10:33 PM (IST) Aug 07

India News Live 7th August: 70 ವರ್ಷಗಳಿಂದ ‘Old Monk’ ಇಷ್ಟು ಫೇಮಸ್ ಆಗಿದ್ದು ಹೇಗೆ? ಭಾರತದ ಐಕಾನಿಕ್ ರಮ್ ಕಥೆ ಗೊತ್ತಾ?

ಭಾರತದಲ್ಲಿ ರಮ್ ಎಂದಾಕ್ಷಣ ಅನೇಕರಿಗೆ ಮೊದಲು ನೆನಪಾಗುವ ಹೆಸರು ‘ಓಲ್ಡ್ ಮಾಂಕ್’. ಏಳು ದಶಕಗಳಿಗೂ ಹೆಚ್ಚು ಕಾಲ ಭಾರತೀಯರೊಂದಿಗೆ ಬೆಸೆದುಕೊಂಡಿರುವ ಈ ಡಾರ್ಕ್ ರಮ್, ಕೇವಲ ಮದ್ಯದ ಬ್ರ್ಯಾಂಡ್ ಆಗಿ ಉಳಿದಿಲ್ಲ.

Read Full Story
09:26 PM (IST) Aug 07

India News Live 7th August: ಎಲ್ಲಿಂದ ಎಲ್ಲಿಗೆ ಲಿಂಕ್? 'ಕೇಸರಿ ಬಣ್ಣ'ದ ಉಡುಪು ಧರಿಸಿದ್ದಕ್ಕೆ ವಿಚಿತ್ರ ಪ್ರಶ್ನೆ, 'ಕಣ್ಸನ್ನೆ' ಬೆಡಗಿಯ ಸಖತ್ ರಿಪ್ಲೈ ವೈರಲ್!

'ಪ್ರಿಯಾ ಅವರೇ, ನೀವು ಇಂದು ಕೇಸರಿ ಬಣ್ಣದ ಉಡುಪನ್ನೇ ಏಕೆ ಧರಿಸಿದ್ದೀರಿ? ಇದಕ್ಕೆ ಯಾವುದಾದರೂ ವಿಶೇಷ ಕಾರಣವಿದೆಯೇ? ಕೇರಳದಲ್ಲಿ ಸದ್ಯ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದೆ, ಅದಕ್ಕೇನಾ?' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ ಮರೆಯಲಾಗದ ಉತ್ತರ ಕೊಟ್ಟಿದ್ದಾರೆ, ನೋಡಿ..!

Read Full Story
07:34 PM (IST) Aug 07

India News Live 7th August: ಬೋಲ್ಡ್ ಇಮೇಜ್ ಮರೆತು ಸಿಲ್ಕ್ ಸ್ಮಿತಾ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಈ ನಿರ್ಮಾಪಕರಿಗಾಗಿ!

ಒಂದು ಕಾಲದಲ್ಲಿ ಸ್ಟಾರ್ ನಟಿಯರಿಗಿಂತ ಹೆಚ್ಚು ಜನಪ್ರಿಯತೆ ಗಳಿಸಿದ್ದ ನಟಿ ಸಿಲ್ಕ್ ಸ್ಮಿತಾ. ಆದರೆ ಬೋಲ್ಡ್ ಪಾತ್ರಗಳಿಗೆ ಸೀಮಿತವಾದ ಕಾರಣ ಅವರ ಹೆಸರು ಮರೆಯಾಯ್ತು. ಬರೀ ಬೋಲ್ಡ್ ಪಾತ್ರಗಳನ್ನೇ ಮಾಡುತ್ತಿದ್ದ ಈ ನಟಿಗೆ ರೇಷ್ಮೆ ಸೀರೆ ಉಡಿಸಿ, ವಿಭಿನ್ನ ಪಾತ್ರ ನೀಡಿದ ನಿರ್ಮಾಪಕ ಯಾರು ಗೊತ್ತಾ?

