- Home
- News
- India News
- India Latest News Live: TVK Astrologer - ಭವಿಷ್ಯ ನುಡಿದಿದ್ದ ಜ್ಯೋತಿಷಿ ಈಗ ವಿಜಯ್‌ಗೆ ವಿಶೇಷ ಕರ್ತವ್ಯಾಧಿಕಾರಿ!
LIVE NOW
India Latest News Live: TVK Astrologer - ಭವಿಷ್ಯ ನುಡಿದಿದ್ದ ಜ್ಯೋತಿಷಿ ಈಗ ವಿಜಯ್‌ಗೆ ವಿಶೇಷ ಕರ್ತವ್ಯಾಧಿಕಾರಿ!

ಸಾರಾಂಶ
ನವದೆಹಲಿ: ದೇಶದ ಕೃಷಿ ಮತ್ತು ಆರ್ಥಿಕತೆಯ ಮೂಲವಾದ ಮುಂಗಾರು ಮಾರುತಗಳುಈ ವಾರದ ಕೊನೆಯಲ್ಲಿ (ಮೇ 17) ದಕ್ಷಿಣ ಬಂಗಾಳದ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್, ನಿಕೋಬಾರ್ ದ್ವೀಪಗಳಿಗೆ ಆಗಮಿಸುವ ಸಾಧ್ಯತೆಯಿದೆ. ವಾಡಿಕೆಯಂತೆ ಇದು ಮೇ 22ಕ್ಕೆ ಅಂಡಮಾನ್ ಪ್ರವೇಶಿಸುತ್ತದೆ. ಆದರೆ ಈ ಬಾರಿ ಸುಮಾರು 5-6 ದಿನ ಮುಂಚಿತವಾಗಿ ಆಗಮಿಸಲಿದೆ. ಸಾಮಾನ್ಯವಾಗಿ ಜೂ.1ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುತ್ತದೆ. ಈ ಮೂಲಕ 4 ತಿಂಗಳ ಮಳೆಗಾಲ ಆರಂಭವಾಗುತ್ತದೆ.
Add Asianetnews Kannada as a Preferred Source

08:07 AM (IST) May 13
India Latest News Live 13 May 2026TVK Astrologer - ಭವಿಷ್ಯ ನುಡಿದಿದ್ದ ಜ್ಯೋತಿಷಿ ಈಗ ವಿಜಯ್‌ಗೆ ವಿಶೇಷ ಕರ್ತವ್ಯಾಧಿಕಾರಿ!
ಟಿವಿಕೆ ಪಕ್ಷದ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ಅವರನ್ನು ನಟ ವಿಜಯ್ ತಮ್ಮ ವಿಶೇಷ ರಾಜಕೀಯ ಕರ್ತವ್ಯಾಧಿಕಾರಿಯಾಗಿ ನೇಮಿಸಿದ್ದಾರೆ. ಈ ಹಿಂದೆ ಜಯಲಲಿತಾ, ಸ್ಟಾಲಿನ್‌ರಂತಹ ಪ್ರಮುಖರ ಬಗ್ಗೆಯೂ ಇವರು ನಿಖರ ಭವಿಷ್ಯ ಹೇಳಿದ್ದು, ಈಗ ವಿಜಯ್‌ಗೆ ಸಲಹೆಗಾರರಾಗಿದ್ದಾರೆ.
Read Full Story 08:01 AM (IST) May 13
India Latest News Live 13 May 2026ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೋದರ ಪ್ರತೀಕ್ ಯಾದವ್ ನಿಗೂಢ ಸಾವು
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಸೋದರ, 38 ವರ್ಷದ ಪ್ರತೀಕ್ ಯಾದವ್ ಲಕ್ನೋದಲ್ಲಿ ನಿಧನರಾಗಿದ್ದಾರೆ. ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಯಿದೆ.
Read Full Story 07:32 AM (IST) May 13
India Latest News Live 13 May 2026Gig Workers - 90,000 ಡೆಲಿವರಿ ಸಿಬ್ಬಂದಿಗೆ ಭರ್ಜರಿ ಕೊಡುಗೆ ಘೋಷಿಸಿದ ಅಮೆಜಾನ್ ಇಂಡಿಯಾ
ಅಮೆಜಾನ್ ಇಂಡಿಯಾ ತನ್ನ 90,000ಕ್ಕೂ ಹೆಚ್ಚು ವಿತರಣಾ ಸಿಬ್ಬಂದಿಗಾಗಿ ಸಮಗ್ರ ಆರೋಗ್ಯ ಮತ್ತು ವಿಮಾ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯು ಹೆಚ್ಚುವರಿ ಮೆಡಿಕ್ಲೈಮ್, ಅಪಘಾತ ವಿಮೆ, ಮತ್ತು ಓಪಿಡಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಿಬ್ಬಂದಿಗೆ ಸಾಮಾಜಿಕ ಭದ್ರತೆ ನೀಡುವ ಗುರಿ ಹೊಂದಿದೆ.
Read Full Story