Asianet Suvarna News Asianet Suvarna News

ಭಾರತದ ಕಾರಿಡಾರ್‌ ಕಾರಣಕ್ಕೆ ಇಸ್ರೇಲ್‌-ಹಮಾಸ್‌ ಯುದ್ಧ, ಅನುಮಾನ ವ್ಯಕ್ತಪಡಿಸಿದ ಬೈಡೆನ್‌!

ಜಿ20 ಶೃಂಗಸಭೆಯ ವೇಳೆ ಭಾರತ ಹಾಗೂ ಮಧ್ಯಪ್ರಾಚ್ಯ ನಡುವೆ ಕಾರಿಡಾರ್‌ ನಿರ್ಮಾಣ ಮಾಡುವ ಘೋಷಣೆ ಮಾಡಲಾಗಿತ್ತು. ಈಗ ಇಸ್ರೇಲ್‌ ಹಾಗೂ ಹಮಾಸ್ ನಡುವಿನ ಯುದ್ಧಕ್ಕೆ ಇದೇ ಕಾರಣವಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸಂಶಯ ವ್ಯಕ್ತಪಡಿಸಿದ್ದಾರೆ.

India Middle East Corridor could be the reason for Israel Hamas war says US President Joe Biden san
Author
First Published Oct 26, 2023, 7:02 PM IST

ನ್ಯೂಯಾರ್ಕ್‌ (ಅ.26): ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ಕೂಡ ಒಂದು ಕಾರಣವಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ಆಲ್ ಇಂಡಿಯಾ ರೇಡಿಯೊ ಮಾಡಿರುವ ವರದಿಯ ಪ್ರಕಾರ, ಆಸ್ಟ್ರೇಲಿಯನ್ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗಿನ ಸಭೆಯ ನಂತರ ಬೈಡೆನ್‌ ಇದನ್ನು ಹೇಳಿದ್ದಾರೆ. ಇದು ಕೇವಲ ನನ್ನ ಊಹೆ, ಅದನ್ನು ಸಾಬೀತುಪಡಿಸಲು ನನ್ನ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಬೈಡೆನ್‌ ತಿಳಿಸಿದ್ದಾರೆ. ಹಮಾಸ್ ದಾಳಿಯ ಹಿಂದೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಪ್ರಮುಖ ಕಾರಣ ಎಂದು ಬೈಡೆನ್‌ ಒಂದು ವಾರದಲ್ಲಿ ಎರಡನೇ ಬಾರಿಗೆ ಉಲ್ಲೇಖಿಸಿದ್ದಾರೆ. ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರಿಡಾರ್ ಅನ್ನು ಘೋಷಿಸಿದರು. ಇಸ್ರೇಲ್ ಈ ಕಾರಿಡಾರ್ ಅನ್ನು ಏಷ್ಯಾಕ್ಕೆ ಬಹಳ ಮುಖ್ಯ ಎಂದು ವಿವರಿಸಿದೆ. ಹಾಗಿದ್ದರೂ ಇದು ಸಕ್ರಿಯ ಸದಸ್ಯರಾಗಿ ಈ ಕಾರಿಡಾರ್‌ನ ಭಾಗವಾಗಿಲ್ಲ.

