ಜಿ20 ನಾಯಕರ ಔಟಣಕೂಟ; ಮನ್‌ಮೋಹನ್ ಸಿಂಗ್, ದೇವೇಗೌಡ, ಸಿದ್ದರಾಮಯ್ಯ ಸೇರಿ ಹಲವರು ಗೈರು!
ಜಿ20 ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ ಔತಣಕೂಟಕ್ಕೆ ಹಲವರು ನಾಯಕರು ಗೈರಾಗಿದ್ದಾರೆ. ಮನ್‌ಮೋಹನ್ ಸಿಂಗ್, ದೇವೇಗೌಡ ಗೈರಾಗಿದ್ದರೆ. ಸಿದ್ದರಾಮಯ್ಯ ಸೇರಿ ಐವರು ಇಂಡಿಯಾ ಮೈತ್ರಿಕೂಟದ ಸಿಎಂ ಕೂಡ ಗೈರಾಗಲಿದ್ದಾರೆ.

ನವದೆಹಲಿ(ಸೆ.09) ಭಾರತ ಅಧ್ಯಕ್ಷತೆ ವಹಿಸಿರುವ ಜಿ20 ಶೃಂಗಸಭೆಯಲ್ಲಿ ಹಲವು ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದೆ. ಇದರ ಜೊತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ ಔತಣಕೂಟ ವಿವಾದಕ್ಕೂ ಗುರಿಯಾಗಿದೆ. ಇಂದು ರಾತ್ರಿ 7 ಗಂಟೆಯಿಂದ ಜಿ20 ನಾಯಕರ ಔತಣಕೂಟ ಆರಂಭಗೊಂಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ನೀಡಿಲ್ಲ ಎಂದು ಕಾಂಗ್ರೆಸ್ ರಂಪಾಟ ಮಾಡಿತ್ತು. ಇದರ ಬೆನ್ನಲ್ಲೇ ಇಂಡಿಯಾ ಮೈತ್ರಿ ಒಕ್ಕೂಟದ ಹಲವು ನಾಯಕರು ಔತಣಕೂಡದಿಂದ ದೂರ ಉಳಿದಿದ್ದಾರೆ. ಆರೋಗ್ಯದ ಕಾರಣದಿಂದ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್, ದೇವೇಗೌಡ ಇಂದಿನ ಔತಣಕೂಟಕ್ಕೆ ಹಾಜರಾಗುತ್ತಿಲ್ಲ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಚತ್ತೀಸಘಡ ಮುಖ್ಯಮಂತ್ರಿ ಭೂಪೇಶ್ ಭಾಘೆಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಔತಣಕೂಟಕ್ಕೆ ಗೈರಾಗುತ್ತಿದ್ದಾರೆ. ಇನ್ನು ಕಾಂಗ್ರೆಸ್ ಮುಖ್ಯಮಂತ್ರಿಗಳ ಪೈಕಿ ಜಿ20 ಔತಣಕೂಟಕ್ಕೆ ಹಾಜರುವುದಾಗಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಕು ಖಚಿತಪಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಮುಖ್ಯಮಂತ್ರಿಗಳ ಪೈಕಿ ಔತಣಕೂಟಕ್ಕೆ ಹಾಜರಾತಿ ಖಚಿತಪಡಿಸಿದ ಏಕೈಕ ಸಿಎಂ ಸುಖ್ವಿಂದರ್ ಸಿಂಗ್ ಸುಕು.
ಭಾರತದ ಐತಿಹಾಸಿಕ ಒಪ್ಪಂದ; ಮಧ್ಯಪ್ರಾಚ್ಯ, ಯುರೋಪ್ ಸಂಪರ್ಕ ಕಾರಿಡಾರ್ ಶೀಘ್ರ ಆರಂಭ!
