ಬಾಂಗ್ಲಾ ಪತ್ರಿಕೆಯಲ್ಲಿ ಮೋದಿ ಲೇಖನ, ಮುಜಿಬುರ್‌ ರೆಹಮಾನ್ ಸಂಘರ್ಷ ನೆನಪಿಸಿಕೊಂಡ ಭಾರತದ ಪ್ರಧಾನಿ!

ಬಾಂಗ್ಲಾದೇಶ ರಚನೆಯಾಗಿ ಐವತ್ತು ವರ್ಷ| ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ| ಬಾಂಗ್ಲಾ ಪತ್ರಿಕೆಯಲ್ಲಿ ಪ್ರಧಾನಿ ಮೋದಿ ಲೇಖನ| ಮುಜಿಬುರ್‌ ರೆಹಮಾನ್ ಸಂಘರ್ಷ ನೆನಪಿಸಿಕೊಂಡ ಭಾರತದ ಪ್ರಧಾನಿ!

India PM Modi article printed in Bangladesh newspaper The Daily Star pod

ನವದೆಹಲಿ(ಮಾ.26): ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದು ಐವತ್ತು ವರ್ಷ ಪೂರೈಸುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೆರೆ ರಾಷ್ಟ್ರಕ್ಕೆ ತೆರಳಿದ್ದಾರೆ. ಎರಡು ದಿನ ಬಾಂಗ್ಲಾ ಪ್ರವಾಸದಲ್ಲಿರುವ ಪಿಎಂ ಮೋದಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಹೀಗಿರುವಾಗ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾರನ್ನೂ ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ. ಅಲ್ಲದೇ ಉಭಯ ರಾಷ್ಟ್ರಗಳ ನಡುವೆ ಅನೇಕ ಒಪ್ಪಂದಗಳೂ ನಡೆಯಲಿವೆ. ಇಂತಹ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದು, ಇದರಲ್ಲಿ ಉಭಯ ರಾಷ್ಟ್ರಗಳ ಆಳವಾದ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾರೆ. 

ಮೋದಿ 2 ದಿನ ಬಾಂಗ್ಲಾ ಪ್ರವಾಸ: ಕೋವಿಡ್‌ ಬಳಿಕ ಮೊದಲ ವಿದೇಶ ಭೇಟಿ!

ಬಾಂಗ್ಲಾ ಪತ್ರಿಕೆ 'ದ ಡೈಲಿ ಸ್ಟಾರ್'‌ನಲ್ಲಿ ಭಾರತದ ಪ್ರಧಾನಿ ಮೋದಿ ಬಾಂಗ್‌ಬಂಧು ಶೇಖ್ ಮುಜಿಬುರ್‌ ರೆಹಮಾನ್‌ರನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಬಾಂಗ್ಲಾದೇಶ ರಚನೆ ಅವರು ನಡೆಸಿದ ಸಂಘರ್ಷಕ್ಕೆ ಸಲಾಂ ಎಂದಿದ್ದಾರೆ. ಬಾಂಗ್ಲಾ ದೇಶಕ್ಕಾಗಿ ಸಂಘರ್ಷ ನಡೆಸಿರುವ ರೆಹಮಾನ್‌, ಇದರ ಏಕೀಕರಣಕ್ಕಾಗಿ ಹೋರಾಡಿದ್ದರು ಎಂದಿದ್ದಾರೆ.

ಶೇಖ್ ಮುಜಿಬುರ್‌ ರೆಹಮಾನ್‌ರನ್ನು ಭಾರತದಲ್ಲೂ ಬಹಳ ಗೌರವದಿಂದ ಕಾಣಲಾಗುತ್ತಿತ್ತು ಹಾಗೂ ಅವರ ಆಲೋಚನೆ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗೇ ಇಂದಿನ ಈ ಸಂಭ್ರಮದಲ್ಲಿ ಭಾರತೀಯರು ಬಾಂಗ್ಲಾದೇಶದೊಂದಿಗಿದ್ದಾರೆ ಎಂದಿದ್ದಾರೆ.

