ಜಿ20 ಶೃಂಗಸಭೆಯಲ್ಲಿ ಭಾರತದ ರಾಜತಾಂತ್ರಿಕ ಹೆಜ್ಜೆ, ಉಕ್ರೇನ್ ಘೋಷಣೆ ಒಪ್ಪಿಕೊಂಡ ರಷ್ಯಾ ಚೀನಾ!
ಕಳೆದ ವರ್ಷ ಬಾಲಿ ಘೋಷಣೆ ಬಳಿಕ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದ ರಷ್ಯಾ-ಚೀನಾ ದೆಹಲಿ ಜಿ20 ಶೃಂಗಸಭೆಯಲ್ಲಿ ಉಕ್ರೇನ್ ವಿಚಾರವಾಗಿ ಭಾರತ ಪ್ರಸ್ತಾಪ ಒಪ್ಪಿಕೊಂಡಿದೆ.

ನವದೆಹಲಿ(ಸೆ.09) ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ನಿಂತಿಲ್ಲ. ಉಕ್ರೇನ್ ಮೇಲೆ ಆಕ್ರಮಣಕ್ಕಿಳಿದಿರುವ ರಷ್ಯಾ, ಜಾಗತಿಯ ಒತ್ತಡಕ್ಕೂ ಜಗ್ಗದೆ ಯುದ್ಧ ಮುಂದುವರಿಸಿದೆ. ಈ ಕುರಿತು ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾರತ ರಾಜತಾಂತ್ರಿಕ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಭಾರತದ ಅಧ್ಯಕ್ಷತೆ ವಹಿಸಿರು ಜಿ20 ಶೃಂಗಸಭೆಯಲ್ಲಿನ ಘೋಷಣೆಗಳ ಪೈಕಿ ಉಕ್ರೇನ್ ಉಲ್ಲೇಖಿಸಲು ರಷ್ಯಾ ಹಾಗೂ ಚೀನಾ ಒಪ್ಪಿಕೊಂಡಿದೆ. ಶಾಂತಿಯುತ ನಿರ್ಣಯದ ಮೂಲಕ ಸಮಸ್ಯೆ ಬಗೆಹರಿಸಲು ಹೊಸ ಹೆಜ್ಜೆ ಇಡಲಾಗಿದೆ.
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಕುರಿತು ಭಾರತ ನಿಲುವಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಇದು ಯುದ್ಧದ ಯುಗವಲ್ಲ. ಮಾತುಕತೆ ಹಾಗೂ ರಾಜತಾಂತ್ರಿಕ ಯುಗ. ಈ ಯುಗದಲ್ಲಿ ಶಾಂತಿಯುತ ಪರಿಹಾರಕ್ಕೆ ಮೊದಲ ಆದ್ಯತೆ ಎಂದು ಭಾರತ ಜಿ20 ಶೃಂಗಸಭೆಯಲ್ಲಿ ಪುನರುಚ್ಚರಿಸಿದೆ. ಇದೇ ವೇಳೆ ರಷ್ಯಾ ಹಾಗೂ ಉಕ್ರೇನ್ ನಡಿವಿನ ಸಂಘರ್ಷ ಸಮಸ್ಯೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಜಳಿಗೆ ಬಿಡುವ ಕುರಿತು ಘೋಷಣೆಯನ್ನು ರಷ್ಯಾ ಹಾಗೂ ಚೀನಾ ಒಪ್ಪಿಕೊಂಡಿದೆ. ಯುದ್ದಕ್ಕೆ ಕಠಿಣ ಪದಗಳ ಉಲ್ಲೇಖವಿಲ್ಲ. ಆದರೆ ಶಾಂತಿಯುತ ಮಾರ್ಗದ ಮೂಲಕ ಸಮಸ್ಯೆ ಬಗೆಹರಿಸಲು ತ್ವರಿತ ನಿರ್ಧಾರಗಳ ಅಗತ್ಯವಿದೆ ಎಂದು ಜಿ20 ರಾಷ್ಟ್ರಗಳು ಒತ್ತಾಯಿಸಿದೆ. ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾವನ್ನು ದೂಷಿಸುವ ನಿರ್ಧಾರದಿಂದ ಜಿ20 ರಾಷ್ಟ್ರಗಳು ಹಿಂದೆ ಸರಿದಿದೆ. ಇದರ ಬದಲು ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಹುಡುಕಲು ಒತ್ತಾಯಿಸಿದೆ.
ಜಿ20 ನಾಯಕರ ಔಟಣಕೂಟ; ಮನ್‌ಮೋಹನ್ ಸಿಂಗ್, ದೇವೇಗೌಡ, ಸಿದ್ದರಾಮಯ್ಯ ಸೇರಿ ಹಲವರು ಗೈರು!
2022ರಲ್ಲಿ ಇಂಡೋನೇಷಿಯಾದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ರಷ್ಯಾ ಯುದ್ಧಾಕ್ರಮಣವನ್ನು ಕಠಿಣ ಪದಗಳಲ್ಲಿ ಖಂಡಿಸಲಾಗಿತ್ತು. ಆದರೆ ನವದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಭಾರತ ರಾಜತಾಂತ್ರಿಕ ಮಾರ್ಗದ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ. ಉಕ್ರೇನ್‌ನಲ್ಲಿ ಶಾಂತಿಯುತ ಹಾಗೂ ನಾಗರೀಕರ ಗೌರವಯುತ ಜೀವನಕ್ಕೆ ನಾಂದಿ ಹಾಡಬೇಕು. ಜನರ ಜೀವನದ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ ಎಂದಿದೆ.
ಭೂಪ್ರದೇಶಗಳ ಅತಿಕ್ರಮ, ಶಸ್ತ್ರಾಸ್ತ್ರ, ಪರಮಾಣು ಬಳಕೆಯನ್ನು ಜಿ20 ರಾಷ್ಟ್ರಗಳು ವಿರೋಧಿಸಿದೆ. ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಕುರಿತು ನವದೆಹಲಿಯಲ್ಲಿ ಒಕ್ಕೊರಲ ಧ್ವನಿ ವ್ಯಕ್ತವಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಹಾಗೂ ಜಾಗತಿಕ ಮಟ್ಟದಲ್ಲಿನ ಶಾಂತಿಯುತ ಹಾಗೂ ಸೌಹಾರ್ಧಯುತ ಸಂಬಂಧಗಳ ತತ್ವಗಳಿಗೆ ಅನುಗುಣವಾಗಿ ಎಲ್ಲಾ ರಾಷ್ಟ್ರಗಳು ಕಾರ್ಯನಿರ್ವಹಿಸಬೇಕು ಎಂದು ದೆಹಲಿ ಜಿ20 ಶೃಂಗಸಭೆಯಲ್ಲಿ ಒತ್ತಾಯಿಸಲಾಗಿದೆ.
220 ಸಭೆ, 60 ನಗರ, 25,000 ಅತಿಥಿಗಳು; ಜಿ20 ಶೃಂಗಸಭೆಯಲ್ಲಿ ಭಾರತದ ದಾಖಲೆ!