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹಿಮಂತ ಸೊರೆನ್ ಜಿ20 ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಜಿ20 ಪ್ರತಿನಿಧಿಗಳಿಗೆ ಭಾರತೀಯ ಸಂಪ್ರದಾಯದಂತೆ ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲಿ ಊಟೋಪಚಾರ ನೀಡಲಾಗುತ್ತಿದೆ. ಇದಕ್ಕಾಗಿ ಬರೋಬ್ಬರಿ 15,000 ಚಿನ್ನ ಮತ್ತು ಬೆಳ್ಳಿ ಸಾಮಗ್ರಿಗಳನ್ನು ಕರ್ನಾಟಕ, ಉತ್ತರ ಪ್ರದೇಶ, ಜೈಪುರ ಮತ್ತು ಪಶ್ಚಿಮ ಬಂಗಾಳ ಮೂಲದ 200 ಕುಶಲಕರ್ಮಿಗಳು 50,000 ಮಾನವ ಕೆಲಸದ ಗಂಟೆಗಳ ಸಮಯದಲ್ಲಿ ತಯಾರಿಸಿದ್ದಾರೆ. ಅತಿಥಿಗಳು ಆಗಮಿಸಿದಾಗ ಅವರಿಗೆ ನೀಡುವ ವೆಲ್‌ಕಂ ಡ್ರಿಂಕ್ ಅನ್ನು ಚಿನ್ನ ಲೇಪಿತ ಲೋಟಗಳಲ್ಲಿ ನೀಡಲಾಗುತ್ತದೆ. ಈ ಬೆಳ್ಳಿಯ ಲೋಟ, ತಟ್ಟೆ, ಚಮಚಗಳು ವಿಶೇಷ ವಿನ್ಯಾಸಗಳನ್ನು ಹೊಂದಿದ್ದು ಕೆಲವು ತಾಮ್ರ ಮಿಶ್ರಿತ ಬೆಳ್ಳಿ ಸಾಮಾನುಗಳಿವೆ.
220 ಸಭೆ, 60 ನಗರ, 25,000 ಅತಿಥಿಗಳು; ಜಿ20 ಶೃಂಗಸಭೆಯಲ್ಲಿ ಭಾರತದ ದಾಖಲೆ!
ವಿದೇಶಿ ನಾಯಕರುಗಳ ಔತಣಕ್ಕೆ ಭಾರತೀಯ ಸಂಪ್ರದಾಯದ ಎಲ್ಲ ರೀತಿಯ ಖಾದ್ಯ ತಯಾರಿಸಲಾಗುತ್ತದೆ. ಜಿ20 ಸಭೆ ಪ್ರಾರಂಭವಾದ ಶುಕ್ರವಾರದಿಂದ 3 ದಿನಗಳ ಕಾಲ ಈ ವೇಳೆ ಉತ್ತರ ಭಾರತದ ಮುಘಲಾಯಿ ಪಾಕ ಪದ್ಧತಿಯಿಂದ ಹಿಡಿದು ದಕ್ಷಿಣ ಭಾರತ ಸೇರಿದಂತೆ ಭಾರತದ ಎಲ್ಲ ರುಚಿಕರ ಆಹಾರವನ್ನು ಪ್ರತಿನಿಧಿಗಳಿಗೆ ನೀಡಲಾಗುತ್ತದೆ. ಅಲ್ಲದೇ ರಾಗಿಯಿಂದ ಮಾಡಲ್ಪಟ್ಟಖಾದ್ಯಗಳು, ಸ್ಥಳೀಯ ವಿಶೇಷ ತಿಂಡಿ ತಿನಿಸುಗಳನ್ನು ಬಡಿಸಲಾಗುತ್ತದೆ. ಪ್ರತಿನಿಧಿಗಳು ತಂಗಿರುವ ಹೋಟೆಲ್‌ಗಳಲ್ಲಿಯೂ ರಾಗಿ ಆಹಾರವನ್ನು ನೀಡಲಾಗುತ್ತದೆ.