ನವದೆಹಲಿ( ಸೆ. 16)   ಕೊರೋನಾ ವಿರುದ್ಧ ಹೋರಾಡಲು ವಿಶ್ವ ಬ್ಯಾಂಕ್ ಭಾರತಕ್ಕೆ  2.5 ಬಿಲಿಯನ್ ಡಾಲರ್( 1,83,71,38,75,000 ರೂ.)  ಸಾಲ ನೀಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಆರೋಗ್ಯ, ಸಾಮಾಜಿಕ ಭದ್ರತೆ, ಆರ್ಥಿಕ ವ್ಯವಸ್ಥೆ ಸುಧಾರಣೆ ಎಂಬ ಮೂರು ಅಂಶಗಳ ಆಧಾರದ ಮೇಲೆ ಸಾಲ ಸಿಕ್ಕಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಯಲ್ಲಿ ತಿಳಸಿದ್ದಾರೆ. 

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದರ ಲಾಭ ಸಿಗಲಿದೆ.  ಭಾರತದ ಮೊದಲಸಾರಿ ಲಾಕ್ ಡೌನ್ ಘೋಷಣೆ ಮಾಡಿದ ಕೆಲ ದಿನದಲ್ಲಿಯೇ ಮೊದಲ ಕಂತಿನ ಹಣ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.  ಮೊದಲ ಕಂತಿನಲ್ಲಿ ಒಂದು ಬಿಲಿಯನ್ ಡಾಲರ್ ಸಾಲ ಸಿಕ್ಕಿದ್ದು ಅದರಲ್ಲಿ  502.5 ಮಿಲಿಯನ್ ವಿನಿಯೋಗ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೊರೋನಾ ವಿಚಾರದಲ್ಲಿ  ಭಾರತಕ್ಕೆ ಸಿಹಿಸುದ್ದಿ ಕೊಟ್ಟ ರಷ್ಯಾ

ಸಾಮಾಝಿಕ ಭದ್ರತೆಗೆ ಸಂಬಂಧಿಸಿ ಮೇ 15 ಕ್ಕೆ ಎರಡನೇ ಕಂತಿನ ಹಣ ಬಂದಿದ್ದು 750 ಮಿಲಿಯನ್ ಡಾಲರ್  ಸಿಕ್ಕಿದೆ.   ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಇದಕ್ಕೆ ಕೇಂದ್ರ ಸರ್ಕಾರದ ಹಣವನ್ನು ಬಳಸಿಕೊಂಡು ನೆರವು ನೀಡಲಾಗಿದೆ ಎಂದು ತಿಳಿಸಿದರು.

ಮೂರನೇ ಹಂತದ 750 ಮಿಲಿಯನ್ ಡಾಲರ್  ಜುಲೈ ಆರರಂದು ಸಿಕ್ಕಿದೆ.  ಆರ್ಥಿ ವ್ಯವಸ್ಥೆ ಸುಧಾರಣೆಗೆ ಈ ಹಣ ಬಳಸಿಕೊಳ್ಳಲಾಗುತ್ತಿದೆ. ಆತ್ಮ ನಿರ್ಭರ ಭಾರತಕ್ಕೆ ಹಣ ವಿನಿಯೋಗ ಮಾಡಲಾಗಿದೆ. 

ವಿಶ್ವಬ್ಯಾಂಕ್ ಸಾಲ ನೀಡಿಕೆಗೆ ಒಪ್ಪಿಗೆ ನೀಡುವ ವೇಳೆ ಇದ್ದ ದೇಶದ ಕೊರೋನಾ ಸಂಖ್ಯೆಗೂ ಈಗ ಇರುವುದುಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ವಿಶ್ವದಲ್ಲಿಯೇ ಎರಡನೇ ಅತಿಹೆಚ್ಚು ಕೊರೋನಾ ಕೇಸ್ ಗಳು ಭಾರತದಲ್ಲಿ ಇವೆ.