Asianet Suvarna News Asianet Suvarna News

ಡಾಲರ್ ಗೆ ಯುವಾನ್ ಟಕ್ಕರ್; ಚೀನಾಕ್ಕೆ ಕಚ್ಚಾ ತೈಲ ಡಾಲರ್ ಬದಲು ಯುವಾನ್ ನಲ್ಲಿ ಮಾರಾಟಕ್ಕೆ ಸೌದಿ ಸಿದ್ಧತೆ!

*6 ವರ್ಷಕ್ಕಿಂತಲೂ ಅಧಿಕ ಸಮಯದಿಂದ ಯುವಾನ್ ನಲ್ಲಿ ವಹಿವಾಟು ನಡೆಸೋ ಬಗ್ಗೆ ಮಾತುಕತೆ
*ಅಮೆರಿಕದ ಮೇಲಿನ ಅಸಮಾಧಾನವನ್ನು ಬಹಿರಂಗಪಡಿಸಲು ಮುಂದಾದ ಸೌದಿ ಅರೇಬಿಯಾ
*ಇತ್ತೀಚಿನ ದಿನಗಳಲ್ಲಿ ಪ್ರಬಲಗೊಳ್ಳುತ್ತಿರುವ ಚೀನಾ ಹಾಗೂ ಸೌದಿ ಅರೇಬಿಯಾದ ವ್ಯಾಪಾರ ಸಂಬಂಧ
*ತೈಲ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಗೆ ಮೈಲಿಗಲ್ಲು

Saudi Arabia considers accepting Yuan instead of dollars for Chinese oil sales report says
Author
Bangalore, First Published Mar 16, 2022, 2:07 PM IST

ರಿಯಾದ್ (ಮಾ.16): ಜಗತ್ತಿನ ಅತೀದೊಡ್ಡ ಕಚ್ಚಾ ತೈಲ (Crude oil) ರಫ್ತು ರಾಷ್ಟ್ರ ಸೌದಿ ಅರೇಬಿಯಾ (Saudi Arabia) ಅಮೆರಿಕದ (US)ಮೇಲಿನ  ಅಸಮಾಧಾನವನ್ನು ಈಗ ಬಹಿರಂಗವಾಗಿ ವ್ಯಕ್ತಪಡಿಸಲು ಮುಂದಾಗಿದೆ. ಚೀನಾಕ್ಕೆ (Chinna) ಕಚ್ಚಾ ತೈಲವನ್ನು ಅಮೆರಿಕನ್ ಡಾಲರ್ (Dollar) ಬದಲು ಯುವಾನ್ (Yuan) ಬೆಲೆಯಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸೌದಿ ಅರೇಬಿಯಾ ಈಗಾಗಲೇ ಚೀನಾದೊಂದಿಗೆ ಮಾತುಕತೆಯಲ್ಲಿ ನಿರತವಾಗಿದೆ ಎಂದು ಮೂಲಗಳು ತಿಳಿಸಿವೆ. ಸೌದಿ ಅರೇಬಿಯಾದ ಈ ನಡೆ ಮುಂದಿನ ದಿನಗಳಲ್ಲಿ ಜಾಗತಿಕ ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಪ್ರಾಬಲ್ಯಕ್ಕೆ ಹೊಡೆತ ನೀಡೋ ಎಲ್ಲ ಸಾಧ್ಯತೆಗಳಿವೆ.

ಕಚ್ಚಾ ತೈಲವನ್ನು ಯುವಾನ್ ಮೌಲ್ಯದಲ್ಲಿ ಮಾರಾಟ ಮಾಡೋ ಬಗ್ಗೆ ಸೌದಿ ಅರೇಬಿಯಾ ಕಳೆದ ಆರು ವರ್ಷಗಳಿಂದ ಚೀನಾದೊಂದಿಗೆ ಮಾತುಕತೆಯಲ್ಲಿ ನಿರತವಾಗಿದೆ. ಆದ್ರೆ ಕಳೆದ ಒಂದು ವರ್ಷದಿಂದ ಈ ಮಾತುಕತೆ ಹೆಚ್ಚಿನ ವೇಗ ಪಡೆದುಕೊಂಡಿದೆ. ಇದಕ್ಕೆ ಕಾರಣ ಅಮೆರಿಕದಿಂದ ತನ್ನ ರಾಷ್ಟ್ರದ ಭದ್ರತೆಗೆ ಧಕ್ಕೆಯಾಗಬಹುದೆಂದು  ಸೌದಿ ಅರೇಬಿಯಾಕ್ಕೆ ಇರೋ ಭಯ.  2016ರಿಂದಲೂ ಚೀನಾಕ್ಕೆ ಕಚ್ಚಾ ತೈಲ ಮಾರಾಟಕ್ಕೆ ಡಾಲರ್ ಬದಲು ಯುವಾನ್ ಸ್ವೀಕರಿಸಲು ಉಭಯ ರಾಷ್ಟ್ರಗಳು ಮಾತುಕತೆಯಲ್ಲಿ ತೊಡಗಿವೆ. 