Read Full Story
07:09 PM (IST) Aug 07

India News Live 7th August: ‘ದಸರಾ’ಗಿಂತಲೂ ನಾನಿಯ ಈ ಲುಕ್ ಹಿಂದೆ ಇದೆ ಭಯಾನಕ ಕಥೆ - ‘ದಿ ಪ್ಯಾರಡೈಸ್’ ಟೀಸರ್‌ನಲ್ಲಿ ಏನಿದೆ?

ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಓದೆಲಾ ಕಾಂಬಿನೇಷನ್‌ನ ಪ್ಯಾನ್-ಇಂಡಿಯಾ ಸಿನಿಮಾ 'ದಿ ಪ್ಯಾರಡೈಸ್'. 'ದಸರಾ' ಬ್ಲಾಕ್‌ಬಸ್ಟರ್ ಹಿಟ್ ನಂತರ ಈ ತಂಡ ಮತ್ತೆ ಒಂದಾಗಿದೆ.

Read Full Story
06:28 PM (IST) Aug 07

India News Live 7th August: ಐಪಿಎಲ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಬೆನ್ನಲ್ಲೇ ಈ ತಂಡದ ಪರ ಆಡಲು ರೆಡಿಯಾದ ಅಜಿಂಕ್ಯ ರಹಾನೆ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಭಾರತದ ಮಾಜಿ ನಾಯಕ ಅಜಿಂಕ್ಯ ರಹಾನೆ ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅವರು ಸ್ಟೀವ್ ವಾ ಮತ್ತು ಅಭಿಷೇಕ್ ಬಚ್ಚನ್ ಸಹ-ಮಾಲೀಕತ್ವದ ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡವನ್ನು ಸೇರಿಕೊಂಡಿದ್ದು, ತಮ್ಮ ಅನುಭವದಿಂದ ತಂಡಕ್ಕೆ ಬಲ ತುಂಬಲಿದ್ದಾರೆ.
Read Full Story
06:02 PM (IST) Aug 07

India News Live 7th August: Tirumala Devotees - ತಿರುಮಲ ಕ್ಯೂಲೈನ್‌ನಲ್ಲಿ ಭಕ್ತರ ಕಷ್ಟಗಳಿಗೆ ಚೆಕ್‌ಮೇಟ್; ಇನ್ಮೇಲೆ ಕಾಯೋದಕ್ಕೆ ಬ್ರೇಕ್, ಶೀಘ್ರ ದರ್ಶನ!

ತಿರುಮಲದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿ ಕ್ಯೂ ಲೈನ್‌ನಲ್ಲಿ ಗಂಟೆಗಟ್ಟಲೇ ಕಾದು ನಿಲ್ಲುವ ಭಕ್ತರಿಗೆ ಸರಿಯಾದ ಸಮಯದಲ್ಲಿ ಅನ್ನಪ್ರಸಾದ ಪೂರೈಸುವ ಹೊಸ ವಿಧಾನವನ್ನು ಟಿಟಿಡಿ ಜಾರಿ ಮಾಡುತ್ತಿದೆ. ಪ್ರಯೋಗಾತ್ಮಕಾಗಿ ಈ ಯೋಜನೆ ಜಾರಿಯಾಗಿದ್ದು, ಭಕ್ತರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

Read Full Story
05:34 PM (IST) Aug 07

India News Live 7th August: ರಾಜಮೌಳಿ ಸೊಸೆ ಹಿನ್ನೆಲೆ ಗೊತ್ತಾ? ಖ್ಯಾತ ನಟ ಜಗಪತಿ ಬಾಬು ಜೊತೆಗಿರುವ ಸಂಬಂಧವೇನು?

ವಿಶ್ವವೇ ಮೆಚ್ಚಿದ ತೆಲುಗು ನಿರ್ದೇಶಕ ರಾಜಮೌಳಿ. ಅವರ ಕುಟುಂಬದ ಪ್ರತಿಯೊಬ್ಬರಿಗೂ ಸಿನಿಮಾದ ನಂಟಿದೆ. ಆದರೆ ರಾಜಮೌಳಿ ಮನೆಗೆ ಸೊಸೆಯಾಗಿ ಬಂದ ಪೂಜಾ ಪ್ರಸಾದ್ ಕೂಡ ದೊಡ್ಡ ಸಿನಿಮಾ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ ಎಂಬ ವಿಚಾರ ನಿಮಗೆ ಗೊತ್ತಾ?

