ಕೋಲ್ಕತ್ತಾ( ಮಾ. 25)  ನಮಸ್ಕಾರಕ್ಕೆ ಪ್ರತಿ ನಮಸ್ಕಾರ ನೀಡುವುದು ಭಾರತೀಯ ಸಂಪ್ರದಾಯ.  ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ನಡೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಧಾನಿ ಮೋದಿ ಇದ್ದ ವೇದಿಕೆಗೆ ಆಗಮಿಸಿದ ಕಾರ್ಯಕರ್ತರು ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಲು ಯತ್ನಿಸಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ ಕಾರ್ಯಕರ್ತರನ್ನು ತಡೆದು,  ತಾವೇ ಕಾರ್ಯಕರ್ತರ  ಪಾದದೆಡೆಗೆ ಎರಗಿ ಪ್ರತಿ  ವಂದನೆ ಸಲ್ಲಿಸಿದ್ದಾರೆ.

ಬಾಂಗ್ಲಾ ಪ್ರವಾಸಕ್ಕೂ ಮುನ್ನ ಮೋದಿ ಹೇಳಿದ ಮಾತುಗಳು

ಬಿಜೆಪಿ ಈ ವಿಡಿಯೋವನ್ನು ಟ್ವಿಟ್ ಮಾಡಿದೆ. ಕ್ಷಣಮಾತ್ರದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿ ಎಂದು ಕಮೆಂಟ್ ಗಳು  ಹರಿದು ಬಂದಿವೆ.

ಮೇ  2 ರ ಫಲಿತಾಂಶದ ನಂತರ ಪಶ್ಚಿಮ ಬಂಗಾಳದಲ್ಲಿ ನಿಜವಾದ ಅಭಿವೃದ್ಧಿ ಆರಂಭವಾಗಲಿದೆ. ಬದಲಾವಣೆಗೆ ರಾಜ್ಯ ತೆರೆದುಕೊಳ್ಳಲಿದೆ ಎಂದು ಮೋದಿ ಹೇಳಿದರು.