ಕಚ್ಚಾತೈಲ ದರ 140 ಡಾಲರ್‌ನಿಂದ 99.84 ಡಾಲರ್‌ಗೆ ಭಾರೀ ಇಳಿಕೆ!

ಇರಾನ್ (Iran) ಜೊತೆಗಿನ ಅಮೆರಿಕದ (America) 2015ರ ಪರಮಾಣು ಒಪ್ಪಂದವನ್ನು ಪುನಶ್ಚೇತನಗೊಳಿಸಲು ಬಿಡೆನ್ (Biden) ನೇತೃತ್ವದ ಸರ್ಕಾರ ಸಕ್ರಿಯವಾಗಿದ್ದು, ಈ ಸಂಬಂಧ ಮಾತುಕತೆ ಕೊನೆಯ ಹಂತದಲ್ಲಿದೆ. ಈ ಒಪ್ಪಂದವನ್ನು ಸೌದಿ ಅರೇಬಿಯಾ ಈ ಹಿಂದೆಯೇ ಖಂಡಿಸಿತ್ತು. ಅಲ್ಲದೆ, 2018ರಲ್ಲಿ ಟ್ರಂಪ್ (Trump) ಸರ್ಕಾರ ಈ ಒಪ್ಪಂದದಿಂದ ಹಿಂದೆ ಸರಿಯೋ ನಿರ್ಧಾರ ಕೈಗೊಂಡಾಗ ಅದನ್ನು ಬೆಂಬಲಿಸಿತ್ತು ಕೂಡ. ಈ ಸಂದರ್ಭದಲ್ಲಿಇರಾನ್ ಮೇಲೆ  ಅಮೆರಿಕ ನಿರ್ಬಂಧಗಳನ್ನು ಕೂಡ ವಿಧಿಸಿತ್ತು. 

ಪ್ರಸಕ್ತ ಸನ್ನಿವೇಶದಲ್ಲಿ ಸೌದಿ ಅರೇಬಿಯಾಕ್ಕೆ ಅಮೆರಿಕದ ಮೇಲಿನ ನಂಬಿಕೆ ಹೊರಟು ಹೋಗಿದೆ. ಇದಕ್ಕೆ ಕಾರಣ ಇತ್ತೀಚಿನ ಕೆಲವು ಬೆಳವಣಿಗೆಗಳು. ಈ ಪ್ರಾಂತ್ಯದಲ್ಲಿರೋ ಇತರ ರಾಷ್ಟ್ರಗಳಂತೆ ಸೌದಿ ಅರೇಬಿಯಾ ಕೂಡ ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ಹಿಂತೆಗೆದುಕೊಂಡ ಬಗ್ಗೆ ಅಸಮಾಧಾನಗೊಂಡಿದೆ. ಹಾಗೆಯೇ ಜಗತ್ತಿನ ಬಲಾಢ್ಯ ರಾಷ್ಟ್ರವೆಂಬ ತನ್ನ ಸ್ಥಾನಕ್ಕೆ ಚೀನಾ (China) ಹಾಗೂ ರಷ್ಯಾ (Russia) ಕುತ್ತು ತರಬಹುದೆಂಬ ಕಾರಣಕ್ಕೆ ಆ ಎರಡು ರಾಷ್ಟ್ರಗಳ ಮೇಲೆ ವೈರತ್ವ ಸಾಧಿಸುತ್ತಿರೋದು ಕೂಡ ಸೌದಿ ಅರೇಬಿಯಾಕ್ಕೆ ಅಮೆರಿಕದ ಮೇಲಿನ ನಂಬಿಕೆ ತಗ್ಗುವಂತೆ ಮಾಡಿದೆ. ಇಷ್ಟೇ ಅಲ್ಲ,ಇನ್ನೂ ಇಂಥ ಅನೇಕ ಸಂಗತಿಗಳು ಅಮೆರಿಕದೊಂದಿಗಿನ ಸೌದಿ ಅರೇಬಿಯಾದ ಸಂಬಂಧದ ಮೇಲೆ ಪರಿಣಾಮ ಬೀರಿದೆ. ಸೌದಿ ತೈಲ ಸೌಲಭ್ಯಗಳ ಮೇಲೆ 2019ರಲ್ಲಿ ಸಾಮೂಹಿಕ ದಾಳಿ ನಡೆದಾಗ ಟ್ರಂಪ್ ಆಡಳಿತ ಇದಕ್ಕೆ ಸ್ಪಂದಿಸಲು ನಿರಾಕರಿಸಿತ್ತು. ಇನ್ನು ಜೋ ಬಿಡೆನ್ ಅಮೆರಿಕದ ಅಧ್ಯಕ್ಷರಾದ ಬಳಿಕ ಉಭಯ ರಾಷ್ಟ್ರಗಳ ಒಪ್ಪಂದಗಳು ಸಾಕಷ್ಟು ಹೊಡೆತ ಕಂಡಿರೋ ಜೊತೆಗೆ ತಳಮಟ್ಟ ತಲುಪಿವೆ.

