Asianet Suvarna News Asianet Suvarna News

12 ವರ್ಷಗಳ ಬಳಿಕ ಹೊಸ ಸರ್ಕಾರ; ಮೋದಿ ಜೊತೆ ಕೆಲಸ ಮಾಡಲು ಉತ್ಸುಕ ಎಂದ ಇಸ್ರೇಲ್ ನೂತನ ಪ್ರಧಾನಿ!

  • ಇಸ್ರೇಲ್ ನೂತನ ಪ್ರಧಾನಿಯಾಗಿ ನೆಫ್ಟಾಲಿ ಬೆನೆಟ್ ಅಧಿಕಾರ ಸ್ವೀಕಾರ
  • ಬೆನೆಟ್‌‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ 
  • ಮೋದಿ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದ ಬೆನೆಟ್
Looking forward to work with Pm Modi and India Israel newly elected Prime Minister Naftali Bennett ckm
Author
Bengaluru, First Published Jun 14, 2021, 5:54 PM IST

ನವದೆಹಲಿ(ಜೂ.14): ಪ್ಯಾಲಿಸ್ಟೈನ್ ಜೊತೆಗಿನ ಯುದ್ಧ, ಬಾಂಬ್, ಮಿಸೈಲ್ ಶಬ್ಧಗಳಿಂದ ವಿಶ್ವದಲ್ಲಿ ಭಾರಿ ಸದ್ದು ಮಾಡಿದ್ದ ಇಸ್ರೇಲ್‌ನಲ್ಲೀಗ ಹೊಸ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬಂದಿದೆ. 12 ವರ್ಷಗಳ ಬೆಂಜಮಿನ್ ನೇತನ್ಯಾಹು ಅಧಿಕಾರ ಅಂತ್ಯಗೊಂಡಿದೆ. ನೂತನ ಪ್ರಧಾನಿಯಾಗಿ ನೆಫ್ಟಾಲಿ ಬೆನೆಟ್ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಧಾನಿಯಾದ ಬೆನ್ನಲ್ಲೇ ಬೆನೆಟ್, ಪ್ರಧಾನಿ ಮೋದಿ ಜೊತೆ ಕೆಲಸ ಮಾಡಲು, ಭಾರತದ ಜೊತೆ ಉತ್ತಮ ಸಂಬಂಧ ಮುಂದುವರಿಸಲು ಉತ್ಸುಕನಾಗಿರುವುದಾಗಿ ಹೇಳಿದ್ದಾರೆ.

ಘನಘೋರ 11 ದಿನಗಳ ಇಸ್ರೇಲ್-ಹಮಾಸ್ ಕದನ ಅಂತ್ಯ; ಆತಂಕ ತಂದ ಉಗ್ರರ ಹೇಳಿಕೆ!

ನೆಫ್ಟಾಲಿ ಬೆನೆಟ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದರು.  ಇಸ್ರೇಲ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ನೆಫ್ಟಾಲಿ ಬೆನೆಟ್‌ಗೆ ಅಭಿನಂದನೆಗಳು. ಮುಂದಿನ ವರ್ಷ ಭಾರತ ಹಾಗೂ ಇಸ್ರೇಲ್ ನಡವಿನ ಡಿಪ್ಲೋಮ್ಯಾಟಿಕ್ ರಿಲೇಶನ್‌ಶಿಪ್‌ಗೆ 30 ವರ್ಷ ತುಂಬುತ್ತಿದೆ. 3 ದಶಕಗಳ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಿಮ್ಮನ್ನು ಭೇಟಿಯಾಗಲು ಕಾಯುತ್ತಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಇತ್ತ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ನೆಫ್ಟಾಲಿ, ಭಾರತ ಹಾಗೂ ಪ್ರಧಾನಿ ಮೋದಿ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಮೋದಿಗೆ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಬೆನೆಟ್, ಪ್ರಜಾಪ್ರಭುತ್ವ ರಾಷ್ಟ್ರಗಳ ಸಂಬಂಧ ಮತ್ತಷ್ಟು ಉತ್ತಮ ಹಾಗೂ ಗಟ್ಟಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. 

ಸ್ನೇಹಿತರ ಸಹಾಯಕ್ಕೆ ಬದ್ಧ, ಇಸ್ರೇಲ್, ಬ್ರೇಜಿಲ್‌ಗೆ ಮೋದಿ ಅಭಯ

ಭಾರತ ಹಾಗೂ ಇಸ್ರೇಲ್ ನಡುವಿನ ಕಾರ್ಯತಂತ್ರವನ್ನು, ಸಂಬಂಧವವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಿದ್ದ. ಶೀಘ್ರದಲ್ಲೇ ನಿಮ್ಮನ್ನು ಇಸ್ರೇಲ್‌ಗೆ ಸ್ವಾಗತಿಸಲಿದ್ದೇವೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಯ್ಯರ್ ಲ್ಯಾಪಿಡ್, ಭಾರತದ ವಿದೇಶಾಂಗ ಸಚಿವ ಜೈಶಂಕರ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಬೆನೆಟ್ ಇಸ್ರೇಲ್‌ನ 13ನೇ ಪ್ರಧಾನಿಯಾಗಿದ್ದಾರೆ. ಈ ಹಿಂದಿನ ಇಸ್ರೇಲ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಬೆನೆಟ್, ಯಾಮಿನಾ ಪಾರ್ಟಿ ನಾಯಕರಾಗಿದ್ದಾರೆ. ಯಾಮಿನಾ ಪಾರ್ಟಿ ಬಲಪಂಥ ಸಿದ್ದಾಂತ ಹೊಂದಿದೆ.

Follow Us:
Download App:
  • android
  • ios