ಎಲೆಕ್ಟ್ರಿಕ್ ಕಾರುಗಳಿಗೆ ಅಗತ್ಯವಾದ ಅಪರೂಪದ ಖನಿಜ ನಿಯೋಡಿಮಿಯಂ ರಫ್ತನ್ನು ಜಪಾನ್‌ಗೆ ನಿಲ್ಲಿಸಲು ಭಾರತ ಚಿಂತನೆ ನಡೆಸುತ್ತಿದೆ.

ನವದೆಹಲಿ: ಎಲೆಕ್ಟ್ರಿಕ್ ಕಾರುಗಳು ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆಗೆ ಅಗತ್ಯವಾದ ಅಪರೂಪದ ಖನಿಜವನ್ನು (ನಿಯೋಡಿಮಿಯಂ) ಜಪಾನ್‌ಗೆ ರದ್ದು ಮಾಡುವುದನ್ನು ನಿಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಭಾರತ ಮತ್ತು ಜಪಾನ್ ಮಧ್ಯೆ ಈ ವಿಚಾರಕ್ಕೆ ಸಂಬಂಧಿಸಿದಂತೆ 13 ವರ್ಷಗಳ ಒಪ್ಪಂದವಿತ್ತು. ಆದರೆ ಈಗ ಚೀನಾ ದೇಶವು ಈ ಖನಿಜವನ್ನು ಭಾರತಕ್ಕೆ ರಪ್ತು ಮಾಡುವುದನ್ನು ಕಡಿಮೆ ಮಾಡಿದೆ. ಹೀಗಾಗಿ ಸ್ಥಳೀಯವಾಗಿ ಉದ್ಯಮಕ್ಕೆ ಕೊರತೆ ಆಗದಂತೆ ತಡೆಯುವುದಕ್ಕಾಗಿ ಜಪಾನ್‌ಗೆ ಈ ಖನಿಜವನ್ನು ರಪ್ತು ಮಾಡುವುದನ್ನು ಭಾರತ ನಿಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಭಾರತ ಹಾಗೂ ಜಪಾನ್ ಮಧ್ಯೆ ಈ ರಪ್ತಿಗೆ ಸಂಬಂಧಿಸಿದಂತೆ ಹಲವು ವರ್ಷಗಳ ಒಪ್ಪಂದವಿದ್ದು, ಹಠಾತ್ ಆಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಪ್ರಪಂಚಲದಲ್ಲಿ ಅಪರೂಪದ ಖನಿಜಗಳನ್ನು ತಯಾರಿಸುವ ದೊಡ್ಡ ರಾಷ್ಟ್ರ ಚೀನಾ. ಈ ಖನಿಜಗಳು ಎಲೆಕ್ಟ್ರಿಕ್ ಕಾರುಗಳು, ಉನ್ನತ ದರ್ಜೆಯ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಬಹಳ ಮುಖ್ಯ. ಆದರೆ ಏಪ್ರಿಲ್‌ನಿಂದ ಚೀನಾ ಭಾರತಕ್ಕೆ ಈ ಖನಿಜಗಳ ರಫ್ತನ್ನು ಕಡಿಮೆ ಮಾಡಿದೆ. ಇದರಿಂದ ಜಾಗತಿಕವಾಗಿ ಹಲವು ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಅಪರೂಪದ ಖನಿಜವೂ ವ್ಯಾಪಾರ ಹಾಗೂ ಯುದ್ಧಗಳಲ್ಲಿ ದೊಡ್ಡ ಆಯುಧವಾಗಿರಲಿದೆ.

ಭಾರತದ ಹೊಸ ಯೋಜನೆ ಏನು?

ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಇತ್ತೀಚೆಗೆ IREL(ಇಂಡಿಯಾ ರೇರ್ ಅರ್ಥ್ಸ್ ಲಿಮಿಟೆಡ್) ಗೆ ಅಪರೂಪದ ಖನಿಜಗಳನ್ನು, ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸುವ ಮ್ಯಾಗ್ನೆಟ್‌ಗಳಿಗೆ ಬೇಕಾದ ನಿಯೋಡಿಮಿಯಂ ಅನ್ನು ರಫ್ತು ಮಾಡುವುದನ್ನು ನಿಲ್ಲಿಸಲು ಹೇಳಿದ್ದಾರೆ ಎಂದು ವರದಿಯಾಗಿದೆ. IREL ಇಲ್ಲಿಯವರೆಗೆ ದೇಶೀಯವಾಗಿ ಈ ಖನಿಜಗಳನ್ನು ಶುದ್ಧೀಕರಿಸುವ ಸೌಲಭ್ಯ ಇಲ್ಲದ ಕಾರಣ ರಫ್ತು ಜಪಾನ್‌ಗೆ ಮಾಡುತ್ತಿತ್ತು. ಈ ಮಧ್ಯೆ ಚೀನಾ ಪೂರೈಕೆ ಕಡಿಮೆ ಮಾಡಿರುವುದರಿಂದ, IREL ತನ್ನ ಖನಿಜಗಳನ್ನು ಭಾರತದಲ್ಲೇ ಇಟ್ಟುಕೊಂಡು, ಶುದ್ಧೀಕರಣ ಸೌಲಭ್ಯಗಳನ್ನು ಸುಧಾರಿಸಲು ಬಯಸುತ್ತದೆ. ಇದಕ್ಕಾಗಿ ನಾಲ್ಕು ಗಣಿಗಳಿಗೆ ಅನುಮತಿಗಾಗಿ ಕಾಯುತ್ತಿದೆ ಎಂದು ವರದಿಯಾಗಿದೆ.

ಜಪಾನ್‌ ಜೊತೆಗಿನ ಸಂಬಂಧ ಏನಾಗುತ್ತದೆ?

2012ರ ಒಪ್ಪಂದದ ಪ್ರಕಾರ, IRELಜಪಾನ್‌ನ ಟೊಯೋಟಾ ಸುಶೋಗೆ ಅಪರೂಪದ ಖನಿಜಗಳನ್ನು ಶುದ್ಧೀಕರಣಕ್ಕಾಗಿ ಕಳುಹಿಸುತ್ತಿದೆ. ಜಪಾನ್ ಇದನ್ನು ಮ್ಯಾಗ್ನೆಟ್ ತಯಾರಿಕೆಗೆ ಬಳಸುತ್ತದೆ. 2024ರಲ್ಲಿ 1,000 ಟನ್‌ಗಿಂತ ಹೆಚ್ಚು ಖನಿಜಗಳನ್ನು ಜಪಾನ್‌ಗೆ ಭಾರತ ಕಳುಹಿಸಿದೆ. ಆದರೆ ಈಗ ಚೀನಾದ ರಪ್ತು ಕಡಿಮೆ ಆಗಿರುವುದರಿಂದ ಶುದ್ಧೀಕರಣಕ್ಕಾಗಿ ಜಪಾನ್‌ಗೆ ಕಳುಹಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಆದರೆ ಈ ಒಪ್ಪಂದವನ್ನು ತಕ್ಷಣ ನಿಲ್ಲಿಸಲು ಸಾಧ್ಯವಿಲ್ಲ, ಏಕೆಂದರೆ ಇದು ಎರಡು ದೇಶಗಳ ನಡುವಿನ ಸರ್ಕಾರಿ ಒಪ್ಪಂದ. ಜಪಾನ್ ಮಿತ್ರ ರಾಷ್ಟ್ರವಾಗಿರುವುದರಿಂದ, ಚರ್ಚೆಯ ಮೂಲಕ ಉತ್ತಮ ನಿರ್ಧಾರ ತೆಗೆದುಕೊಳ್ಳಲು IREL ಬಯಸುತ್ತದೆ. ಜಪಾನ್ ವಾಣಿಜ್ಯ ಸಚಿವಾಲಯ ಇದರ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ.

ಭಾರತದ ಭವಿಷ್ಯದ ಯೋಜನೆಗಳು: ಇತ್ತ ಭಾರತ ಜಗತ್ತಿನ ಐದನೇ ಅತಿದೊಡ್ಡ ಅಪರೂಪದ ಖನಿಜ ನಿಕ್ಷೇಪವನ್ನು ಹೊಂದಿದೆ (6.9 ಮಿಲಿಯನ್ ಟನ್). ಆದರೆ ದೇಶೀಯವಾಗಿ ಮ್ಯಾಗ್ನೆಟ್ ಉತ್ಪಾದನೆ ಭಾರತದಲ್ಲಿ ಇಲ್ಲ.