Read Full Story
05:16 PM (IST) Aug 07

India News Live 7th August: ಇದು 'ರಾಜಾಹುಲಿ' ಸ್ಟೋರಿ.. 'ಟಾಕ್ಸಿಕ್' ಟ್ರೇಲರ್ ಈವೆಂಟ್‌ ಜಾಗಕ್ಕೂ ಯಶ್‌ಗೂ ಮರೆಯಲಾಗದ ನಂಟಿದೆ, ಏನದು ನೋಡಿ!

ಯಶ್ ನಟನೆ, ಗೀತೂ ಮೋಹನದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಚಿತ್ರೀಕರಣಗೊಂಡಿರುವ ಟಾಕ್ಸಿಕ್ ಸಿನಿಮಾ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ನಾಳೆ ಟ್ರೇಲರ್ ಬಿಡುಗಡೆ..

Read Full Story
05:16 PM (IST) Aug 07

India News Live 7th August: 1987ರಿಂದ ಒಂಟಿ ಜೀವನ, ಸಾವಿಗೂ ಭಯವಿಲ್ಲ - 80ರ ವಯಸ್ಸಿನಲ್ಲೂ ನಟಿಸುತ್ತಿರುವ ಉಷಾ ನಾಡಕರ್ಣಿ

Usha Nadkarni: ಹಿರಿಯ ನಟಿ ಉಷಾ ನಾಡಕರ್ಣಿ ಅವರಿಗೆ ಈಗ 80 ವರ್ಷ. 1987ರಿಂದಲೂ ಮುಂಬೈನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. ಆರಂಭದಲ್ಲಿ ಭಯವಿದ್ದರೂ ಈಗ ಒಂಟಿತನವನ್ನೇ ಅಪ್ಪಿಕೊಂಡಿದ್ದಾರೆ.

Read Full Story
04:34 PM (IST) Aug 07

India News Live 7th August: Monsoon Cloud - ಚೀನಾದಿಂದ ಬಂತು 3500KM ಉದ್ದದ ಮಾನ್ಸೂನ್ ಮೋಡ; ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭರ್ಜರಿ ಮಳೆ ಅಲರ್ಟ್!

ಭಾರತದ ಇನ್ಸಾಟ್-3ಡಿಎಸ್ ಉಪಗ್ರಹವು ಚೀನಾದಿಂದ ಭಾರತದವರೆಗೆ ಹರಡಿರುವ ಬೃಹತ್ ಮಾನ್ಸೂನ್ ಮೋಡದ ಚಿತ್ರವನ್ನು ಸೆರೆಹಿಡಿದಿದೆ. ಇದು ಚಂಡಮಾರುತವಲ್ಲದಿದ್ದರೂ, ಗುಡುಗು ಸಹಿತ ಭಾರಿ ಮಳೆಯನ್ನು ತರುವ ಸಕ್ರಿಯ ಮಾನ್ಸೂನ್ ಮಾರುತಗಳ ಸರಣಿಯಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
Read Full Story
03:39 PM (IST) Aug 07

India News Live 7th August: ಲಂಕಾ ಟೆಸ್ಟ್‌ಗೂ ಮುನ್ನವೇ ಸರ್ಪರಾಜ್ ಖಾನ್ ನಿಗೂಢ ಪೋಸ್ಟ್ - ಭಾರೀ ವಿವಾದ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಿಂದ ಕೈಬಿಟ್ಟ ನಂತರ, ಬ್ಯಾಟರ್ ಸರ್ಫರಾಜ್ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ರಹಸ್ಯ ಪೋಸ್ಟ್ ಹಂಚಿಕೊಂಡಿದ್ದಾರೆ. ಕಳೆದ ಸರಣಿಯಲ್ಲಿ ಶತಕ ಸಿಡಿಸಿದ್ದರೂ ತಮ್ಮನ್ನು ಕಡೆಗಣಿಸಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪೋಸ್ಟ್ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
Read Full Story
03:37 PM (IST) Aug 07

India News Live 7th August: ನಿಮ್ಮ ದೇಹದಲ್ಲಿ ಕಿಡ್ನಿ ವರ್ಕ್‌ ಆಗ್ತಿಲ್ಲ ಅಂತಾ ಮುನ್ಸೂಚನೆ ನೀಡೋ ವಿಚಾರಗಳಿವು..