ವಿದೇಶಾಂಗ ವ್ಯವಹಾರಗಳ ತಜ್ಞ ಮೈಕೆಲ್ ಕುಗೆಲ್‌ಮನ್ ಪ್ರಕಾರ, ಈ ಯುದ್ಧವು ಭಾರತ-ಮಧ್ಯಪ್ರಾಚ್ಯ ಕಾರಿಡಾರ್‌ಗೆ ದೊಡ್ಡ ಸವಾಲನ್ನು ತಂದಿದೆ. ಜಗತ್ತನ್ನು ಸಂಪರ್ಕಿಸಲು ಕಾರಿಡಾರ್ ನಿರ್ಮಿಸುವುದು ಎಷ್ಟು ಕಷ್ಟದ ಕೆಲಸ ಎಂಬುದನ್ನು ಈ ಯುದ್ಧವು ಸಾಬೀತುಪಡಿಸುತ್ತದೆ. ಈ ಯೋಜನೆಯ ಘೋಷಣೆಯ ಸಮಯದಲ್ಲಿ, ಇದು ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ ಎಂದು ನಂಬಲಾಗಿತ್ತು. ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಮನೋಜ್ ಜೋಶಿ ಅವರ ಪ್ರಕಾರ, ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ಭಾರತ-ಮಧ್ಯಪ್ರಾಚ್ಯ ಮತ್ತು ಯುರೋಪ್ ಕಾರಿಡಾರ್ ಅನ್ನು ಪ್ರಾರಂಭಿಸಲಾಗಿದೆ. ಆದರೆ, ಈಗ ಇದೇ ಕಾರಿಡಾರ್‌ ಜಗಳಕ್ಕೆ ಕಾರಣವಾಗಿದೆ.

ಮುಂಬೈನಿಂದ ಪ್ರಾರಂಭವಾಗುವ ಈ ಹೊಸ ಕಾರಿಡಾರ್ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ಗೆ ಪರ್ಯಾಯವಾಗಲಿದೆ. ಈ ಕಾರಿಡಾರ್ 6 ಸಾವಿರ ಕಿಲೋಮೀಟರ್ ಉದ್ದ ಇರಲಿದೆ. ಇದು 3500 ಕಿಲೋಮೀಟರ್ ಸಮುದ್ರ ಮಾರ್ಗವನ್ನು ಒಳಗೊಂಡಿದೆ. ಕಾರಿಡಾರ್ ನಿರ್ಮಾಣದ ನಂತರ, ಭಾರತದಿಂದ ಯುರೋಪ್‌ಗೆ ಸರಕುಗಳನ್ನು ಸಾಗಿಸಲು ಸುಮಾರು 40% ಸಮಯ ಉಳಿತಾಯವಾಗುತ್ತದೆ. ಪ್ರಸ್ತುತ, ಭಾರತದಿಂದ ಯಾವುದೇ ಸರಕು ಹಡಗು ಜರ್ಮನಿಗೆ ತಲುಪಲು 36 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಮಾರ್ಗವು 14 ದಿನಗಳನ್ನು ಉಳಿಸುತ್ತದೆ. ಯುರೋಪ್‌ಗೆ ನೇರ ಪ್ರವೇಶದೊಂದಿಗೆ, ಭಾರತಕ್ಕೆ ರಫ್ತು-ಆಮದು ಸುಲಭ ಮತ್ತು ಅಗ್ಗವಾಗಲಿದೆ.

ಭಾರತವು ಈ ಯೋಜನೆಗೆ ಸೇರ್ಪಡೆಗೊಳ್ಳಲು ಏಳು ಕಾರಣಗಳು
* ಆರಂಭದಲ್ಲಿ ಭಾರತ ಮತ್ತು ಅಮೇರಿಕಾ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದವು, ಆದರೆ ಮೊದಲ ಬಾರಿಗೆ ಎರಡೂ ಮಧ್ಯಪ್ರಾಚ್ಯದಲ್ಲಿ ಪಾಲುದಾರರಾಗಿದ್ದಾರೆ.

* ಮಧ್ಯ ಏಷ್ಯಾದೊಂದಿಗೆ ಭಾರತದ ಭೂ ಸಂಪರ್ಕಕ್ಕೆ ದೊಡ್ಡ ಅಡಚಣೆಯಾಗಿದ್ದ ಪಾಕಿಸ್ತಾನವನ್ನು ಹೊರಹಾಕಲಾಗಿದೆ. ಪಾಕಿಸ್ತಾನ 1991 ರಿಂದ ಈ ಪ್ರಯತ್ನವನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಿತ್ತು.

