Asianet Suvarna News Asianet Suvarna News

India Fights Corona| ಒಂದೂ ಮುಕ್ಕಾಲು ವರ್ಷ ಬಳಿಕ ಬರೀ 8,500 ಕೇಸ್‌!

* 538 ದಿನಗಳ ಕನಿಷ್ಠ ಮಟ್ಟಕ್ಕೆ ಕುಸಿದ ಕೋವಿಡ್‌

* ಒಂದೂ ಮುಕ್ಕಾಲು ವರ್ಷ ಬಳಿಕ ಬರೀ 8,500 ಕೇಸ್‌

* ದೇಶದಲ್ಲಿ ಮತ್ತಷ್ಟು ತಗ್ಗಿದ ಕೊರೋನಾ ಅಬ್ಬರ

India logs 8,488 COVID cases, 249 deaths in 24 hrs Lowest Number Of Infections Recorded In 538 Days pod
Author
Bangalore, First Published Nov 23, 2021, 5:00 AM IST

ನವದæಹಲಿ(ನ.23): ದೇಶದಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳ (Covid Cases In India) ಸಂಖ್ಯೆ ಒಂದೂ ಮುಕ್ಕಾಲು ವರ್ಷಗಳಲ್ಲೇ ಕನಿಷ್ಠಕ್ಕಿಳಿದಿದೆ. ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ 8,488 ಹೊಸ ಪ್ರಕರಣಗಳು (New Covid Cases) ದಾಖಲಾಗಿವೆ. ಇದು 538 ದಿನಗಳಲ್ಲೇ ಕನಿಷ್ಠವಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.45 ಕೋಟಿಗೆ ತಲುಪಿದೆ.

ಇನ್ನು ಇದೇ ಅವಧಿಯಲ್ಲಿ 249 ಜನರು ಸೋಂಕಿಗೆ ಬಲಿಯಾಗಿದ್ದು ಒಟ್ಟು ಸಾವಿನ (Death) ಸಂಖ್ಯೆ 4.65 ಲಕ್ಷಕ್ಕೆ ಏರಿಕೆಯಾಗಿದೆ. ಸತತ 45 ದಿನಗಳಿಂದ ದೈನಂದಿನ ಪ್ರಕರಣಗಳು 2 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 4,271 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ ದೇಶದಲ್ಲಿ 116.87 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

ಕಮಲ್‌ ಹಾಸನ್‌ಗೆ ಕೊರೊನಾ ಪಾಸಿಟಿವ್: ಆಸ್ಪತ್ರೆಗೆ ದಾಖಲು

 

ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ (Kamal Haasan) ಅವರಿಗೆ  ಕೊರೊನಾ ವೈರಸ್ (coronavirus) ದೃಢಪಟ್ಟಿದ್ದು, ಈ ಬಗ್ಗೆ ಅವರೇ ಟ್ವೀಟ್  ಮಾಡಿದ್ದಾರೆ. ಅಮೆರಿಕದಿಂದ ಹಿಂದಿರುಗಿದ ನಂತರ ಸ್ವಲ್ಪ ಕೆಮ್ಮು (cough) ಕಾಣಿಸಿಕೊಂಡಿತ್ತು. ನಂತರ  ಕೋವಿಡ್ ಪರೀಕ್ಷೆಗೊಳಗಾಗಿದ್ದು ಕೊರೊನಾ ಪಾಸಿಟಿವ್ ಆಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗಷ್ಟೇ 67ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕಮಲ್ ಹಾಸನ್ ಅವರು ಆಸ್ಪತ್ರೆಯಲ್ಲಿ ಸ್ವತಃ ಐಸೋಲೇಟ್ (Isolated) ಆಗಿದ್ದಾರೆ. ಈ ಸಾಂಕ್ರಾಮಿಕ ರೋಗವು ಇನ್ನೂ ಕೊನೆಗೊಂಡಿಲ್ಲ. ದಯವಿಟ್ಟು ಎಲ್ಲರೂ ಕಾಳಜಿ ವಹಿಸುವಂತೆ ಅಭಿಮಾನಿಗಳಿಗೆ ಕಮಲ್ ಹೇಳಿದ್ದಾರೆ.