ಚೀನಾದಿಂದ ಆಮದು: ಆದರೆ ಭಾರತ ಹೆಚ್ಚಾಗಿ ಮ್ಯಾಗ್ನೆಟ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಕಳೆದ ವರ್ಷ 53,748 ಟನ್ ಮ್ಯಾಗ್ನೆಟ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇವು ಕಾರುಗಳು, ವಿಂಡ್‌ಮಿಲ್‌ಗಳು, ವೈದ್ಯಕೀಯ ಉಪಕರಣಗಳಲ್ಲಿ ಬಳಕೆಯಾಗುತ್ತವೆ.

ಹೊಸ ಉತ್ಪಾದನಾ ಘಟಕಗಳು: ಅಣುಶಕ್ತಿ ಯೋಜನೆಗಳು ಮತ್ತು ರಕ್ಷಣಾ ಇಲಾಖೆಗೆ IREL ಖನಿಜಗಳನ್ನು ಪೂರೈಸುತ್ತದೆ. ಆದರೆ ಈ ಖನಿಜಗಳನ್ನು ಹೊರತೆಗೆಯಲು ಮತ್ತು ಶುದ್ಧೀಕರಿಸಲು ನಮ್ಮ ಬಳಿ ಇನ್ನೂ ದೊಡ್ಡ ತಂತ್ರಜ್ಞಾನ ಇಲ್ಲ.

ನಿಯೋಡಿಮಿಯಂ ಉತ್ಪಾದನೆ: ಒಡಿಶಾದಲ್ಲಿ IRELಒಂದು ಶುದ್ಧೀಕರಣ ಘಟಕ ಮತ್ತು ಕೇರಳದಲ್ಲಿ ಒಂದು ಶುದ್ಧೀಕರಣ ವಿಭಾಗ ಹೊಂದಿದೆ. 2026ರ ವೇಳೆಗೆ 450 ಟನ್ ನಿಯೋಡಿಮಿಯಂ ಉತ್ಪಾದಿಸಲು ಯೋಜಿಸಿರುವ IREL2030ರ ವೇಳೆಗೆ ಇದನ್ನು ದ್ವಿಗುಣಗೊಳಿಸಲು ಗುರಿ ಹೊಂದಿದೆ.

ಪಾಲುದಾರರನ್ನು ಹುಡುಕುವುದು: ಕಾರು ಮತ್ತು ಔಷಧಿ ಉದ್ಯಮಗಳಿಗೆ ಬೇಕಾದ ಮ್ಯಾಗ್ನೆಟ್‌ಗಳನ್ನು ಉತ್ಪಾದಿಸಲು ಹೊಸ ವ್ಯಾಪಾರ ಪಾಲುದಾರರನ್ನು ಐಆರ್‌ಎಎಲ್ ಹುಡುಕುತ್ತಿದೆ.

ಪ್ರೋತ್ಸಾಹ ಯೋಜನೆಗಳು: ದೇಶೀಯ ಅಗತ್ಯಗಳನ್ನು ಪೂರೈಸಲು, ಅಪರೂಪದ ಖನಿಜ ಶುದ್ಧೀಕರಣ ಮತ್ತು ಮ್ಯಾಗ್ನೆಟ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಸರ್ಕಾರ ಸೌಲಭ್ಯಗಳನ್ನು ನೀಡಲು ಯೋಜಿಸಿದೆ. ಈ ಕ್ರಮಗಳು ಭಾರತದ ಆರ್ಥಿಕತೆಯನ್ನು ಸುಧಾರಿಸುವುದರ ಜೊತೆಗೆ, ಪ್ರಮುಖ ಖನಿಜಗಳಿಗೆ ವಿದೇಶಗಳನ್ನು ಅವಲಂಬಿಸಿರುವುದನ್ನು ಕಡಿಮೆ ಮಾಡುತ್ತದೆ.