ಟರ್ಕಿಗೆ ತೆರಳಿದ್ದ ಎನ್‌ಡಿಆರ್‌ಎಫ್ ತಂಡಕ್ಕೆ ಮೋದಿ ಮೆಚ್ಚುಗೆ: ಇನ್ನೊಬ್ಬರ ರಕ್ಷಣೆ ನಮ್ಮ ಕರ್ತವ್ಯ ಎಂದ ಪ್ರಧಾನಿ
ಟರ್ಕಿಗೆ ತೆರಳಿದ್ದ ರಕ್ಷಣಾ ತಂಡಕ್ಕೆ ಮೋದಿ ಶಹಬ್ಬಾಸ್ ಹೇಳಿದ್ದಾರೆ. ಹಾಗೆ, ನಾವು ಸ್ವಾವಲಂಬಿ ಮಾತ್ರವಲ್ಲ, ನಿಸ್ವಾರ್ಥಿಗಳು. ವಿಶ್ವದ ಶ್ರೇಷ್ಠ ರಕ್ಷಣಾ ತಂಡ ಕಟ್ಟಲು ಪಣ ತೊಡೋಣ ಎಂದು ರಕ್ಷಣಾ ತಂಡಗಳ ಜತೆ ಸಂವಾದದಲ್ಲಿ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ನವದೆಹಲಿ (ಫೆಬ್ರವರಿ 21, 2023): ಭೂಕಂಪ ಪೀಡಿತ ಸಿರಿಯಾ ಹಾಗೂ ಟರ್ಕಿಗೆ ತೆರಳಿ ಅಲ್ಲಿನ ನೂರಾರು ಜನರ ಪ್ರಾಣ ರಕ್ಷಿಸಿ ಭಾರತಕ್ಕೆ ವಾಪಸಾದ ಪ್ರಕೃತಿ ವಿಕೋಪ ನಿಗ್ರಹ ಪಡೆಗಳ ಜತೆ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂವಾದ ನಡೆಸಿ, ತಂಡಗಳ ಕಾರ್ಯತತ್ಪರತೆ ಶ್ಲಾಘಿಸಿದರು. ‘ಇತ್ತೀಚಿನ ವರ್ಷಗಳಲ್ಲಿ ಭಾರತ ಕೇವಲ ಸ್ವಾವಲಂಬಿ ದೇಶ ಎಂದು ಮಾತ್ರವಲ್ಲ, ನಿಸ್ವಾರ್ಥ ದೇಶ ಎಂದು ಎನ್ನಿಸಿಕೊಂಡಿದೆ’ ಎಂದು ಸಂತಸ ವ್ಯಕ್ತಪಸಿದರು.
ಸಿರಿಯಾದಿಂದ ಮರಳಿದ 3 ಎನ್‌ಡಿಆರ್‌ಎಫ್ ತಂಡಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನೀವು ಮಾನವತೆಯ ಸೇವೆ ಮಾಡಿದ್ದೀರಿ. ಭಾರತಕ್ಕೆ ಹೆಮ್ಮೆ ತಂದಿದ್ದೀರಿ. ಇಡೀ ವಿಶ್ವವೇ ನಮ್ಮದು ಎಂದು ಭಾವಿಸೋಣ. ಯಾರೇ ಕಷ್ಟದಲ್ಲಿದ್ದರೂ ತಕ್ಷಣವೇ ಸಹಾಯ ಮಾಡೋಣ. ನಮ್ಮ ತಂಡಗಳನ್ನು ವಿಶ್ವದ ಅತಿ ಶ್ರೇಷ್ಠ ರಕ್ಷಣಾ ತಂಡಗಳು ಎಂದು ಮಾರ್ಪಡಿಸಲು ಪಣ ತೊಡೋಣ’ ಎಂದರು.
ಇದನ್ನು ಓದಿ: ಟರ್ಕಿ - ಸಿರಿಯಾ ಭೂಕಂಪ: ಪರಿಹಾರ ಕಾರ್ಯ ಸುಗಮಕ್ಕೆ ಭಾರತೀಯ ಸೇನೆಯಿಂದ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ
ಫೆಬ್ರವರಿ 6ರ ಟರ್ಕಿ-ಸಿರಿಯಾ ಭೂಕಂಪದ ಕಾರಣ ಭಾರತ ರಕ್ಷಣಾ ತಂಡ ಹಾಗೂ ವೈದ್ಯಕೀಯ ತಂಡ ಕಳಿಸಿತ್ತು. ವೈದ್ಯಕೀಯ ತಂಡ 4000 ಜನರನ್ನು ಉಪಚರಿಸಿತ್ತು.
ಇದನ್ನೂ ಓದಿ: Turkey: 128 ಗಂಟೆ ಕಾಲ ಅವಶೇಷದಡಿ ಸಿಲುಕಿದ್ದ 2 ತಿಂಗಳ ಮಗು ಜೀವಂತವಾಗಿ ಪತ್ತೆ: ಪವಾಡ ಅಂದ್ರೆ ಇದು..!