* ಇರಾನ್‌ನೊಂದಿಗಿನ ಭಾರತದ ಸಂಬಂಧವು ಸುಧಾರಿಸಿದೆ, ಆದರೆ ಯುಎಸ್ ನಿರ್ಬಂಧಗಳಿಂದಾಗಿ, ಇರಾನ್‌ನಿಂದ ಯುರೇಷಿಯಾವರೆಗಿನ ರಷ್ಯಾ-ಇರಾನ್ ಕಾರಿಡಾರ್‌ನ ಯೋಜನೆಗಳು ಪರಿಣಾಮ ಬೀರುತ್ತವೆ.

* ಅರಬ್ ರಾಷ್ಟ್ರಗಳೊಂದಿಗೆ ಭಾರತದ ಪಾಲುದಾರಿಕೆ ಹೆಚ್ಚಿದೆ. ಯುಎಇ ಮತ್ತು ಸೌದಿ ಸರ್ಕಾರಗಳು ಭಾರತದೊಂದಿಗೆ ಶಾಶ್ವತ ಸಂಪರ್ಕವನ್ನು ಸೃಷ್ಟಿಸಲು ಪ್ರಯತ್ನಗಳನ್ನು ಮಾಡುತ್ತಿವೆ.

* ಈ ಮೆಗಾ ಸಂಪರ್ಕ ಯೋಜನೆಯು ಅರೇಬಿಯನ್ ಪೆನಿನ್ಸುಲಾದಲ್ಲಿ ರಾಜಕೀಯ ಸ್ಥಿರತೆಯನ್ನು ತರುತ್ತದೆ ಮತ್ತು ಸಂಬಂಧಗಳನ್ನು ಸಾಮಾನ್ಯಗೊಳಿಸುತ್ತದೆ ಎಂದು ಅಮೆರಿಕ ಭಾವಿಸುತ್ತದೆ.

* ಯುರೋಪಿಯನ್ ಒಕ್ಕೂಟವು 2021-27ರ ಅವಧಿಯಲ್ಲಿ ಮೂಲಸೌಕರ್ಯ ವೆಚ್ಚಕ್ಕಾಗಿ 300 ಮಿಲಿಯನ್ ಯುರೋಗಳನ್ನು (ಸುಮಾರು 2633 ಕೋಟಿ ರೂ.) ಮೀಸಲಿಟ್ಟಿತ್ತು. ಭಾರತವೂ ಅದರ ಪಾಲುದಾರರಾದರು.

 

ಇಸ್ರೇಲ್‌ ಯುದ್ಧ ಕಣಕ್ಕಿಳಿದ ಅಮೆರಿಕ: 100ಕ್ಕೂ ಹೆಚ್ಚು ಹಮಾಸ್‌ ನೆಲೆಗಳ ಮೇಲೆ ಅಟ್ಯಾಕ್

* ಹೊಸ ಕಾರಿಡಾರ್ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‌ಗೆ ಪರ್ಯಾಯವಾಗಿದೆ. ಚೀನಾದ ಸಾಲದ ಬಲೆಯಿಂದ ಹಲವು ದೇಶಗಳಿಗೆ ಮುಕ್ತಿ ಸಿಗಲಿದೆ. G20 ನಲ್ಲಿ ಆಫ್ರಿಕನ್ ಒಕ್ಕೂಟದ ಪಾಲುದಾರರಾಗುವುದು ಆಫ್ರಿಕನ್ ದೇಶಗಳಲ್ಲಿ ಚೀನಾ ಮತ್ತು ರಷ್ಯಾದ ಬೆಳೆಯುತ್ತಿರುವ ಸಮರ್ಥನೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.

15ನೇ ದಿನವೂ ರಣರಂಗದಲ್ಲಿ ಇಸ್ರೇಲ್ ಗುಂಡಿನ ಮಳೆ: ಗಾಜಾದ ಮತ್ತೊಂದು ಮಸೀದಿ ಉಡೀಸ್‌

Follow Us:
Download App:
  • android
  • ios