Asianet Suvarna News Asianet Suvarna News

ಕೊರೋನಾ ಕಲಿಸಿತು ಸ್ವಾವಲಂಬಿ ಪಾಠ; ಶೂನ್ಯದಿಂದ 2.5 ಲಕ್ಷ ಪಿಪಿಇ ಕಿಟ್ ನಿರ್ಮಿಸುತ್ತಿರುವ ಭಾರತ!

ಕೊರೋನಾ ವೈರಸ್‌ನಿಂದ ಭಾರತದ ಹಲವು ವಿಚಾರದಲ್ಲಿ ಸ್ವಾವಲಂಬಿಯಾಗಿದೆ. ಚೀನಾ ಉತ್ಪನ್ನಗಳನ್ನೇ ನೆಚ್ಚಿಕೊಂಡಿದ್ದ ಭಾರತ ಇದೀಗ ಹೊಸ ದಿಕ್ಕಿನಲ್ಲಿ ಪಯಣಿಸುತ್ತಿದೆ. ಕೊರೋನಾ ಭಾರತಕ್ಕೆ ವಕ್ಕರಿಸಿದಾಗ  ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ನೀಡುವ ಪಿಪಿಇ ಕಿಟ್‌ಗೆ ಚೀನಾವನ್ನು ಆವಲಂಬಿಸಿತ್ತು. ಒಂದೇ ಒಂದು ಪಿಪಿಇ ಕಿಟ್ ತಯಾರಿಸದ ಭಾರತ  ಇದೀಗ ಪ್ರತಿ ಲಕ್ಷ ಲಕ್ಷ ಕಿಟ್ ತಯಾರಿಸುತ್ತಿದೆ.

India manufacturing 2 5 lakh ppe kit per day not depend china for products
Author
Bengaluru, First Published May 6, 2020, 8:47 PM IST

ನವದೆಹಲಿ(ಮೇ.06): ಕೊರೋನಾ ವೈರಸ್ ಹುಟ್ಟಿಗೆ ಚೀನಾ ಕಾರಣ, ಚೀನಾ ಉದ್ದೇಶಪೂರ್ವಕವಾಗಿ ವೈರಸ್ ಹರಡಿದೆ ಅನ್ನೋ ಮಾತುಗಳಿವೆ. ಈ ಕುರಿತು ಪರ ವಿರೋಧಗಳಿವೆ. ಆದರೆ ಈ ಕೊರೋನಾ ವೈರಸ್ ಕಾರಣದಿಂದ ಭಾರತ ಹೆಚ್ಚು ಸ್ವಾಲಂಬಿಯಾಗಿದೆ. ವೈದ್ಯಕೀಯ ಸಲಕರಣೆ ಸೇರಿದಂತೆ ಹಲವು ವಿಚಾರದಲ್ಲಿ ಭಾರತ, ಚೀನಾ ಉತ್ಪನ್ನಗಳನ್ನು ನೆಚ್ಚಿಕೊಂಡಿತ್ತು. ಆದರೆ ಕೊರೋನಾ ಭಾರತಕ್ಕೆ ವಕ್ಕರಿಸಿದ ಮೇಲೆ ಹಲವು ಉತ್ಪನ್ನಗಳು ಭಾರತದಲ್ಲೇ ನಿರ್ಮಾಣವಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ವೈದ್ಯರು ಆಸ್ಪತ್ರೆ ಸಿಬ್ಬಂದಿಗಳಿಗೆ ನೀಜುವ ಪಿಪಿಇ ಕಿಟ್.

ಸಾರ್ವಜನಿಕ ಸಾರಿಗೆ ಸಂಚಾರ ಯಾವಾಗ? ನಿತಿನ್ ಗಡ್ಕರಿ ಕೊಟ್ರು ಮಹತ್ವದ ಸುಳಿವು...!