ಸೌದಿ-ಚೀನಾ ಒಪ್ಪಂದಗಳು
ಸೌದಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಮೆರಿಕದ ಬದಲಿಗೆ ತಾನು ಭದ್ರತೆಯ ಭರವಸೆ ನೀಡೋ ರಾಷ್ಟ್ರವಾಗಬೇಕು ಎಂಬ ಬಯಕೆ ಚೀನಾಕ್ಕಿಲ್ಲ ಎಂಬುದು ಅನೇಕ ತಜ್ಞರ ಅಭಿಪ್ರಾಯವಾಗಿದೆ. ಆದ್ರೆ ಈ ನಡುವೆ ಬೀಜಿಂಗ್ ಮತ್ತು ರಿಯಾದ್ ನಡುವಿನ ಆರ್ಥಿಕ ಒಪ್ಪಂದಗಳು ಮಾತ್ರ ಸಾಕಷ್ಟು ಬೆಳವಣಿಗೆಯಾಗಿವೆ. ಇದಕ್ಕೆ ಮುಖ್ಯಕಾರಣ ಸೌದಿಯ ಶೇ.25ರಷ್ಟು ತೈಲವನ್ನು ಚೀನಾ ಖರೀದಿಸುತ್ತಿರೋದು.

Vision of Karnataka: 2025ಕ್ಕೆ ಕರ್ನಟಕದ ಆರ್ಥಿಕತೆ 75 ಲಕ್ಷ ಕೋಟಿ: ಸಿಎಂ ಬೊಮ್ಮಾಯಿ

ಚೀನಾದೊಂದಿಗೆ ಯುವಾನ್ ಲೆಕ್ಕದಲ್ಲಿ ಸೌದಿ ಅರೇಬಿಯಾ ತೈಲ ವಹಿವಾಟು ನಡೆಸೋದು ತೈಲ ಮಾರುಕಟ್ಟೆಯಲ್ಲಿ ನಿರ್ಣಾಯಕ ಬದಲಾವಣೆಗೆ ಕಾರಣವಾಗೋ ಸಾಧ್ಯತೆಯಿದೆ. ಪ್ರಸ್ತುತ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಶೇ.80ರಷ್ಟು ಮಾರಾಟ ಡಾಲರ್ ನಲ್ಲೇ ನಡೆಯುತ್ತಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಚೀನಾ ಜಗತ್ತಿನ ಇನ್ನಷ್ಟು ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ತನ್ನ ಕರೆನ್ಸಿ ಬಳಸುವಂತೆ ಮನವೊಲಿಸೋ ಕಾರ್ಯಕ್ಕೆ ಮತ್ತಷ್ಟು ಇಂಬು ನೀಡೋ ಸಾಧ್ಯತೆಯಿದೆ. ದ್ವಿತೀಯ ಮಹಾಯುದ್ಧದ ಬಳಿಕ ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಅಮೆರಿಕದ ಡಾಲರ್ ಪ್ರಭುತ್ವ ಸಾಧಿಸಿತ್ತು. ಡಾಲರ್ ನ ಈ ಪ್ರಭುತ್ವದ ಕಾರಣಕ್ಕೇ ಅಮೆರಿಕ, ರಷ್ಯಾ ಹಾಗೂ ಇರಾನ್ ರಾಷ್ಟ್ರಗಳ ಮೇಲೆ ಪ್ರಬಲ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಾಗಿದೆ. 
 

Follow Us:
Download App:
  • android
  • ios