06:14 AM (IST) Oct 19

India Latest News Live 19 October 2026 ಸೌರವ್ ದಾಸ್‌, ರಾಂಕಾ ಬಿಡುಗಡೆ ಬಳಿಕ ಸಿಜೆಪಿಯಿಂದ ಹೊಸ ರಣತಂತ್ರ - ಅಭಿಜೀತ್‌ ದೀಪ್ಕೆ

ನ್ಯಾಯಾಂಗ ಬಂಧನದಲ್ಲಿರುವ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶೋಕ್ ರಾಂಕಾ ಬಿಡುಗಡೆಯಾದ ಬಳಿಕ ಹೊಸ ರಣತಂತ್ರ ರೂಪಿಸುವುದಾಗಿ ಅಭಿಜೀತ್‌ ದೀಪ್ಕೆ ತಿಳಿಸಿದ್ದಾರೆ. ಜಂತರ್ ಮಂತರ್ ಪ್ರವೇಶಿಸಿದ ಆರೋಪದ ಮೇಲೆ ಬಂಧಿತರಾಗಿರುವ ಇವರ ಜಾಮೀನು ಶ್ಯೂರಿಟಿಗಳನ್ನು ತಿರಸ್ಕರಿಸಲಾಗಿದೆ.
Read Full Story
06:09 AM (IST) Oct 19

India Latest News Live 19 October 2026 ಚೀನಾದ ಸಹಯೋಗದೊಂದಿಗೆ ಚಂದ್ರನೂರಿಗೆ ಹೊರಟ ಪಾಕಿಸ್ತಾನ; 2035ಕ್ಕೆ ಚಂದ್ರಯಾನದ ಗುರಿ

ಆರ್ಥಿಕ ಸಂಕಷ್ಟದ ನಡುವೆಯೂ ಪಾಕಿಸ್ತಾನವು ಚೀನಾದ ನೆರವಿನೊಂದಿಗೆ 2035ರ ವೇಳೆಗೆ ಚಂದ್ರಯಾನ ಕೈಗೊಳ್ಳುವ ಗುರಿ ಹೊಂದಿದೆ. ಇತ್ತ ನವದೆಹಲಿಯ ದಸರಾ ಮಹೋತ್ಸವದಲ್ಲಿ ರಾವಣನ ಜೊತೆ 30 ಅಡಿ ಎತ್ತರದ ಜಿರಳೆ ದಹನ ಮಾಡುತ್ತಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
Read Full Story
05:39 AM (IST) Oct 19

India Latest News Live 19 October 2026 ಬೀದಿ ಬೀದಿಗಳಲ್ಲಿ ಕಿಡಿಗೇಡಿಗಳ ಆರ್ಭಟ ದಂಗೆಯಿಂದ ಫ್ರಾನ್ಸ್‌ ಧಗಧಗ; ಹಳಿ ತಪ್ಪಿದ ಹೋರಾಟ

ಫ್ರಾನ್ಸ್‌ನಲ್ಲಿ ಶಿಕ್ಷಣ ಮತ್ತು ಮೂಲಸೌಕರ್ಯ ಕೊರತೆ ಖಂಡಿಸಿ ವಿದ್ಯಾರ್ಥಿಗಳು ಆರಂಭಿಸಿದ ಪ್ರತಿಭಟನೆಯನ್ನು ಅಕ್ರಮ ವಲಸಿಗರು ಹೈಜಾಕ್ ಮಾಡಿದ್ದಾರೆ. ಇದರಿಂದಾಗಿ ದೇಶಾದ್ಯಂತ ಭಾರೀ ಹಿಂಸಾಚಾರ, ಲೂಟಿ ನಡೆದಿದ್ದು, 140 ವರ್ಷಗಳ ಹಳೆಯ ಟೌನ್‌ಹಾಲ್ ಬೆಂಕಿಗಾಹುತಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, 1800ಕ್ಕೂ ಹೆಚ್ಚು ದಂಗೆಕೋರರನ್ನು ಬಂಧಿಸಲಾಗಿದೆ.
Read Full Story