Asianet Suvarna News Asianet Suvarna News

ನೆರೆ ರಾಷ್ಟ್ರದ ಜೊತೆ ಸಂಬಂಧ ಮತ್ತಷ್ಟು ಗಟ್ಟಿ; ಬಾಂಗ್ಲಾ ಪ್ರಯಾಣಕ್ಕೂ ಮುನ್ನ ಮೋದಿ ಮಾತು!

ಕೊರೋನಾ ವಕ್ಕರಿಸಿದ ಬಳಿಕ ವಿದೇಶ ಪ್ರಯಾಣದಿಂದ ದೂರ ಉಳಿದ ಪ್ರಧಾನಿ ಮೋದಿ ಇದೀಗ ಮೊದಲ ಪ್ರವಾಸ ಮಾಡಿದ್ದಾರೆ. ಬಾಂಗ್ಲಾದೇಶ ಸ್ವತಂತ್ರವಾಗಿ 50ನೇ ವರ್ಷಾಚರಣೆ  ಸಂಭ್ರಮದಲ್ಲಿ ಪಾಲ್ಗೊಳ್ಳಲು ಮೋದಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣಕ್ಕೂ ಮುನ್ನ ಪ್ರಧಾನಿ ಮಹತ್ವದ ಹೇಳಿಕೆ ನೀಡಿದ್ದಾರೆ.

PM Narendra Modi departure statement ahead of his 2 day visit to Bangladesh ckm
Author
Bengaluru, First Published Mar 25, 2021, 7:15 PM IST

ನವದೆಹಲಿ(ಮಾ.25):  ಪ್ರಧಾನಿ ನರೇಂದ್ರ ಮೋದಿ 15 ತಿಂಗಳ ಬಳಿಕ ತಮ್ಮ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಬಾಂಗ್ಲಾದೇಶ ವಿಮೋಚನೆಗೊಂಡು ಮಾರ್ಚ್ 26ಕ್ಕೆ 50 ವರ್ಷವಾಗುತ್ತಿದೆ. ಇದರ ಸಂಭ್ರಮಾಚರಣೆ ಹಾಗೂ ಬಾಂಗ್ಲಾ ಸಂಸ್ಥಾಪಕ ಶೇಕ್ ಮುಜೀಬುರ್ ರೆಹಮಾನ್ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ಮೋದಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬಾಂಗ್ಲಾ ಪ್ರಯಾಣಕ್ಕೂ ಮುನ್ನ ಉಭಯ ದೇಶಗಳ ಸಂಬಂಧ ಕುರಿತು ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಮೋದಿ ಬಾಂಗ್ಲಾ ಭೇಟಿಗೆ ಇಸ್ಲಾಮಿಕ್‌ ಬೆದರಿಕೆ: ಆತಂಕ ಬೇಡವೆಂದ ಸರ್ಕಾರ

ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಆಹ್ವಾನದ ಮೇರೆಗೆ ಬಾಂಗ್ಲಾದೇಶಕ್ಕೆ ಮಾರ್ಚ್ 26, ಹಾಗೂ 27ರ ಎರಡು ದಿನ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಕೊರೋನಾ ವಕ್ಕರಿಸಿದ ಬಳಿಕ ಇದು ನನ್ನ ಮೊದಲ ವಿದೇಶಿ ಭೇಟಟಿಯಾಗಿದೆ. ಈ ಭೇಟಿ ನೆರೆ ರಾಷ್ಟ್ರದ ಜೊತಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಭಾರತ ಹಾಗೂ ಬಾಂಗ್ಲಾ  ಸಾಂಸ್ಕೃತಿಕ, ಭಾಷೆಯೊಂದಿಗೆ ಬೆಸದು ಹೋಗಿದೆ. ಜೊತೆಗೆ ಉಭಯ ದೇಶಗಳ ಜನರು ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಮೋದಿ ಪ್ರಯಾಣಕ್ಕೂ ಮುನ್ನದ ಪ್ರಕಟಣೆಯಲ್ಲಿ ಹೇಳಿದ್ದಾರೆ.  

ಬಾಂಗ್ಲಾದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ. ಇದು ಬಾಂಗ್ಲಾದೇಶ ರಾಷ್ಟ್ರ ಪಿತಾಮಹ ಬಂಗಬಂಧು ಶೇಕ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿದೆ. ಕಳೆದ ಶತಮಾನ ಕಂಡ ಅತ್ಯಂತ ಶ್ರೇಷ್ಠ ನಾಯಕಾರಿಗಿ ಗುರುತಿಸಿಕೊಂಡಿದ್ದಾರೆ. ಮುಜಿಬುರ್ ಅವರ ಜೀವನ ಮತ್ತು ಆದರ್ಶ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ. 2 ದಿನ ಬಾಂಗ್ಲಾ ಪ್ರವಾಸದಲ್ಲಿ  ರೆಹಮಾನ್ ಸಮಾಧಿಗೆ ಭೇಟಿ ನೀಡಲಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಕೊರೋನಾ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ

ಇದೇ ವೇಳೆ ಬಾಂಗ್ಲಾದೇಶದ ಪ್ರಾಚೀನ ಜಶೋರೇಶ್ವರಿ ಕಾಳಿ ದೇವಾಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದೇನೆ.  ಪುರಾಣ ಸಂಪ್ರದಾಯದ 51 ಶಕ್ತಿಪೀಠಗಳಲ್ಲಿ ಈ ಜಶೋರೇಶ್ವರಿ ಕಾಳಿ ದೇವಸ್ಥಾನ ಒಂದಿಗಾದೆ ಎಂದು ಮೋದಿ ಹೇಳಿದ್ದಾರೆ.

ದೇವಸ್ಥಾನ ಭೇಟಿ ಬಳಿಕ ಒರಾಕಂಡಿಯಲ್ಲಿರುವ ಮಾತುವಾ ಸಮುದಾಯದ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಾಂಗ್ಲಾ ಪ್ರಧಾನಿ ಜೊತೆ ವರ್ಚುವಲ್ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದ್ದೇನೆ. ಇದೀಗ ಈ ಭೇಟಿಯಲ್ಲಿ ಮಹತ್ವದ ಮಾತುಕತೆಯನ್ನು ಎದುರುನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಈ ಭೇಟಿ ಕೇವಲ ಬಾಂಗ್ಲಾದೇಶದ ಆರ್ಥಿಕ ಹಾಗೂ ದೇಶದ ಸಮಗ್ರ ಅಭಿವೃದ್ಧಿ ಕುರಿತು ಶುಭಾಶಯ ಹೇಳುವುದು ಮಾತ್ರವಲ್ಲ, ಜೊತೆಗೆ ಬಾಂಗ್ಲಾದೇಶದ ಸಾಧನೆಗೆ ಭಾರತದ ಬೆಂಬಲ ನಿರಂತರವಾಗಿರಲಿದೆ . ಜೊತೆಗೆ ಕೊರೋನಾ ವಿರುದ್ಧಧ ಹೋರಾಟಕ್ಕೆ ಒಗ್ಗಟ್ಟಾಗಿ ಹೋರಾಡುವ ಭರವಸೆಯನ್ನು ನೀಡಲಿದ್ದೇನೆ ಎಂದು ಮೋದಿ ಹೇಳಿದ್ದಾರೆ.

Follow Us:
Download App:
  • android
  • ios