Asianet Suvarna News Asianet Suvarna News

220 ಸಭೆ, 60 ನಗರ, 25,000 ಅತಿಥಿಗಳು; ಜಿ20 ಶೃಂಗಸಭೆಯಲ್ಲಿ ಭಾರತದ ದಾಖಲೆ!

ಭಾರತ ಜಿ20  ಶೃಂಗಸಭೆಯ ಅಧ್ಯಕ್ಷತೆ ವಹಿಸಿದ ಬಳಿಕ ಭಾರತದಲ್ಲಿ 220 ಸಭೆ ಆಯೋಜಿಸಿದೆ. ಕಾಶ್ಮೀರ ಸೇರಿದಂತೆ 60 ವಿವಿಧ ನಗರದಲ್ಲಿ, 25,000ಕ್ಕೂ ಗಣ್ಯ ಅತಿಥಿಗಳು ಈ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ದಾಖಲೆ ಬರೆಯಲಾಗಿದೆ.
 

G20 India 2023 220 meetings in 60 Cities with 25 000 delegates most inclusive Summit in History ckm
Author
First Published Sep 9, 2023, 5:11 PM IST

ನವದೆಹಲಿ(ಸೆ.09) ಘಟಾನುಘಟಿ ದೇಶಗಳು ಜಿ20 ಅಧ್ಯಕ್ಷತೆ ವಹಿಸಿ ಶೃಂಗಸಭೆ ಆಯೋಜಿಸಿದೆ.  ಆದರೆ ನಿಯಮಿತಿ ಪರಿಮಿತಿಯೊಳಗೆ ಸಭೆ ನಡೆಸಿದೆ. ಆದರೆ ಜಿ20 ಇತಿಹಾಸದಲ್ಲೇ ಅತ್ಯಂತ ಸಾಂಸ್ಕೃತಿ, ರೋಮಾಂಚಕ ಹಾಗೂ ಗುರಿ ಆಧಾರಿತ ಅಧ್ಯಕ್ಷತೆ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಅಭಿವೃದ್ಧಿ, ತಂತ್ರಜ್ಞಾನ ಬಳಕೆ, ಸುಲಭ ಹಾಗೂ ಸರಳ ಜೀವನಕ್ಕಾಗಿ ಭಾರತ ಒತ್ತು ನೀಡಿದೆ. ವಸುದೈವಕ ಕುಟುಂಬ ಅನ್ನೋ ಪರಿಕಲ್ಪನೆ ಅಡಿಯಲ್ಲಿ ಆಯೋಜಿಸಿರುವ ಶೃಂಗಸಭೆ ಹಲವು ದಾಖಲೆ ಬರೆದಿದೆ.

2023ರಲ್ಲಿ ಭಾರತ ಜಿ20 ಅಧ್ಯಕ್ಷತೆ ವಹಿಸಿಕೊಂಡು ಶೃಂಗಸಭೆ ಆಯೋಜಿಸಿದೆ. 220ಕ್ಕೂ ಹೆಚ್ಚು ಜಿ20 ಶೃಂಗಸಭೆಗಳನ್ನು ಭಾರತ ಆಯೋಜಿಸಿದೆ.  ಇನ್ನು 220ಕ್ಕೂ ಹೆಚ್ಚು ಸಭೆಗಳನ್ನು ಭಾರತದ 60ಕ್ಕೂ ಹೆಚ್ಚು ನಗರದಲ್ಲಿ ಸಭೆ ಆಯೋಜಿಸಲಾಗಿದೆ. ವಿಶೇಷ ಅಂದರೆ ಜಮ್ಮು ಮತ್ತು ಕಾಶ್ಮೀರದಲ್ಲೂ ಭಾರತ ಜಿ20 ಸಭೆ ಆಯೋಜಿಸಿದೆ. 115 ರಾಷ್ಟ್ರದ 25,000ಕ್ಕೂ ಗಣ್ಯ ಅತಿಥಿಗಳು ಪಾಲ್ಗೊಂಡಿದ್ದರು. ಈಜಿಪ್ಟ್, ನೈಜೀರಿಯಾ ಸೇರಿದಂತೆ ಆಫ್ರಿಕಾ ದೇಶಗಳು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

73 ಘೋಷಣೆಗೆ ವಿಶ್ವನಾಯಕರ ಅಂಗೀಕಾರ, ದಾಖಲೆ ಬರೆದ ಭಾರತದ G20 ಅಧ್ಯಕ್ಷತೆ!

ಭಾರತದ ಜಿ20 ಶೃಂಗಸಭೆಯಲ್ಲಿ ಭಾರತ ಹೆಜ್ಜೆಗುರುತು ಮೂಡಿಸಿದೆ. ಆಹಾರ ಭದ್ರತೆ, ಪೋಷಣೆ, ಸಾಗರ ಆರ್ಥಿಕತೆಗಾಗಿ  ಉನ್ನತ  ಮಟ್ಟದ ತತ್ವಗಳು, ಪ್ರವಾಸೋದ್ಯಮ, MSME ಮಾಹಿತಿಗೆ ಪ್ರವೇಶ ಹೆಚ್ಚಿಸಲು ಕ್ರಮ, ದೆಹಲಿ ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟವನ್ನು ಜಿ20 ಖಾಯಂ ಸದಸ್ಯರನ್ನಾಗಿ ಸೇರಿಸುವುದು ಸೇರಿದಂತೆ ಹಲವು ಫಲಿತಾಂಶಗಳು ಹೊರಬಿದ್ದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್, ಬಲಿಷ್ಠ, ಸುಸ್ಥಿರ ಹಾಗೂ ಸಮತೋಲನ ಬೆಳವಣಿಗೆ ಉತ್ತೇಜನ ನೀಡಲು ಭಾರತದ ಜಿ20 ಶೃಂಗಸಭೆ ಮಹತ್ವದ ಪಾತ್ರವಹಿಸಿದೆ ಎಂದಿದ್ದಾರೆ.  

ಹುಟ್ಟು ಹಬ್ಬ ಆಚರಣೆಗೆ ಜಿ20 ಸಭೆ ಕಂಟಕ, ಕುಟುಂಬ, ಫೋಟೋಗ್ರಾಫರ್ ಮೇಲೆ ಕೇಸ್!

ಜಿ20 ಶೃಂಗಸಭೆಯ ಆತಿಥ್ಯ ವಹಿಸುತ್ತಿರುವ ದೆಹಲಿಯಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಹಾಗೂ ಅರೆ ಸೇನಾಪಡೆಗಳನ್ನು ನೇಮಕ ಮಾಡಲಾಗಿದೆ. ಡ್ರೋನ್‌ ಹಾಗೂ ಯುದ್ಧ ವಿಮಾನಗಳ ಹಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಅಗತ್ಯ ಸಾಮಾಗ್ರಿಗಳನ್ನು ಸಾಗಿಸುವ ವಾಹನಗಳನ್ನು ಬಿಟ್ಟು ಇತರ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅಂಚೆ ಹಾಗೂ ಆರೋಗ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಡೆಲಿವರಿ ಸೇವೆಗಳನ್ನು ನಿರ್ಬಂಧಿಸಲಾಗಿದೆ.
 

Follow Us:
Download App:
  • android
  • ios