'ನೀವೇ ನಿಜವಾದ ಆಸ್ತಿ' ಕಾರ್ಯಕರ್ತನ ಪಾದ ಮುಟ್ಟಿ ನಮಸ್ಕರಿಸಿದ ಮೋದಿ!

ಇಷ್ಟೇ ಅಲ್ಲದೇ ಬಾಂಗ್ಲಾದೇಶದ ಸಂಘರ್ಷವನ್ನು ಗಮನಿಸಿದರೆ, ಇಂದು ಶೇಖ್ ಮುಜಿಬುರ್‌ ರೆಹಮಾನ್‌ ಹತ್ಯೆಯಾಗಿರದಿದ್ದರೆ, ಒಂದು ಪ್ರತ್ಯೇಕ ದಕ್ಷಿಣ ಏಷ್ಯಾ ಉಪಖಂಡವಿರುತ್ತಿತ್ತು. ಇಂದು ಬಾಂಗ್ಲಾ ಹೋರಾಟದ ನೋವನ್ನು ಮರೆತು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಮೋದಿ ತಮ್ಮ ಲೇಖನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು 2015 ರಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಗಡಿ ಒಪ್ಪಂದ ಬಗ್ಗೆಯೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಉಭಯ ದೇಶಗಳ ಸ್ನೇಹ ಸಂಬಂಧದ ಬಗ್ಗೆ ಮುಜಿಬುರ್‌ ರೆಹಮಾನ್ ಹೊಂದಿದ್ದ ದೂರದೃಷ್ಟಿಯನ್ನು ಹಾಡಿ ಹೊಗಳಿದ್ದಾರೆ. ಇಂದು ಭಾರತ ಹಾಗೂ ಬಾಂಗ್ಲಾದೇಶ ಒಟ್ಟಾಗಿ ವಿಕಾಸದ ಹಾದಿಯಲ್ಲಿ ಸಾಗುತ್ತಿದ್ದು, ತಮ್ಮ ಜನರಿಗೆ ಅವಕಾಶ ನಿಡುತ್ತಿದೆ ಎಂದಿದ್ದಾರೆ.

ನೆರೆ ರಾಷ್ಟ್ರದ ಜೊತೆ ಸಂಬಂಧ ಮತ್ತಷ್ಟು ಗಟ್ಟಿ; ಬಾಂಗ್ಲಾ ಪ್ರಯಾಣಕ್ಕೂ ಮುನ್ನ ಮೋದಿ ಮಾತು!

ಭಾರತ ಎಂದೆಂದಿಗೂ ಭಾರತದ ಪ್ರಮುಖ ಸಂಗಾತಿಯಾಗಿರುತ್ತದೆ. ಎರಡೂ ರಾಷ್ಟ್ರಗಳು ಶಾಂತಿಯ ಹಾದಿಯಲ್ಲಿ ಮುನ್ನಡೆಯುತ್ತಿವೆ. ಭಾಂಗ್ಲಾದೇಶ ರೂಪುಗೊಂಡು ಐವತ್ತು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ನನ್ನ ಪ್ರವಾಸ ಬಹಳಷ್ಟು ವಿಶೇಷವಾಗಿದೆ. ಹೀಗಿರುವಾಗ ಮುಜಿಬುರ್‌ ರೆಹಮಾನ್‌ರವರಿಗೆ ನನ್ನ ನಮನ ಎಂದಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಸೂಚನೆ: ಇದು ಬಾಂಗ್ಲಾ ಪತ್ರಿಕೆಯಲ್ಲಿ ಪ್ರಕಟವಾದ ಭಾರತದ ಪ್ರಧಾನಿ ನರೇಂದ್ರ ಮೋದಿ  ಬರೆದ ಲೇಖನದ ಪ್ರಮುಖಾಂಶಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ. 

Latest Videos
Follow Us:
Download App:
  • android
  • ios