ಸಕ್ರಿಯ ಸೋಂಕಿತರ ಸಂಖ್ಯೆ 18,604ಕ್ಕೆ ಇಳಿಕೆ ದೈನಂದಿನ ಪಾಸಿಟಿವಿಟಿ ದರವು ಶೇ.0.58 ಕೋವಿಡ್‌ ಚೇತರಿಕೆ ದರ ಶೇ.98.74ಕ್ಕೆ ಏರಿಕೆ

ನವದೆಹಲಿ(ಮೇ.13): ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟುಇಳಿಕೆ ಕಂಡುಬಂದಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,841 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆಯಲ್ಲಿ ಒಟ್ಟು 9 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 18,604ಕ್ಕೆ ಇಳಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.0.58ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ.0.69ಕ್ಕೆ ಇಳಿಕೆಯಾಗಿದೆ. ಕೋವಿಡ್‌ ಚೇತರಿಕೆ ದರ ಶೇ.98.74 ರಷ್ಟಿದೆ. ಈವರೆಗೆ 190.99 ಕೋಟಿ ಡೋಸು ಕೋವಿಡ್‌ ಲಸಿಕೆ ವಿತರಿಸಲಾಗಿದೆ.

ದೇಶಕ್ಕೆ ತೆರಳುವವರಿಗೆ ಬೂಸ್ಟರ್‌ ಡೋಸ್‌ ಕಾಲಾವಧಿ ನಿಯಮ ಸಡಿಲ
 ಕೋವಿಡ್‌ ಬೂಸ್ಟರ್‌ ಡೋಸು ಪಡೆಯುವ ನಿಯಮಗಳನ್ನು ಸರ್ಕಾರ ಗುರುವಾರ ಕೊಂಚ ಸಡಿಲಿಸಿದೆ. ವಿದೇಶಕ್ಕೆ ತೆರಳುವ ನಾಗರಿಕರು 2 ನೇ ಡೋಸು ಪಡೆದ 9 ತಿಂಗಳ ಅವಧಿ ಮುಕ್ತಾಯವಾಗುವ ಮೊದಲೇ ಮುಂಜಾಗ್ರತಾ (ಬೂಸ್ಟರ್‌) ಡೋಸು ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಪ್ರಸ್ತುತ ದೇಶದಲ್ಲಿ 18 ವರ್ಷ ಮೇಲ್ಪಟ್ಟಎಲ್ಲ ನಾಗರಿಕರು 2 ನೇ ಡೋಸು ಲಸಿಕೆ ಪಡೆದ 9 ತಿಂಗಳ ನಂತರ ಬೂಸ್ಟರ್‌ ಡೋಸು ಪಡೆಯಬಹುದಾಗಿದೆ. ಆದರೆ ವಿದೇಶಗಳಿಗೆ ತೆರಳುವವರಿಗಾಗಿ ಈ 9 ತಿಂಗಳ ಅವಧಿಯ ನಿಯಮವನ್ನು ಸಡಲಿಸಲಾಗಿದೆ. ಲಸಿಕಾಕರಣದ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

WHO ಸುಧಾರಿಸುವ, ಬಲಪಡಿಸುವ ಅಗತ್ಯವಿದೆ, ಪ್ರಮುಖ ಪಾತ್ರವಹಿಸಲು ಭಾರತ ಸಿದ್ಧ, ಪ್ರಧಾನಿ ಮೋದಿ!

ವಿಶ್ವದೆಲ್ಲೆಡೆ ಕೋವಿಡ್‌ ಇಳಿಕೆ: ಡಬ್ಲ್ಯುಎಚ್‌ಒ
ಅಮೆರಿಕ ಹಾಗೂ ಆಫ್ರಿಕಾವನ್ನು ಹೊರತುಪಡಿಸಿ ಜಗತ್ತಿನಾದ್ಯಂತ ವರದಿಯಾಗುತ್ತಿರುವ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ಮಂಗಳವಾರ ಕೋವಿಡ್‌ ಸಾಂಕ್ರಾಮಿಕದ ವಾರದ ವರದಿಯನ್ನು ಪ್ರಕಟಿಸಿದ ಡಬ್ಲ್ಯುಎಚ್‌ಒ, ‘ಕಳೆದ ವಾರ ಜಗತ್ತಿನಾದ್ಯಂತ 35 ಲಕ್ಷ ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 25,000 ಸೋಂಕಿತರು ಸಾವನ್ನಪ್ಪಿದ್ದಾರೆ. ಇದು ಕೋವಿಡ್‌ ಪ್ರಕರಣಗಳಲ್ಲಿ ಶೇ. 12 ರಿಂದ ಶೇ. 25 ರಷ್ಟುಇಳಿಕೆಯಾಗಿರುವುದನ್ನು ಸೂಚಿಸುತ್ತದೆ’ ಎಂದಿದೆ.‘ಅಮೆರಿಕದಲ್ಲಿ ಶೇ. 14 ರಷ್ಟುಹಾಗೂ ಆಫ್ರಿಕಾದಲ್ಲಿ ಶೇ. 12 ರಷ್ಟುಸೋಂಕು ಏರಿಕೆಯಾಗಿದೆ. ಪಶ್ಚಿಮ ಫೆಸಿಫಿಕ್‌ ದೇಶಗಳಲ್ಲಿ ಸೋಂಕಿನ ದರವು ಸ್ಥಿರವಾಗಿದ್ದು, ಉಳಿದೆಡೆ ಸೋಂಕಿನ ದರದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ’ ಎಂದು ತಿಳಿಸಿದೆ.

 ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್‌ ಕೇಸ್‌!
ಜಗತ್ತಿನಲ್ಲಿ ಕೋವಿಡ್‌ ಚೊಚ್ಚಲ ಪ್ರಕರಣ ಪತ್ತೆಯಾದ ಎರಡೂವರೆ ವರ್ಷಗಳ ಬಳಿಕ ತನ್ನಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ಉತ್ತರ ಕೊರಿಯಾ ಘೋಷಣೆ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಸೋಂಕು ತಡೆಗೆ ದೇಶಾದ್ಯಂತ ಲಾಕ್‌ಡೌನ್‌ ಜಾರಿ ಮಾಡಿದೆ.ಈ ನಡುವೆ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರು ಮಾಸ್‌್ಕ ಧರಿಸಿ ಲಾಕ್‌ಡೌನ್‌ ಕುರಿತು ಸಭೆ ನಡೆಸುತ್ತಿರುವ ಫೋಟೋವೊಂದು ಬಿಡುಗಡೆಯಾಗಿದೆ. ಪ್ರಾಯಶಃ ಕಿಮ್‌ ಮಾಸ್‌್ಕ ಧರಿಸಿದ್ದು ಇದೇ ಮೊದಲು ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಭಾರತದಲ್ಲಿ 4.8 ಲಕ್ಷ ಅಲ್ಲ, 47 ಲಕ್ಷ ಕೋವಿಡ್‌ ಸಾವು: ಶಾಕ್ ಕೊಟ್ಟ WHO ವರದಿ

ಉತ್ತರ ಕೊರಿಯಾದಲ್ಲಿ ಎಷ್ಟುಮಂದಿಗೆ ಸೋಂಕು ಹರಡಿದೆ, ಅದು ಯಾವ ಪ್ರಮಾಣದಲ್ಲಿ ಹಬ್ಬುತ್ತಿದೆ ಎಂಬೆಲ್ಲಾ ವಿವರಗಳು ಲಭ್ಯವಾಗಿಲ್ಲ. ಅಧಿಕೃತ ಸುದ್ದಿಸಂಸ್ಥೆಯ ಮಾಹಿತಿ ಪ್ರಕಾರ, ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಒಂದಷ್ಟುಮಂದಿಗೆ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಒಮಿಕ್ರೋನ್‌ ರೂಪಾಂತರಿ ಕೊರೋನಾ ಪತ್ತೆಯಾಗಿದೆ.

ದ.ಕ.: 4 ಕೊರೋನಾ ಕೇಸ್‌
ದ.ಕ.ಜಿಲ್ಲೆಯಲ್ಲಿ ಗುರುವಾರ ನಾಲ್ಕು ಕೊರೋನಾ ಕೇಸ್‌ ಪತ್ತೆಯಾಗಿದ್ದು, ಇಬ್ಬರು ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ. ಯಾವುದೇ ಕೋವಿಡ್‌ ಸಾವು ಸಂಭವಿಸಿಲ್ಲ, ಪ್ರಸಕ್ತ 15 ಸಕ್ರಿಯ ಪ್ರಕರಣ ಇದೆ. ಜಿಲ್ಲೆಯ ಪಾಸಿಟಿವಿಟಿ ರೇಟ್‌ ಶೇ.0.86 ಆಗಿದೆ. ಇದುವರೆಗೆ ಒಟ್ಟು ಪಾಸಿಟಿವ್‌ ಸಂಖ್ಯೆ 1,35536ಕ್ಕೆ ಏರಿಕೆಯಾಗಿದ್ದು, 1,33,671 ಮಂದಿ ಡಿಸ್ಚಾಜ್‌ರ್‍ ಆಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,850 ಆಗಿದೆ ಎಂದು ಜಿಲ್ಲಾ ಹೆಲ್ತ್‌ ಬುಲೆಟಿನ್‌ ತಿಳಿಸಿದೆ.