Asianet Suvarna News Asianet Suvarna News

2.6 ಕೋಟಿ ಹೆಕ್ಟೇರ್‌ ಬಂಜರು ಭೂಮಿ ಅಭಿವೃದ್ಧಿ ಗುರಿ: ಪ್ರಧಾನಿ ಮೋದಿ

* 2030ಕ್ಕೆ 2.6 ಕೋಟಿ ಹೆಕ್ಟೇರ್‌ ಬಂಜರು ಭೂಮಿ ಫಲವತ್ತತೆ

* ಕಳೆದ 10 ವರ್ಷ​ಗ​ಳಲ್ಲಿ 30 ಲಕ್ಷ ಹೆಕ್ಟೇರ್‌ ಅರಣ್ಯ ಪ್ರದೇ​ಶ​ವನ್ನು ವೃದ್ಧಿ​ಸ​ಲಾ​ಗಿದೆ

* ಮರು​ಭೂಮಿ, ಭೂಮಿಯ ಉತ್ಕೃ​ಷ್ಟ​ತೆಯ ವಿನಾ​ಶ ಮತ್ತು ಬರದ ಕುರಿ​ತಾಗಿ ವಿಶ್ವ​ಸಂಸ್ಥೆಯಲಲ್ಲಿ ಮೋದಿ ಮಾತು

India Plans To Restore 2 6 Crore Hectares Of Degraded Land By 2030 PM Modi pod
Author
Bangalore, First Published Jun 15, 2021, 7:55 AM IST

ನವ​ದೆ​ಹ​ಲಿ(ಜೂ.15): 2030ರ ಒಳ​ಗಾಗಿ ಫಲ​ವ​ತ್ತತೆ ಕಳೆ​ದು​ಕೊಂಡಿ​ರುವ 2.6 ಕೋಟಿ ಹೆಕ್ಟೇರ್‌ ಬಂಜರು ಪ್ರದೇ​ಶ​ವನ್ನು ಪುನಃ ಫಲ​ವ​ತ್ತ​ತೆಯ ಭೂಮಿ​ಯ​ನ್ನಾಗಿ ಪರಿ​ವ​ರ್ತಿ​ಸುವ ನಿಟ್ಟಿ​ನಲ್ಲಿ ಭಾರತ ಕಾರ್ಯ ನಿರ್ವ​ಹಿ​ಸ​ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿ​ದ್ದಾರೆ. ಜೊತೆಗೆ ಕಳೆದ 10 ವರ್ಷ​ಗ​ಳಲ್ಲಿ 30 ಲಕ್ಷ ಹೆಕ್ಟೇರ್‌ ಅರಣ್ಯ ಪ್ರದೇ​ಶ​ವನ್ನು ವೃದ್ಧಿ​ಸ​ಲಾ​ಗಿದೆ ಎಂದಿ​ದ್ದಾ​ರೆ.

12 ವರ್ಷಗಳ ಬಳಿಕ ಹೊಸ ಸರ್ಕಾರ; ಮೋದಿ ಜೊತೆ ಕೆಲಸ ಮಾಡಲು ಉತ್ಸುಕ ಎಂದ ಇಸ್ರೇಲ್ ನೂತನ ಪ್ರಧಾನಿ!

ಮರು​ಭೂಮಿ, ಭೂಮಿಯ ಉತ್ಕೃ​ಷ್ಟ​ತೆಯ ವಿನಾ​ಶ ಮತ್ತು ಬರದ ಕುರಿ​ತಾಗಿ ವಿಶ್ವ​ಸಂಸ್ಥೆಯ ಉನ್ನತ ಹಂತದ ಸಭೆ​ಯ​ನ್ನು​ದ್ದೇಶಿಸಿ ಸೋಮ​ವಾರ ಮಾತ​ನಾ​ಡಿದ ಮೋದಿ ಅವರು, ಅಭಿ​ವೃ​ದ್ಧಿ​ಪ​ಥ​ದ​ಲ್ಲಿ​ರುವ ರಾಷ್ಟ್ರ​ಗ​ಳಿಗೆ ಭೂಮಿಯ ಫಲ​ವ​ತ್ತ​ತೆ ಪುನಃ​ಸ್ಥಾ​ಪಿ​ಸಲು ಇರುವ ಮಾರ್ಗೋ​ಪಾ​ಯ​ಗಳ ಬಗ್ಗೆ ನೆರವು ನೀಡ​ಲಾ​ಗು​ತ್ತದೆ ಎಂದರು.

ಮೋದಿ, ಶಾ ಕೋಟೆಗೆ ಕೇಜ್ರೀ ಲಗ್ಗೆ: ಮಹತ್ವದ ಘೋಷಣೆ ಮಾಡಿದ AAP!

ವಿಶ್ವ​ದಲ್ಲಿ ಇಂದು ಒಟ್ಟಾರೆ 3ನೇ ಎರ​ಡ​ರಷ್ಟುಭೂಮಿ ಫಲ​ವ​ತ್ತತೆ ಕುಂದಿದೆ. ಹೀಗಾಗಿ ಭೂಮಿಯ ಸವ​ಕ​ಳಿ​ಯನ್ನು ನಿಯಂತ್ರಿ​ಸದೇ ಹೋದಲ್ಲಿ ನಮ್ಮ ಸಮಾ​ಜ​ಗಳು, ಆರ್ಥಿ​ಕತೆ, ಆಹಾರ ಭದ್ರತೆ, ಆರೋಗ್ಯ, ಸುರ​ಕ್ಷತೆ ಮತ್ತು ಜೀವ​ನದ ಉತ್ಕೃ​ಷ್ಟತೆಯನ್ನು ನಾಶ​ಪ​ಡಿ​ಸ​ಲಿದೆ. ಹೀಗಾಗಿ ಭೂಮಿ ಮತ್ತು ಅದರ ಸಂಪ​ನ್ಮೂ​ಲ​ಗಳ ಮೇಲಿನ ಒತ್ತಡ ಮತ್ತು ಅವ​ಲ​ನಂಬ​ನೆ​ ತಗ್ಗಿ​ಸ​ಬೇಕು. ಇದ​ಕ್ಕಾಗಿ ನಾವು ಹೆಚ್ಚಿನ ಶ್ರಮ ಪಡ​ಬೇ​ಕಿದೆ. ನಾವೆಲ್ಲಾ ಒಂದಾ​ದರೆ ಭೂಮಿಯ ಉತ್ಕೃ​ಷ್ಟತೆಯನ್ನು ಕಾಪಾ​ಡ​ಬ​ಹುದು ಎಂದು ಅವರು ಪ್ರತಿ​ಪಾ​ದಿ​ಸಿ​ದರು.

Follow Us:
Download App:
  • android
  • ios