ಮೂತ್ರಪಿಂಡಗಳು ದೇಹದ ಪ್ರಮುಖ ಅಂಗಗಳಾಗಿದ್ದು, ರಕ್ತವನ್ನು ಶುದ್ಧೀಕರಿಸಿ ತ್ಯಾಜ್ಯವನ್ನು ಹೊರಹಾಕುತ್ತವೆ. ಈ ಲೇಖನವು ಕಿಡ್ನಿಗಳ ಕಾರ್ಯಗಳು, ವೈಫಲ್ಯದ ಆರಂಭಿಕ ಲಕ್ಷಣಗಳು, ಮತ್ತು ಅವುಗಳನ್ನು ಆರೋಗ್ಯವಾಗಿಡಲು ಬೇಕಾದ ಉಪಾಯಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತದೆ.
Read Full Story
03:17 PM (IST) Aug 07

India News Live 7th August: ಕೊಹ್ಲಿಯೂ ಅಲ್ಲ, ಧೋನಿಯೂ ಅಲ್ಲ, ಗಂಗೂಲಿ ಅಲ್ಲವೇ ಅಲ್ಲ! ಈತನೇ ಭಾರತದ ಅತ್ಯುತ್ತಮ ಕ್ಯಾಪ್ಟನ್ ಎಂದ ಅಜಿಂಕ್ಯ ರಹಾನೆ!

ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನಾಗಿ ಅಜಿಂಕ್ಯ ರಹಾನೆ ಅಚ್ಚರಿಯ ಹೆಸರನ್ನು ಆಯ್ಕೆ ಮಾಡಿದ್ದಾರೆ. ಧೋನಿ, ಕೊಹ್ಲಿ ಬದಲು ಸಚಿನ್ ತೆಂಡೂಲ್ಕರ್ ಅವರನ್ನು ಹೆಸರಿಸಿದ್ದು, ಅವರ ಈ ಆಯ್ಕೆಯ ಹಿಂದಿನ ಕಾರಣ ಮತ್ತು ಸಚಿನ್ ಅವರ ನಾಯಕತ್ವದ ದಾಖಲೆಗಳನ್ನು ಇಲ್ಲಿ ವಿವರಿಸಲಾಗಿದೆ.
Read Full Story
03:12 PM (IST) Aug 07

India News Live 7th August: ಸಾಲ ವಸೂಲಾತಿ ನಿಯಮಗಳನ್ನು ಬಿಗಿಗೊಳಿಸಿದ ಆರ್‌ಬಿಐ; ನೂತನ ಮಾರ್ಗದರ್ಶಿ ಸೂತ್ರ ಪ್ರಕಟ

ಸಾಲದ ಕಂತು ಪಾವತಿಸದ ಗ್ರಾಹಕರಿಗೆ ಆಗುವ ಕಿರುಕುಳ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಾಲ ವಸೂಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಸ ಮತ್ತು ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Read Full Story
03:12 PM (IST) Aug 07

India News Live 7th August: ಅಲಾಸ್ಕಾದಲ್ಲಿ ಕರಗಿದ ಹಿಮನದಿ, ಜನ್ಮತಳೆದ ಹೊಸ ದ್ವೀಪ! ನಾಸಾ ಉಪಗ್ರಹ ಚಿತ್ರಗಳಲ್ಲಿ ಬಯಲಾಯ್ತು ಪ್ರಕೃತಿಯ ಭೀಕರತೆ!