ಭಾರತ ಮಾತ್ರವಲ್ಲ ವಿಶ್ವದ ಅನೇಕ ದೇಶಗಳು ಚೀನಾದ ಉತ್ಪನ್ನಗಳನ್ನೇ ನೆಚ್ಚಿಕೊಂಡಿದೆ. ಪಿಪಿಇ ಕಿಟ್, ವೈದ್ಯಕೀಯ ಸಲಕರಣೆ, ಗ್ಲೌಸ್, ಸಿರಿಂಜು ಸೇರಿದಂತೆ ಇತರ ಹಲವು ಉತ್ಪನ್ನಗಳ ಚೀನಾದಿಂದ ಆಮದಾಗುತ್ತಿತ್ತು. ಇತರ ದೇಶಗಳಿಗೂ ಚೀನಾ ರಫ್ತು ಮಾಡುತ್ತಿತ್ತು. ಆದರೆ ವುಹಾನ್‌ನಲ್ಲಿ ಕೊರೋನಾ ವೈರಸ್ ಕಾರಣಿಸಿಕೊಂಡ ಕಾರಣ ಲಾಕ್‌ಡೌನ್ ಹೇರಲಾಗಿತ್ತು. ಇತ್ತ ವೈರಸ್ ಭಾರತಕ್ಕೂ ಕಾಲಿಟ್ಟಿತು. ಹೀಗಾಗಿ ಪಿಪಿಇ ಕಿಟ್ ಅವಶ್ಯಕತೆ ಭಾರತಕ್ಕೆ ಹೆಚ್ಚಾಯಿತು. ಆದರೆ ಉತ್ಪಾದನಾ ಕೇಂದ್ರವಾಗಿದ್ದ  ವುಹಾನ್‌ನಿಂದ ಯಾವ ಕಿಟ್ ಬರಲಿಲ್ಲ. 

ಮೋದಿ ಸೂಪರ್ ಹ್ಯೂಮನ್: ಪಿಎಂ ಕಾರ್ಯಕ್ಕೆ ಆಸ್ಟ್ರೇಲಿಯಾ ರಾಯಭಾರಿ ಸಲಾಂ!

ಕೊರೋನಾ ವೈರಸ್ ಆರಂಭಿಕ ಹಂತದಲ್ಲೇ ಭಾರತ ಮುಂಜಾಗ್ರತ ಕ್ರಮ ಕೈಗೊಳ್ಳಲು ಆರಂಭಿಸಿತು. ಪಿಪಿಇ ಕಿಟ್ ಸಂಗ್ರಹಕ್ಕೂ ಮುಂದಾಯಿತು. ಆದರೆ ಚೀನಾದಿಂದ ಪೂರೈಕೆ ಸಾಧ್ಯವಿಲ್ಲ ಎಂದಾಗ ಭಾರತವೇ ಪಿಪಿಇ ಕಿಟ್ ಉತ್ಪಾದನೆಗೆ ಮುಂದಾಯಿತು. ಕ್ಷಿಪ್ರಗತಿಯಲ್ಲಿ ಭಾರತ ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿತು. ಇದೀಗ ಪ್ರತಿ ದಿನ 2.5 ಲಕ್ಷ ಪಿಪಿಇ ಕಿಟ್ ತಯಾರಿಸುವ ಸಾಮರ್ಥ್ಯ ಭಾರತಕ್ಕಿದೆ. 

ಅತ್ತ ಚೀನಾದಿಂದ ಆಮದು ಮಾಡಿಕೊಂಡಿರುವ ಪಿಪಿಇ ಕಿಟ್‌ಗಳು ಕಳಪೆ ಗುಣಮಟ್ಟ ಅನ್ನೋ ಕಾರಣ ಭಾರತ, ಚೀನಾ ಕಿಟ್ ಬಳಸದಿರಲು ನಿರ್ಧರಿಸಿದೆ. ಇತ್ತ ಭಾರತ ಪ್ರತಿ ದಿನ 2.5 ಲಕ್ಷ ಪಿಪಿಇ ಕಿಟ್ ನಿರ್ಮಿಸಿದ ಎಲ್ಲಾ ರಾಜ್ಯಗಳಿಗೆ ವಿತರಣೆ ಮಾಡುತ್ತಿದೆ. ಇಷ್ಟೇ ಅಲ್ಲ ವೆಂಟಿಲೇಟರ್ ಉತ್ಪಾದನೆ, ಎನ್-95 ಮಾಸ್ಕ್, ಶೀಲ್ಡ್ ಮಾಸ್ಕ್ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಭಾರತ ಚೀನಾ ಅವಲಂಬನೆಯಿಂದ ಹೊರಬಂದಿದೆ. 

Follow Us:
Download App:
  • android
  • ios