ಅಮೆರಿಕದ ಜೊತೆ ವ್ಯಾಪಾರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದರು. 

MEA ಪತ್ರಿಕಾಗೋಷ್ಠಿ: ಅಮೆರಿಕದ ಹೇಳಿಕೆಗಳಿಗೆ ತದ್ವಿರುದ್ಧವಾಗಿ, ಮಂಗಳವಾರ ಭಾರತದ ವಿದೇಶಾಂಗ ಸಚಿವಾಲಯವು ಕದನ ವಿರಾಮದ ಮಾತುಕತೆಗಳು ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿದ ನಂತರ ಪ್ರಾರಂಭವಾಯಿತು ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನದಿಂದ ಮಾತುಕತೆಗೆ ವಿನಂತಿ ಬಂದಿತ್ತು. ಅಮೆರಿಕದ ಜೊತೆ ವ್ಯಾಪಾರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದರು.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 'ಕಾಶ್ಮೀರದಲ್ಲಿ ಯಾರ ಮಧ್ಯಸ್ಥಿಕೆಯನ್ನೂ ಭಾರತ ಸ್ವೀಕರಿಸುವುದಿಲ್ಲ. ಕದನ ವಿರಾಮದ ಕುರಿತು ಟ್ರಂಪ್‌ಗೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ಸಚಿವಾಲಯ, ಜಮ್ಮು ಮತ್ತು ಕಾಶ್ಮೀರ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಯ ಮಾತ್ರ ಮತ್ತು ಈಗ ಸಮಸ್ಯೆ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಯನ್ನು ಖಾಲಿ ಮಾಡುವುದು ಮಾತ್ರ ಎಂದು ಹೇಳಿದೆ. 

ಮೇ 10 ರಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವಿನ ಮಾತುಕತೆಯ ನಂತರ ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಯಿತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಮೇ 10ರಂದೇ ಕದನ ವಿರಾಮದ ಕುರಿತು ಚರ್ಚೆ ನಡೆಯಬೇಕೆಂದು ಪಾಕ್ ಮನವಿ ಮಾಡಿಕೊಂಡಿತ್ತು. ವಾಯುಪಡೆಯು ಪಾಕಿಸ್ತಾನದ ಪ್ರಮುಖ ವಾಯುಪಡೆಯ ನೆಲೆಗಳ ಮೇಲೆ ಭಾರೀ ದಾಳಿ ನಡೆಸಿದ್ದರಿಂದ, ಪಾಕಿಸ್ತಾನ ಹೆದರಿತ್ತು. ಪಾಕಿಸ್ತಾನವು ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಭಾರತೀಯ ಸೇನೆಯ ಬಲವೇ ಕಾರಣ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತದ ನಿಲುವು ಸ್ಪಷ್ಟ ಮತ್ತು ದೃಢವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ವಿಷಯವು ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಯವಾಗಿದೆ. ಭಾರತದ ಈ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು (ಪಿಒಕೆ) ಖಾಲಿ ಮಾಡಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

ಪಾಕಿಸ್ತಾನಿ ಸೇನೆ ಗುಂಡು ಹಾರಿಸಿದರೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತದೆ. ಪಾಕಿಸ್ತಾನ ದಾಳಿ ಮಾಡದಿದ್ದರೆ, ಭಾರತ ಕೂಡ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ. ಆಪರೇಷನ್ ಸಿಂಧೂರ್ ಆರಂಭವಾದಾಗ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು ಆದರೆ ಅವರು ಅದನ್ನು ನಿರ್ಲಕ್ಷಿಸಿದರು ಎಂದು ರಣಧೀರ್ ಜೈಸ್ವಾಲ್ ಹೇಳಿದರು

Scroll to load tweet…
Scroll to load tweet…