ಜಾಗತಿಕ ತಾಪಮಾನದಿಂದ ಅಲಾಸ್ಕಾದ ಅಲ್ಸೆಕ್ ಹಿಮನದಿ ಕರಗಿ, 'ಪ್ರೋ ನಾಬ್' ಎಂಬ ಭೂಭಾಗವು ಹೊಸ ದ್ವೀಪವಾಗಿ ಮಾರ್ಪಟ್ಟಿದೆ. ನಾಸಾ ದತ್ತಾಂಶಗಳು ಈ ಬದಲಾವಣೆಯನ್ನು ದೃಢಪಡಿಸಿದ್ದು, ಇದು ಅಲ್ಸೆಕ್ ನದಿಯ ಮಾರ್ಗ ಬದಲಾವಣೆ ಮತ್ತು ಜೀವವೈವಿಧ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಎತ್ತಿ ತೋರಿಸುತ್ತದೆ.
Read Full Story
03:10 PM (IST) Aug 07

India News Live 7th August: Big updates - ಗೂಗಲ್ ಮ್ಯಾಪ್ ಬಳಸೋರು ಓದಲೇಬೇಕಾದ ಸ್ಟೋರಿ..!

ಕಳೆದ ಎರಡು ದಶಕಗಳಿಂದ ನಮಗೆ ಅಪರಿಚಿತ ದಾರಿಗಳಲ್ಲಿ ದಾರಿದೀಪವಾಗಿದ್ದ ಗೂಗಲ್ ಮ್ಯಾಪ್ಸ್ (Google Maps) ಈಗ ಕೇವಲ ನಕ್ಷೆಯಾಗಿ ಉಳಿದಿಲ್ಲ. ಗೂಗಲ್ ಸಂಸ್ಥೆಯು ತನ್ನ ಮ್ಯಾಪ್ಸ್ ಅಪ್ಲಿಕೇಶನ್‌ಗೆ ಭರ್ಜರಿ ಅಪ್‌ಡೇಟ್ ನೀಡಿದ್ದು, ಇನ್ನು ಮುಂದೆ ಇದು ನಿಮ್ಮ ಪರ್ಸನಲ್ ಅಸಿಸ್ಟೆಂಟ್‌ನಂತೆ ಕೆಲಸ ಮಾಡಲಿದೆ. ಏನದು ? ತಿಳಿದುಕೊಳ್ಳಲು ಸ್ಟೋರಿ ಓದಿ..

Read Full Story
02:59 PM (IST) Aug 07

India News Live 7th August: ಒಂದು ತಿಂಗಳು ವೆಬ್ ಸೀರಿಸ್ ನೋಡಿ ಪತ್ನಿ ಹತ್ಯೆ, ₹12 ಲಕ್ಷ ಜೊತೆ ಪರಾರಿಯಾದ ಪತಿ ಅರೆಸ್ಟ್ ಆಗಿದ್ದು ಹೇಗೆ?

ಸತತ ಒಂದು ತಿಂಗಳಿನಿಂದಲೂ ಹೆಚ್ಚು ಕಾಲ ಕ್ರೈಂ ಹಾಗೂ ಎಸ್ಕೇಪ್ ಕುರಿತ ವೆಬ್ ಸೀರಿಸ್ ನೋಡಿದ್ದಾನೆ. ಎಲ್ಲಾ ವಿದ್ಯೆ ಕರಗತ ಮಾಡಿಕೊಂಡ ಗಂಡ, ಪತ್ನಿಯನ್ನೇ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈತನ ಅರೆಸ್ಟ್ ಕೂಡ ವೆಬ್ ಸಿರೀಸ್ ಪ್ರಕಾರವೇ ನಡೆದಿದೆ.

