Asianet Suvarna News Asianet Suvarna News

ಸಾರ್ವಜನಿಕ ಸಾರಿಗೆ ಸಂಚಾರ ಯಾವಾಗ? ನಿತಿನ್ ಗಡ್ಕರಿ ಕೊಟ್ರು ಮಹತ್ವದ ಸುಳಿವು...!

ದೇಶಾದ್ಯಂತ ಲಾಕ್​ಡೌನ್​ ಮುಂದುವರಿದಿದ್ದು, ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಬಂದ್ ಆಗಿದೆ. ಇದೀಗ ಪುನಾರಂಭವಾಗುವ ಬಗ್ಗೆ ಕೇಂದ್ರ ಸಾರಿಗೆ ಸಚಿವ ಮಹತ್ವದ ಸುಳಿವು ನೀಡಿದ್ದಾರೆ. 

Public Transport May Open Soon With Some Guidelines, Says Nitin Gadkari
Author
Bengaluru, First Published May 6, 2020, 7:39 PM IST
  • Facebook
  • Twitter
  • Whatsapp

ನವದೆಹಲಿ, (ಮೇ.06): ಶೀಘ್ರದಲ್ಲೇ ಸಾರ್ವಜನಿಕ ಸಾರಿಗೆ ಆರಂಭವಾಗುವ ಸಾಧ್ಯತೆ ಇದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಇಂದು (ಬುಧವಾರ) ವಿಡಿಯೋ ಕಾನ್ಫರೆನ್ಸ್ ಮೂಲಕ ಬಸ್ ಮತ್ತು ಕಾರು ಮಾಲೀಕರನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಸಿದ ನಂತರ ದೇಶದಲ್ಲಿ ಸಾರ್ವಜನಿಕ ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿದ್ದು, ಸುಮಾರು ಒಂದೂವರೆ ತಿಂಗಳ ನಂತರ ಶೀಘ್ರದಲ್ಲೇ ಸಾರ್ವಜನಿಕ ಸಾರಿಗೆ ಆರಂಭವಾಗಲಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು.

ಕಷ್ಟದಲ್ಲಿರುವವರಿಗೆ BSY ಸಹಾಯಧನ, ಕೋಟಿಗೊಬ್ಬ ಹಾಡು ಮೆಚ್ಚಿನ ಜನ: ಮೇ.06ರ ಟಾಪ್ 10 ಸುದ್ದಿ!

ಸಾರಿಗೆ ಮತ್ತು ಹೆದ್ದಾರಿ ಕಾರ್ಯಾಚರಣೆ ವೇಳೆ ಸಾಮಾಜಿಕ ಅಂತರ ಮತ್ತು ಕೈತೊಳೆಯುವುದು, ಸಾನಿಟೈಜಿಂಗ್ ಹಾಗೂ ಮಾಸ್ಕ್ ಧರಿಸುವುದು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯ ಇದೆ ಸ್ಪಷ್ಟಪಡಿಸಿದರು.

ದೇಶದಲ್ಲಿ ಇದೀಗ 3.0 ಲಾಕ್​ಡೌನ್ ಜಾರಿಯಲ್ಲಿದ್ದು, ಕೆಲವೊಂದು ಸಡಿಲಿಕೆ ನೀಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ನೀಡುವ ಮಾರ್ಗಸೂಚಿಗಳೊಂದಿಗೆ ಆದಷ್ಟು ಬೇಗ ಬಸ್​​ ಪ್ರಾರಂಭಿಸುವ ಪ್ರಯತ್ನ ನಡೆಸಲಾಗುವುದು. ದೇಶ ಹಾಗೂ ವಿದೇಶದ ವಿವಿಧ ಕಡೆ ಜನರು ಸಿಲುಕಿಕೊಂಡಿರುವ ಕಾರಣ ಸಾರಿಗೆ ಪ್ರಾರಂಭ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಲಾಕ್ ಡೌನ್ ನಿಂದಾಗಿ ಸಾರಿಗೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸುತ್ತಿರುವುದಾಗಿ ಗಡ್ಕರಿ ತಿಳಿಸಿದರು.

Follow Us:
Download App:
  • android
  • ios