ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಗೃಹ ಸಚಿವಾಲಯದಲ್ಲಿ NSG, BSF, CRPF, SSB ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಯಿತು. ಪ್ರತೀಕಾರದ ಕುರಿತು ಚರ್ಚೆ ನಡೆದಿದ್ದು, ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ನಡೆಯುತ್ತಿದೆ. ದಾಳಿಯ ರೂವಾರಿ ಪಾಕಿಸ್ತಾನದ ಮಾಜಿ ಎಸ್‌ಎಸ್‌ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಸೇನೆ ಮತ್ತು CAPF ಜಂಟಿ ಸಮರಾಭ್ಯಾಸ ನಡೆಸಿವೆ.

ನವದೆಹಲಿ (ಏ.29): ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಮಂಗಳವಾರ ಗೃಹ ಸಚಿವಾಲಯದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ರಾಷ್ಟ್ರೀಯ ಭದ್ರತಾ ಪಡೆ (NSG), ಗಡಿ ಭದ್ರತಾ ಪಡೆ (BSF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಸಶಸ್ತ್ರ ಸೀಮಾ ಬಲ್ (SSB) ಹಿರಿಯ ಅಧಿಕಾರಿಗಳು ಈ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದಾರೆ. ಇವುಗಳು ಭಾರತದ ಪ್ರಮುಖ ಪ್ಯಾರಾಮಿಲಿಟರಿ ಪಡೆಗಳಾಗಿವೆ.

ಭಯೋತ್ಪಾದಕ ದಾಳಿಯ ನಂತರ ಭಾರತ ತೆಗೆದುಕೊಳ್ಳುವ ಪ್ರತೀಕಾರದ ಬಗ್ಗೆಯೇ ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರ ಸಾಲು ಸಾಲು ಸಭೆಗಳನ್ನು ನಡೆಸುತ್ತಿದ್ದು, ಇಂದು ಕಾಶ್ಮೀರದ ಪ್ರಮುಖ ಭಾಗದಲ್ಲಿ ಸೇನಾ ಕಾರ್ಯಚರಣೆ ಕೂಡ ನಡೆಯುತ್ತಿದೆ. ಯಾವ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಅನ್ನೋ ಮಾಹಿತಿಯನ್ನೂ ಕೂಡ ಕೇಂದ್ರ ಸರ್ಕಾರ ನೀಡಿಲ್ಲ.

ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆ ಬುಧವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಪಹಲ್ಗಾಮ್ ದಾಳಿಯ ನಂತರ ಇದು ಮೊದಲ ಸಚಿವ ಸಂಪುಟ ಸಭೆಯಾಗಿದೆ.

ಮಂಗಳವಾರ ಭಾರತ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ 'ಎಕ್ಸ್' ಹ್ಯಾಂಡಲ್ ಅನ್ನು ನಿಷೇಧಿಸಿದೆ. ಪಹಲ್ಗಾಮ್ ದಾಳಿಯ ನಂತರ, ಖವಾಜಾ ಆಸಿಫ್ ಅವರ ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಪಾಕಿಸ್ತಾನವು ದೀರ್ಘಕಾಲದವರೆಗೆ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ಒದಗಿಸುತ್ತಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಭಾರತ ಸೋಮವಾರ ಪಾಕಿಸ್ತಾನದ 17 ಯೂಟ್ಯೂಬ್ ಚಾನೆಲ್‌ಗಳನ್ನು ಸಹ ನಿಷೇಧಿಸಿತ್ತು.