Read Full Story
02:56 PM (IST) Aug 07

India News Live 7th August: ಭಾರತ ವಿಶ್ವದ AI ಬಳಕೆಯ ರಾಜಧಾನಿಯಾಗಲಿದೆ, ದೊಡ್ಡ ಕಂಪನಿಗಳಲ್ಲಿ ಲೇ ಆಫ್, ಸಣ್ಣ ಉದ್ಯಮಗಳಿಗೆ ವರ - ನಂದನ್ ನಿಲೇಕಣಿ

ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಭಾರತವು ಬೃಹತ್ AI ಮಾದರಿಗಳ ಬದಲು ಸಾರ್ವಜನಿಕ ಸೇವೆಗಳಲ್ಲಿ 'ಅನ್ವಯಿಕ AI' ಅಳವಡಿಕೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದ್ದಾರೆ. ಎಐ ಯಾಂತ್ರೀಕರಣದಿಂದಾಗಿ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ನಷ್ಟವಾಗಲಿದ್ದು, ಭವಿಷ್ಯದಲ್ಲಿ ಸಣ್ಣ, ವೈಯಕ್ತಿಕ ಉದ್ಯಮಗಳು ಆರ್ಥಿಕತೆಗೆ ಆಧಾರವಾಗಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Read Full Story
02:34 PM (IST) Aug 07

India News Live 7th August: 19ನೇ ವಯಸ್ಸಿನಲ್ಲಿ ಮಾರಕ ಕಾಯಿಲೆಗೆ ಎರಡೂ ಕಾಲು ಕಳೆದುಕೊಂಡರೂ ಬದುಕಿನ ಹೊಸ ಅಧ್ಯಾಯ ಬರೆದ ಆಮಿ ಸ್ಪೂರ್ತಿದಾಯಕ ಕಥೆ!

19ನೇ ವಯಸ್ಸಿನಲ್ಲಿ ಅಪರೂಪದ ಸೋಂಕಿನಿಂದ ಎರಡೂ ಕಾಲುಗಳನ್ನು ಕಳೆದುಕೊಂಡ ಆಮಿ ಪರ್ಡಿ, ನಂತರ ಮೂತ್ರಪಿಂಡ ವೈಫಲ್ಯವನ್ನೂ ಎದುರಿಸಿದರು. ಆದರೆ, ಈ ಎಲ್ಲಾ ಆಘಾತಗಳನ್ನು ಮೀರಿ, ಅವರು ಮೂರು ಬಾರಿಯ ಪ್ಯಾರಾಲಿಂಪಿಕ್ ಪದಕ ವಿಜೇತೆಯಾಗಿ, ತಮ್ಮ ಅಂಗವೈಕಲ್ಯವನ್ನೇ ಶಕ್ತಿಯಾಗಿಸಿಕೊಂಡು ಜಗತ್ತಿಗೆ ಸ್ಪೂರ್ತಿಯಾದರು.
Read Full Story
02:03 PM (IST) Aug 07

India News Live 7th August: 12 ವರ್ಷದ ಬಾಲೆ ಈಗ AI ಎಂಜಿನಿಯರ್​ - ಅಪ್ಪನ ಕಷ್ಟಕ್ಕೆ ಮುಕ್ತಿ ಕೊಟ್ಟು ಜಗತ್ತಿನ ಕಿರಿಯ CEO ಆದವಳ ಸ್ಟೋರಿ

ಬ್ರಿಟಿಷ್ ಕೊಲಂಬಿಯಾದ 12 ವರ್ಷದ ಬಾಲಕಿ ಮನಾ ಜಂಪಾಲ, ತನ್ನದೇ ಆದ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್ಅಪ್ 'ವೋಕ್ಸಾ' ಅನ್ನು ಸ್ಥಾಪಿಸುವ ಮೂಲಕ ವಿಶ್ವದ ಅತಿ ಕಿರಿಯ AI ಉದ್ಯಮಿ ಎನಿಸಿಕೊಂಡಿದ್ದಾಳೆ. ತನ್ನ ತಂದೆಯ ವ್ಯವಹಾರದಲ್ಲಿನ ಸಮಸ್ಯೆಯಿಂದ ಸ್ಫೂರ್ತಿ ಪಡೆದು, ಗ್ರಾಹಕರ ಕರೆಗಳನ್ನು 24/7 ನಿರ್ವಹಿಸಲು ಸಹಾಯ ಮಾಡುವ AI-ಚಾಲಿತ ಸ್ವಾಗತಕಾರನನ್ನು ಈಕೆ ಅಭಿವೃದ್ಧಿಪಡಿಸಿದ್ದಾಳೆ.
Read Full Story