಿಡಾರ್ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಪರೀಕ್ಷೆ ನಡೆಸಲು ಜಪಾನ್ 2 ಬುಲೆಟ್ ರೈಲುಗಳನ್ನು ಉಡುಗೊರೆಯಾಗಿ ನೀಡಲಿದೆ. 2026ರ ಅಂತ್ಯಕ್ಕೆ ಈ ರೈಲುಗಳು ಭಾರತಕ್ಕೆ ಬರಲಿವೆ.
ನವದೆಹಲಿ: ಭಾರತದ ಮೊದಲ ಹೈಸ್ಪೀಡ್ ರೈಲು ಕಾರಿಡಾರ್ ಆಗಿರುವ ಮುಂಬೈ-ಅಹಮದಾಬಾದ್ ರೈಲು ಮಾರ್ಗದಲ್ಲಿ ಪರೀಕ್ಷೆ ನಡೆಸಲು ಜಪಾನ್ ದೇಶವು ಭಾರತಕ್ಕೆ 2 ಬುಲೆಟ್ ರೈಲುಗಳನ್ನು ಉಡುಗೊರೆಯಾಗಿ ನೀಡಲಿದೆ. 2026ರ ಅಂತ್ಯಕ್ಕೆ ಈ ರೈಲುಗಳು ಭಾರತಕ್ಕೆ ಬರಲಿವೆ. ಶೆಂಕಸೆನ್ ರೈಲುಗಳು (ಬುಲೆಟ್ ರೈಲು) ಇ5 ಮತ್ತು ಇ3 ಮಾದರಿಗಳು ಇವಾಗಿವೆ. ಮುಂದಿನ ವರ್ಷದ ವೇಳೆ ಕಾರಿಡಾರ್‌ನ ಮೊದಲ ಹಂತ (ಸೂರತ್-ಬಿಲ್ಮೋರಾ ಮಾರ್ಗ) 48 ಕಿ.ಮೀ. ಮುಕ್ತಾಯಗೊಳ್ಳಲಿದ್ದು, ಅಲ್ಲಿ ಇವುಗಳನ್ನು ಓಡಿಸಿ ಪರೀಕ್ಷೆ ಮಾಡಲಾಗುತ್ತದೆ. ಈ ವೇಳೆ ಬುಲೆಟ್ ರೈಲು ತಂತ್ರಜ್ಞಾನದ ಬಗ್ಗೆ ಭಾರತದ ಎಂಜಿನಿಯರ್‌ಗಳಿಗೆ ತರಬೇತಿ ನೀಡಲಾಗುತ್ತದೆ.
ಬುಲೆಟ್ ರೈಲು ಯೋಜನೆ ಜಪಾನ್ ಸಹಯೋಗದ್ದಾಗಿದೆ. ಇದು ಭಾರತ ಜಪಾನ್ ಸ್ನೇಹದ ಪ್ರತೀಕವಾಗಿದೆ ಎಂದು ಜಪಾನ್ ಟೈಮ್ಸ್ ವರದಿ ಮಾಡಿದೆ. ಮುಂಬೈ- ಅಹಮದಾಬಾದ್ ಬುಲೆಟ್ ರೈಲು ಮಾರ್ಗದ ಬಹುತೇಕ ಕಾಮಗಾರಿಗಳು ಶೇ.75ರಷ್ಟು ಮುಕ್ತಾಯಗೊಂಡಿದ್ದು, ಮುಂಬೈ ಪ್ರದೇಶದಲ್ಲಿ ಸುರಂಗ ಕಾಮಗಾರಿ ತಡವಾಗಿದೆ. ಇದು ಇನ್ನು 5 ವರ್ಷ ತೆಗೆದುಕೊಳ್ಳಲಿದೆ. 2030ರವೇಳೆಗೆ ಕಾರ್ಯಾಚರಣೆ ಆರಂಭ ಆಗಬಹುದು ಎನ್ನಲಾಗಿದೆ.
ರಷ್ಯಾ ಉಕ್ರೇನ್ ಯುದ್ಧದಲ್ಲಿ ಪರೋಕ್ಷ ಭಾಗಿ: ಚೀನಾದ ಕಳ್ಳಾಟ ಬಯಲು ಮಾಡಿದ ಉಕ್ರೇನ್
ಬೀಜಿಂಗ್: ರಷ್ಯಾ ಉಕ್ರೇನ್ ಯುದ್ಧದಲ್ಲಿ ತಾನು ತಟಸ್ಥ ನೀತಿ ಹೊಂದಿದ್ದು, ತನಗೂ ಈ ಯುದ್ಧಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಲೇ ರಷ್ಯಾವನ್ನು ಬೆಂಬಲಿಸುತ್ತಾ ರಹಸ್ಯವಾಗಿ ತನ್ನ ಪ್ರಜೆಗಳನ್ನು ಉಕ್ರೇನ್ ವಿರುದ್ಧ ಹೋರಾಡಲು ಬಿಟ್ಟಿರುವ ಚೀನಾ ನಡೆಯನ್ನು ಉಕ್ರೇನ್ ಬಯಲು ಮಾಡಿದೆ. ತನ್ನಿಂದ ತಪ್ಪಾದರೂ ಪರವಾಗಿಲ್ಲ ಆದರೆ ಚೀನಾದ ನರಿ ಬುದ್ಧಿಯನ್ನು ಬಯಲು ಬಯಲು ಮಾಡಲೇಬೇಕು ಎಂದು ಹಠಕ್ಕೆ ಬಿದ್ದ ಉಕ್ರೇನ್ ಇದಕ್ಕಾಗಿ ರೆಡ್‌ಕ್ರಾಸ್‌ನ ಮಾನವೀಯ ಹಕ್ಕಿನ ನಿಯಮವನ್ನು ಕೂಡ ಉಲ್ಲಂಘಿಸಿ ರಷ್ಯಾ ಯುದ್ಧದಲ್ಲಿ ಭಾಗಿಯಾಗಿರುವ ಚೀನಾ ಪ್ರಜೆಗಳನ್ನು ಮಾಧ್ಯಮಗಳ ಮುಂದೆ ತಂದಿದೆ. ಉಕ್ರೇನ್‌ನ ಈ ನಡೆ ಈಗ ಚೀನಾದ ಮುಖ ಕೆಂಪಗಾಗಿಸಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ತಾನು ತಟಸ್ಥ ನೀತಿಯನ್ನು ಹೊಂದಿದ್ದೇನೆ ಎಂದು ಚೀನಾ ಹೇಳಿಕೊಂಡು ಬಂದಿದ್ದರೂ ಬೀಜಿಂಗ್ ಆರಂಭದಿಂದಲೂ ರಷ್ಯಾಗೆಗೆ ಆರ್ಥಿಕ ಮತ್ತು ರಾಜತಾಂತ್ರಿಕ ನೆರವು ನೀಡುತ್ತಲೇ ಬಂದಿದೆ. ಜೊತೆಗೆ ಚೀನಾದ ನಾಗರಿಕರು ಕೂಡ ರಷ್ಯಾ ಪರವಾಗಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿರುವುದ ಉಕ್ರೇನ್‌ನ ಗಮನಕ್ಕೆ ಬಂದಿದೆ. ಚೀನಾದ ಈ ನಡೆಯನ್ನು ಉಕ್ರೇನ್ ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿತ್ತು. ಈಗ ಅಧ್ಯಕ್ಷ ಝೆಲೆನ್ಸ್ಕಿ ಒಪ್ಪಿಗೆಯ ಮೇರೆಗೆ ಉಕ್ರೇನಿಯನ್ ಮಿಲಿಟರಿಯು ಉಕ್ರೇನ್‌ನಲ್ಲಿ ವರ್ಷಗಳ ಕಾಲ ನಡೆದ ಸಂಘರ್ಷದಲ್ಲಿ ಯುದ್ಧ ಕೈದಿಗಳಾಗಿ ಸೆರೆಸಿಕ್ಕ ಚೀನಾ ಪ್ರಜೆಗಳ ಗುರುತು ಪತ್ತೆ ಮಾಡುವುದಲ್ಲದೇ ಮಾಧ್ಯಮಗಳ ಮುಂದೆ ಅವರನ್ನು ಪ್ರದರ್ಶಿಸಿದೆ. ಯುದ್ಧಕೈದಿಗಳನ್ನು ಮಾಧ್ಯಮಗಳ ಕ್ಯಾಮರಾ ಮುಂದೆ ತರುವುದು ಅವರ ಗುರುತು ಬಹಿರಂಗಪಡಿಸುವುದು ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಪ್ರಕಾರ ಯುದ್ಧ ನಿಯಮಗಳ ಉಲ್ಲಂಘನೆಯಾಗಿದೆ. ಆದರೆ ಈ ಯುದ್ಧದಲ್ಲಿ ಚೀನಾದ ಕೈವಾಡವೂ ಇದೆ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ ಉಕ್ರೇನ್ ಈ ನಿರ್ಧಾರ ತೆಗೆದುಕೊಂಡಿದೆ.
ಕೋಟ್ಯಾಂತರ ರೂ. ಮೌಲ್ಯದ ಬಿಲ್‌ಗೇಟ್ಸ್ ಆಸ್ತಿಯಲ್ಲಿ ಮಕ್ಕಳಿಗಾಗಿ ಏನೇನೂ ಇಲ್ಲ..!
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಬೆಂಬಲಿ ನಿರಾಕರಿಸಿದ ನಂತರ ಉಕ್ರೇನ್ ಮುಂದೆ ಇರುವ ಎಲ್ಲಾ ಅವಕಾಶಗಳು ಬಹಳಷ್ಟು ಕಡಿಮೆ ಆಗಿವೆ. ಇತ್ತ ಟ್ರಂಪ್ ಬೆಂಬಲ ಕಡಿಮೆ ಆಗುತ್ತಿದ್ದಂತೆ ರಷ್ಯಾವೂ ಚೀನಾ ನೆರವಿನೊಂದಿಗೆ ತನ್ನ ಆಕ್ರಮಣವನ್ನು ತೀವ್ರಗೊಳಿಸಿದೆ. ಆದರೆ ತನ್ನ ನಾಗರಿಕರು ಈ ಯುದ್ಧದಲ್ಲಿ ಭಾಗಿಯಾಗಿಲ್ಲ ಎಂದು ಚೀನಾ ಉಕ್ರೇನ್ ಆರೋಪವನ್ನು ಇದುವರೆಗೆ ನಿರಾಕರಿಸುತ್ತಲೇ ಬಂದಿತ್ತು. ಹೀಗಾಗಿ ಉಕ್ರೇನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ಬಣ್ಣ ಬಯಲು ಮಾಡಿದೆ.
ಕಾಶ್ಮೀರ ಪಾಕಿಸ್ತಾನದ ರಕ್ತನಾಳ: ಕಾಶ್ಮೀರಿಗರ ಹೋರಾಟ ಬೆಂಬಲಿಸುತ್ತೇವೆ: ಪಾಕ್ ಸೇನಾ ಮುಖ್ಯಸ್ಥ