ಕಮಲ್ ಹಾಸನ್ ಸಾಕಷ್ಟು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದು, ಪ್ರಸ್ತುತ ತಮಿಳಿನ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Tamil) ಐದನೇ ಸೀಸನ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಹೊಸ ಬಟ್ಟೆ ಉದ್ಯಮದ ಶಾಪ್​ ಉದ್ಘಾಟನೆಗಾಗಿ ಕಮಲ್ ಅಮೆರಿಕಕ್ಕೆ ತೆರಳಿದ್ದರು. ಕಮಲ್ ಹೌಸ್ ಆಫ್ ಖದ್ದರ್ (KH House of Khaddar) ಎಂಬ ತಮ್ಮ ಜವಳಿ ಮಳಿಗೆಯನ್ನು ಅಮೆರಿಕದಲ್ಲಿ (United States) ಪ್ರಾರಂಭಿಸಿದ್ದಾರೆ. 

'ವಿಕ್ರಮ್‌'ನಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಜಿಲ್!

ಕಮಲ್ ಹಾಸನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಎರಡು ವಾರಗಳ ನಂತರ ಅವರಿಗೆ ಕೊರೊನಾ ದೃಢಪಟ್ಟಿದೆ. ಮುಖ್ಯವಾಗಿ​ ಅವರು ಕಳೆದ ಮಾರ್ಚ್​ನಲ್ಲಿಯೇ ಕೋವಿಡ್​ ಮೊದಲ ಡೋಸ್​ ಲಸಿಕೆ ಪಡೆದಿದ್ದರು. ಎರಡು ಡೋಸ್​ ಲಸಿಕೆ ಪಡೆದ ಬಳಿಕವೂ ಅವರಿಗೆ ಸೋಂಕು ದೃಢಪಟ್ಟಿದೆ. ಕಮಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂಬರುವ ಸಿನಿಮಾ 'ವಿಕ್ರಮ್‌' (Vikram) ಚಿತ್ರದ  ಫಸ್ಟ್ ಲುಕ್‌ನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಚಿತ್ರಕ್ಕೆ ಲೋಕೇಶ್ ಕನಗರಾಜ್ (Lokesh Kanagaraj) ಆಕ್ಷನ್ ಕಟ್ ಹೇಳಿದ್ದು, ಇದು ಕಮಲ್ ಹಾಸನ್ ಅವರ 232ನೇ ಚಿತ್ರವಾಗಿದೆ. ಈ ಸಿನಿಮಾದಲ್ಲಿ ವಿಜಯ್​ ಸೇತುಪತಿ (Vijay Sethupati), ,ಮಲಯಾಳಂ ನಟ ಫಹಾದ್​ ಫಾಸಿಲ್ (Fahadh Faasil) ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.

2019ರಲ್ಲಿ ಲೋಕೇಶ್‌ 'ವಿಕ್ರಮ್' ಚಿತ್ರಕತೆಯನ್ನು ಕಮಲ್ ಹಾಸನ್‌ಗೆ ಹೇಳಿದ್ದರಂತೆ ಕೊನೆಗೂ ಗ್ರೀನ್ ಸಿಗ್ನಲ್ ಪಡೆದುಕೊಂಡು ಚಿತ್ರಕತೆ ಮುಂದೆ ಸಾಗಿದೆ. ಚಿತ್ರದ ಪ್ರಮೋಷನ್ ಟೀಸರ್‌ನ ಕಮಲ್ 66ನೇ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು. ಮೂವರ ಮುಖದ ಮೇಲೆ ರಕ್ತದ ಕಲೆ ನೋಡಿ ಇದು ಪಕ್ಕಾ ಮಾಫಿಯಾ ಸಿನಿಮಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.

Follow Us:
Download App:
  • android
  • ios