ಪಹಲ್ಗಾಮ್ ದಾಳಿಯ ಬಗ್ಗೆ ಗುಪ್ತಚರ ಸಂಸ್ಥೆಗಳು ಇಂದು ಪ್ರಮುಖ ಮಾಹಿತಿಯನ್ನು ನೀಡಿವೆ. ಈ ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಮಾಜಿ ಎಸ್‌ಎಸ್‌ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ. ಮೂಸಾ ಪ್ರಸ್ತುತ ಲಷ್ಕರ್-ಎ-ತೈಬಾ ಪರ ಕೆಲಸ ಮಾಡುತ್ತಿದ್ದಾನೆ. ಭದ್ರತಾ ಪಡೆಗಳು ಮತ್ತು ಕಾಶ್ಮೀರೇತರರ ಮೇಲೆ ದಾಳಿ ನಡೆಸಲು ಲಷ್ಕರ್ ಅವನನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಿತ್ತು. ಮೂಸಾ 2024 ರ ಅಕ್ಟೋಬರ್‌ನಲ್ಲಿ ಗಂಡರ್‌ಬಲ್‌ನ ಗಗಂಗೀರ್‌ನಲ್ಲಿ ದಾಳಿ ನಡೆಸಿದ್ದ. ಇದರಲ್ಲಿ ಹಲವಾರು ಕಾರ್ಮಿಕರು ಮತ್ತು ಸ್ಥಳೀಯ ವೈದ್ಯರು ಪ್ರಾಣ ಕಳೆದುಕೊಂಡಿದ್ದರು.

ದಾಳಿಯ ತನಿಖೆ ನಡೆಸುತ್ತಿರುವ NIA, ನಿರಂತರವಾಗಿ ದೃಶ್ಯವನ್ನು ಮರುಸೃಷ್ಟಿಸುತ್ತಿದೆ. ಭಯೋತ್ಪಾದಕರಿಗೆ ಸಹಾಯ ಮಾಡಿದ ಸ್ಥಳೀಯ ನಾಗರಿಕರನ್ನು ಸಂಸ್ಥೆ ಹುಡುಕುತ್ತಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು.

ಸಿಎಪಿಎಫ್‌ ಜೊತೆ ಭಾರತೀಯ ಸೇನೆ ಜಂಟಿ ಸಮರಾಭ್ಯಾಸ: ಭಾರತೀಯ ಸೇನೆಯು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ನೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿದೆ. ತ್ರಿಶಕ್ತಿ ದಳವು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ವಿವರ ನೀಡಿದ್ದು, ಭಾರತೀಯ ಸೇನೆ ಮತ್ತು ಸಶಸ್ತ್ರ ಪೊಲೀಸ್ ಪಡೆಗಳು ಒಟ್ಟಾಗಿ ಕಾರ್ಯಾಚರಣೆಯ ಸನ್ನದ್ಧತೆಯನ್ನು ಚುರುಕುಗೊಳಿಸಿವೆ. ಪ್ರತಿಯೊಂದು ಸವಾಲನ್ನು ಎದುರಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ.

ಪಹಲ್ಗಾಮ್‌ನ ಕಣ್ಣೀರ ಕಥೆ, ಎಕ್ಸಿಟ್‌ ಗೇಟ್‌ನಲ್ಲಿ ಗನ್‌ಶಾಟ್‌, ಎಂಟ್ರಿ ಗೇಟ್‌ ಬಳಿ ಓಡಿದ್ದ ಟೂರಿಸ್ಟ್‌ಗಳು!

ಇದಕ್ಕೂ ಮೊದಲು, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಗ್ರಾಮ ಭದ್ರತಾ ಸಮಿತಿಗಳ (VDGs) ಸದಸ್ಯರಿಗೆ ಸೇನೆಯು ವಿಶೇಷ ತರಬೇತಿಯನ್ನು ನೀಡಿತ್ತು. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಈ ತರಬೇತಿಯನ್ನು ನೀಡಲಾಗಿದೆ.

ಪಾಕಿಸ್ತಾನದ ಮೇಲೆ ಮತ್ತೊಂದು ಕ್ರಮ ಜರುಗಿಸಿದ ಭಾರತ, ಪಾಕ್ ರಕ್ಷಣಾ ಸಚಿವರ ಎಕ್ಸ್ ಖಾತೆ ಬ್ಲಾಕ್

Scroll to load tweet…