Asianet Suvarna News Asianet Suvarna News

ಭಾರತದಲ್ಲಿ 4.8 ಲಕ್ಷ ಅಲ್ಲ, 47 ಲಕ್ಷ ಕೋವಿಡ್‌ ಸಾವು: ಶಾಕ್ ಕೊಟ್ಟ WHO ವರದಿ

* ವಿಶ್ವಾದ್ಯಂತ 60 ಲಕ್ಷ ಅಲ್ಲ, 1.5 ಕೋಟಿ ಬಲಿ

* ಭಾರತದಲ್ಲಿ 4.8 ಲಕ್ಷ ಅಲ್ಲ, 47 ಲಕ್ಷ ಕೋವಿಡ್‌ ಸಾವು

* 2020-21ರ ಸಾವಿನ ಬಗ್ಗೆ ಡಬ್ಲ್ಯುಎಚ್‌ಒ ವರದಿ

WHO says 47 lakh excess Covid deaths in India pod
Author
Bangalore, First Published May 6, 2022, 4:42 AM IST

ನವದೆಹಲಿ(ಮೇ.06) ‘ಭಾರತದಲ್ಲಿ 2020ರ ಜನರಿಯಿಂದ ಡಿಸೆಂಬರ್‌ 2021ರ 2 ವರ್ಷದ ಅವಧಿಯಲ್ಲಿ ಕೋವಿಡ್‌ನಿಂದ ಬಲಿಯಾದವರು ಸರ್ಕಾರ ಹೇಳಿದಂತೆ 4.8 ಲಕ್ಷ ಅಲ್ಲ, 47 ಲಕ್ಷ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ಡಬ್ಲ್ಯುಎಚ್‌ಒ ವರದಿಯನ್ನು ಗಮನಿಸಿದಾಗ ಅಧಿಕೃತ ಸಾವಿನ ಅಂಕಿ-ಅಂಶಗಳಿಗಿಂತ 10 ಪಟ್ಟು ಹೆಚ್ಚು ಕೋವಿಡ್‌ ಸಂಬಂಧಿ ಸಾವು ಸಂಭವಿಸುರುವುದು ಕಂಡುಬರುತ್ತದೆ.

ಇನ್ನು ಇದೇ ಅವಧಿಯಲ್ಲಿ ವಿಶ್ವದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 60 ಲಕ್ಷ ಅಲ್ಲ. 1.5 ಕೋಟಿ ಎಂದೂ ಅದು ತಿಳಿಸಿದೆ. ಅತಿ ಹೆಚ್ಚು ಸಾವು ಸಂಭವಿಸಿದ್ದು ಆಗ್ನೇಯ ಏಷ್ಯಾ, ಯುರೋಪ್‌ ಹಾಗೂ ಅಮೆರಿಕದಲ್ಲಿ ಎಂದು ಅದು ತಿಳಿಸಿದೆ.

ಯಾವ ಮಾನದಂಡ?:

ಆರೋಗ್ಯ ಸಂಸ್ಥೆಯ ಸಾವಿನ ವರದಿಯು ಬರೀ ಕೋವಿಡ್‌ನಿಂದ ನೇರವಾಗಿ ಸಂಭವಿಸಿದ ಸಾವುಗಳಷ್ಟೇ ಅಲ್ಲದೆ, ಕೋವಿಡ್‌ನಿಂದ ಆರೋಗ್ಯ ವ್ಯವಸ್ಥೆಯಲ್ಲಾದ ಹಾಗೂ ಸಮಾಜದಲ್ಲಿ ಆದ ಏರುಪೇರಿನಿಂದ ಆದ ಸಾವಿನ ಸಂಖ್ಯೆಯನ್ನೂ ಒಳಗೊಂಡಿದೆ. ಇದೇ ಆಧಾರದಲ್ಲಿ ಅಧ್ಯಯನ ನಡಸಲಾಗಿದೆ.

ಡಬ್ಲ್ಯುಎಚ್‌ಒ ವರದಿ ಪ್ರಶ್ನಾರ್ಹ: ಭಾರತ

ನವದೆಹಲಿ: ‘ವಿಶ್ವ ಆರೋಗ್ಯ ಸಂಸ್ಥೆಯು ಭಾರತದಲ್ಲಿ 2020-21ರ ಅವಧಿಯಲ್ಲಿ 47 ಲಕ್ಷ ಸಾವು ಸಂಭವಿಸಿವೆ ಎಂದು ನೀಡಿದ ವರದಿ ಪ್ರಶ್ನಾರ್ಹ. ಅವರ ಅಧ್ಯಯನ ವಿಧಾನವೇ ಸರಿಯಿಲ್ಲ. ಭಾರತದ ಅಭಿಪ್ರಾಯವನ್ನು ಹಾಗೂ ಪರಿಸ್ಥಿತಿಯನ್ನು ಅವಲೋಕಿಸದೇ ಹೆಚ್ಚು ಸಾವು ಸಂಭವಿಸಿದೆ ಎಂಬ ವರದಿ ಬಿಡುಗಡೆ ಮಾಡಿದೆ’ ಎಂದು ಭಾರತದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

‘ವೈಜ್ಞಾನಿಕ ತಳಹದಿಯಿಲ್ಲದ ಪ್ರಶ್ನಾರ್ಹ ಅಧ್ಯಯನ ವಿಧಾನವನ್ನು ಆರೋಗ್ಯ ಸಂಸ್ಥೆ ಅನುಸರಿಸಿದೆ. ಕೆಲವು ಮಾಧ್ಯಮ ವರದಿಗಳು ಹಾಗೂ ತನ್ನದೇ ಆದ ಗಣಿತ ಮಾದರಿಯನ್ನು ಅನುಸರಿಸಿ ಅದು ಅಧ್ಯಯನ ನಡೆಸಿದೆ’ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Follow Us:
Download App:
  • android
  • ios