07:25 AM (IST) Oct 17

India Latest News Live 17 October 2026 ಇನ್ಮುಂದೆ ರಾತ್ರಿ ಬಾಡಿಗೆಗೆ ಸಿಗಲಿದೆ ಸೂರ್ಯನ ಬೆಳಕು; ಸ್ಕೈರೂಟ್ ಜೊತೆ ಅಮೆರಿಕಾ ಒಪ್ಪಂದ

ರಾತ್ರಿ ವೇಳೆಯೂ ಭೂಮಿಗೆ ಸೂರ್ಯನ ಬೆಳಕನ್ನು ಒದಗಿಸುವ ವಿನೂತನ ಯೋಜನೆಗಾಗಿ ಅಮೆರಿಕದ ರಿಫ್ಲೆಕ್ಟ್‌ ಆರ್ಬಿಟಲ್‌ ಮತ್ತು ಹೈದರಾಬಾದ್‌ನ ಸ್ಕೈರೂಟ್‌ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. ಸ್ಕೈರೂಟ್‌ನ ವಿಕ್ರಂ ರಾಕೆಟ್‌ ಮೂಲಕ 2 ಉಪಗ್ರಹಗಳನ್ನು ಉಡ್ಡಯನ ಮಾಡಲಿದ್ದು, ಇವು 5 ಕಿ.ಮೀ. ವ್ಯಾಪ್ತಿಯಲ್ಲಿ ಬೆಳಕು ನೀಡಲಿವೆ.

Read Full Story
07:12 AM (IST) Oct 17

India Latest News Live 17 October 2026 ಭಾರತದ ಬಗ್ಗೆ ಎಲಾನ್ ಮಸ್ಕ್‌ ವಾದ ಅರ್ಥಹೀನ - ರಾಜೀವ್ ಚಂದ್ರಶೇಖರ್

ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಸಂಸ್ಥೆಯು ಭಾರತದಲ್ಲಿ ಕಾರ್ಯನಿರ್ವಹಿಸಲು ಇತರ ದೇಶಗಳಂತೆ ಭದ್ರತಾ ಷರತ್ತುಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ಜಿಯೋ ಪರ ಒಲವು ತೋರಲಾಗುತ್ತಿದೆ ಎಂಬ ಮಸ್ಕ್ ಅವರ ಆರೋಪವನ್ನು ತಳ್ಳಿಹಾಕಿರುವ ರಾಜೀವ್ ಚಂದ್ರಶೇಖರ್, ಸಾಮಾಜಿಕ ಜಾಲತಾಣದ ಪ್ರಭಾವದಿಂದ ಭಾರತದ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story
07:05 AM (IST) Oct 17

India Latest News Live 17 October 2026 ಉಪಗ್ರಹ ಇಂಟರ್ನೆಟ್ ಸಮರ - ಎಲಾನ್ ಮಸ್ಕ್‌ ಟೀಕೆಗೆ ಅಂಬಾನಿ ಕೊಟ್ಟ ಖಡಕ್ ಎಚ್ಚರಿಕೆ ಏನು?

ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಕುರಿತು ಎಲಾನ್ ಮಸ್ಕ್ ಅವರ ಟೀಕೆಗಳಿಗೆ ರಿಲಯನ್ಸ್ ಜಿಯೋ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಸ್ಟಾರ್‌ಲಿಂಕ್ ಸೇರಿದಂತೆ ಎಲ್ಲರ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ಹೇಳಿರುವ ಜಿಯೋ, ಪ್ರತಿಯೊಬ್ಬರೂ ಭಾರತೀಯ ಕಾನೂನುಗಳಿಗೆ ಬದ್ಧವಾಗಿರಬೇಕು ಎಂದು ಸ್ಪಷ್ಟಪಡಿಸಿದೆ.
Read Full Story