ಮೋದಿ 2 ದಿನ ಬಾಂಗ್ಲಾ ಪ್ರವಾಸ: ಕೋವಿಡ್ ಬಳಿಕ ಮೊದಲ ವಿದೇಶ ಭೇಟಿ!
ಕೋವಿಡ್ ಸಾಂಕ್ರಾಮಿಕದ ಬಳಿಕ ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸ| ಮೋದಿ 2 ದಿನ ಬಾಂಗ್ಲಾ ಪ್ರವಾಸ| ದೇಶದ ಸಂಸ್ಥಾಪನಾ ದಿನಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮ
ನವದೆಹಲಿ(ಮಾ.26): ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಭೇಟಿಗಾಗಿ ಶುಕ್ರವಾರ ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ. ಇದು ಕೋವಿಡ್ ಸಾಂಕ್ರಾಮಿಕದ ಬಳಿಕ ಅವರು ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸವಾಗಿದೆ. ಈ ಕುರಿತು ಗುರುವಾರ ಹೇಳಿಕೆಯೊಂದನ್ನು ನೀಡಿರುವ ಮೋದಿ, ‘ಕೋವಿಡ್ ಸಾಂಕ್ರಾಮಿಕದ ನಂತರ ನನ್ನ ಮೊದಲ ವಿದೇಶ ಭೇಟಿಯು ಸಾಂಸ್ಕೃತಿಕವಾಗಿ ಮತ್ತು ಭಾಷೆಯ ಮೂಲಕ ಪರಸ್ಪರ ನಂಟು ಹೊಂದಿರುವ ನೆರೆಯ ದೇಶದ ಜೊತೆಗೆ ನಡೆಯುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ’ ಎಂದು ಹೇಳಿದ್ದಾರೆ.
'ನೀವೇ ನಿಜವಾದ ಆಸ್ತಿ' ಕಾರ್ಯಕರ್ತನ ಪಾದ ಮುಟ್ಟಿ ನಮಸ್ಕರಿಸಿದ ಮೋದಿ!
ದೇಶದ ಸಂಸ್ಥಾಪನಾ ದಿನಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮ ಮತ್ತು ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಈ ಭೇಟಿ ಹಲವು ಒಪ್ಪಂದಗಳಿಗೂ ಉಭಯ ದೇಶಗಳು ಸಹಿಹಾಕಲಿವೆ.
ನೆರೆ ರಾಷ್ಟ್ರದ ಜೊತೆ ಸಂಬಂಧ ಮತ್ತಷ್ಟು ಗಟ್ಟಿ; ಬಾಂಗ್ಲಾ ಪ್ರಯಾಣಕ್ಕೂ ಮುನ್ನ ಮೋದಿ ಮಾತು!
ಅಲ್ಲದೆ ಸಾಂಸ್ಕೃತಿಕ, ಧಾರ್ಮಿಕವಾಗಿ ಪ್ರಸಿದ್ಧಿ ಪಡೆದಿರುವ ಹಲವು ಪ್ರದೇಶಗಳಿಗೂ ಮೋದಿ ಭೇಟಿ ನೀಡಲಿದ್ದಾರೆ.